ಧಾರವಾಡ: ಕೊರೊನಾದಿಂದ ಶಾಲೆ ಬಾಗಿಲು ಮುಚ್ಚಿ ಎರಡು ವರ್ಷ ಆಯ್ತು. ಸ್ಟೂಡೆಂಟ್ಸ್‌ಗಳಿಗೆ ಸ್ಕೂಲ್ ಇಲ್ದೇ ಮನೆಯಲ್ಲೇ ಇದ್ದು ಇದ್ದು ಬೋರ್ ಆಗಿದೆ. ಕೆಲವರು ಅದು ಇದು ಕೆಲಸ ಮಾಡ್ತಾ ಇದ್ರೆ, ಮತ್ತೆ ಕೆಲ ವಿದ್ಯಾರ್ಥಿಗಳು ಮೊಬೈಲ್ ಟಿವಿ ಆಟ ಅಂತ ಫುಲ್ ಬ್ಯುಸಿಯಾಗಿದ್ದಾರೆ. ಆದ್ರೆ ಇಲ್ಲೊಬ್ಬ ವಿದ್ಯಾರ್ಥಿ ಸ್ಕೂಲ್‌ಗೆ ರಜೆ ಇದೆ ಅಂತ ಕೈಕಟ್ಟಿ ಕೂರದೆ ಸಾಧನೆ ಮಾಡಿದ್ದಾನೆ. ರೈತರಿಗೆ ನೆರವಾಗಿದ್ದಾನೆ.
ಧಾರವಾಡದ ನವಲೂರ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಎಸ್ಎಲ್‌ಸಿ ಮುಗಿಸಿದ ಬಸವರಾಜ ಜಾಪಣ್ಣವರ ಎಂಬ ವಿದ್ಯಾರ್ಥಿ ಸೌರ ವಿದ್ಯುತ್ ಚಾಲಿತ ಕಳೆ ಕತ್ತರಿಸುವ ಯಂತ್ರ ಆವಿಷ್ಕಾರಿಸಿದ್ದಾನೆ. ಅಲ್ಯೂಮಿನಿಯಂ ಪೈಪ್, ಸೋಲಾರ್ ಪ್ಯಾನಲ್, ಸೈಕಲ್ ರಿಮ್, ಬ್ಯಾಟರಿ ಬಳಸಿ ಕೇವಲ ಹತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಯಂತ್ರ ತಯಾರಿಸಿದ್ದಾನೆ.
ಬಸವರಾಜ ಆವಿಷ್ಕರಿಸಿರೋ ಯಂತ್ರ ತುಂಬಾ ಚಿಕ್ಕದಾಗಿರೋ ಕಾರಣಕ್ಕೆ ಬೆಳೆಗೆ ಯಾವುದೇ ತೊಂದರೆಯಾಗೋದಿಲ್ಲ. ಸೋಲರ್ ಮೂಲಕ ಬ್ಯಾಟರಿ ಚಾರ್ಜ್ ಆಗಿ ಮೊಟರ್ ತಿರುಗುತ್ತೆ. ಯಂತ್ರಕ್ಕೆ ಅಳವಡಿಸಿರೋ ಬ್ಲೆಡ್‌ಗಳು ಕಳೆಯನ್ನು ಕತ್ತರಿಸುತ್ತೆ. ಎತ್ತುಗಳಿಗೆ, ಟ್ರ್ಯಾಕ್ಟರ್‌ಗಳಿಂತ ಇದರ ವೆಚ್ಚ ಬಹಳ ಕಡಿಮೆ ಇದ್ದು, ರೈತರಿಗೆ ಸಾಕಷ್ಟು ಸಹಕಾರಿ ಆಗಲಿದೆ. ಮಗನ ಈ ಸಾಧನೆ ನೋಡಿ ತಂದೆ ಮಲ್ಲಪ್ಪ ಭಾವುಕರಾಗಿದ್ದಾರೆ.
ಒಟ್ಟಾರೆಯಾಗಿ ಸ್ಕೂಲ್ ಇಲ್ಲ ಅಂತ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳದೆೇ ಅಪ್ಪನ ಕೃಷಿ ಕೆಲಸಕ್ಕೆ ಸಹಾಯವಾಗಲಿ ಅಂತ ಕೃಷಿ ಯಂತ್ರ ತಯಾರಿಸಿ ಸಾಧನೆ ಮಾಡಿದ್ದಾನೆ. ಈ ಯಂತ್ರ ನೋಡೋಕೆ ಸಿಂಪಲ್ ಆಗಿದ್ರೂ ಇದನ್ನ ಮತ್ತಷ್ಟು ಅಪ್ಡೆಟ್ ಮಾಡಿದ್ರೆ ರೈತರಿಗೆ ಸಾಕಷ್ಟು ಅನುಕೂಲ ಆಗಲಿದೆ.
ಇದನ್ನೂ ಓದಿ: ಉಯ್ಯಾಲೆಯೇ ನೇಣು ಕುಣಿಕೆಯಾಗಿ ಬಾಲಕಿ ಸಾವು; ಮತ್ತೋರ್ವ ಬಾಲಕಿ ಸ್ಥಿತಿ ಗಂಭೀರ
Published On - 9:46 am, Wed, 18 August 21