ಉಯ್ಯಾಲೆಯೇ ನೇಣು ಕುಣಿಕೆಯಾಗಿ ಬಾಲಕಿ ಸಾವು; ಮತ್ತೋರ್ವ ಬಾಲಕಿ ಸ್ಥಿತಿ ಗಂಭೀರ

ಪೆದ್ದೂರು ಗ್ರಾಮದ ಅಶೋಕರೆಡ್ಡಿ ಎಂಬುವವರ ಮಗಳಾದ ಮೇಘನಾ(12) ಸಾವನ್ನಪ್ಪಿದ್ದು, ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ದೇವಿಶ್ರೀ ಎಂಬ ಮತ್ತೋರ್ವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಾಲಕಿಯ ಸ್ಥಿತಿ ಗಂಭೀರವಾಗಿದೆ.

ಉಯ್ಯಾಲೆಯೇ ನೇಣು ಕುಣಿಕೆಯಾಗಿ ಬಾಲಕಿ ಸಾವು; ಮತ್ತೋರ್ವ ಬಾಲಕಿ ಸ್ಥಿತಿ ಗಂಭೀರ
ಉಯ್ಯಾಲೆಯೇ ನೇಣು ಕುಣಿಕೆಯಾಗಿ ಬಾಲಕಿ ಸಾವು
Follow us
TV9 Web
| Updated By: preethi shettigar

Updated on: Aug 18, 2021 | 9:30 AM

ಕೋಲಾರ: ಸೀರೆಯನ್ನು ಉಯ್ಯಾಲೆಯಾಗಿ ಹಾಕಿಕೊಂಡು ಆಡುತ್ತಿದ್ದ ಬಾಲಕಿಯೋರ್ವಳು ಮೃತಪಟ್ಟ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ನಡೆದಿದೆ. ಉಯ್ಯಾಲೆ ಆಡುತ್ತಿದ್ ಇಬ್ಬರು ಹೆಣ್ಣು ಮಕ್ಕಳಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, ಮತ್ತೋರ್ವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೆದ್ದೂರು ಗ್ರಾಮದ ಅಶೋಕರೆಡ್ಡಿ ಎಂಬುವವರ ಮಗಳಾದ ಮೇಘನಾ(12) ಸಾವನ್ನಪ್ಪಿದ್ದು, ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ದೇವಿಶ್ರೀ ಎಂಬ ಮತ್ತೋರ್ವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಾಲಕಿಯ ಸ್ಥಿತಿ ಗಂಭೀರವಾಗಿದೆ.

ಪೆದ್ದೂರು ಗ್ರಾಮದ ಮೃತ ಮೇಘನಾ ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಯಮನೂರು ಗ್ರಾಮದ ಸೋಮಪ್ಪ ಎಂಬುವವರ ಮಗಳಾದ ದೇವಿಶ್ರೀ ಪೆದ್ದೂರು ಗ್ರಾಮದ ತಮ್ಮ ತಾತ ಚಂಗಲರಾಯಪ್ಪ ಮತ್ತು ಅಜ್ಜಿ ಲಕ್ಷ್ಮಮ್ಮ ಮನೆಯಲ್ಲಿ ಇದ್ದುಕೊಂಡು ನಂಗಲಿ ಆರ್.ಎಂ.ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆರನೆಯ ತರಗತಿ ಓದುತ್ತಿದ್ದರು.

ಶಾಲೆಗೆ ರಜೆ ಇದ್ದ ಕಾರಣ, ಮೇಘನಾ ಮತ್ತು ದೇವಶ್ರೀ ಮನೆಯ ಚಾವಣಿಯ ಕಬ್ಬಿಣದ ಕೊಂಡಿಗಳಿಗೆ ಎರಡು ಸೀರೆಗಳನ್ನು ಪಕ್ಕ ಪಕ್ಕದಲ್ಲಿ ಕಟ್ಟಿ ಉಯ್ಯಾಲೆಯಾಡುತ್ತಿದ್ದರು. ಈ ವೇಳೆ ಎರಡೂ ಸೀರೆಗಳು ಆಕಸ್ಮಿಕವಾಗಿ ಒಂದರಲ್ಲಿ ಒಂದು ಸುತ್ತಿಕೊಂಡಿದ್ದರಿಂದ ಒಂದು ಸೀರೆಯ ಉಯ್ಯಾಲೆಯಲ್ಲಿದ್ದ ಮೇಘನಾ ಕುತ್ತಿಗೆಗೆ ಗಟ್ಟಿಯಾಗಿ ಸುತ್ತಿಕೊಂಡು ಉಸಿರು ಕಟ್ಟಿ ಸಾವನ್ನಪ್ಪಿದ್ದಾರೆ.

ಮತ್ತೊಂದು ಸೀರೆಯಲ್ಲಿ ದೇವಿಶ್ರೀ ಕತ್ತಿಗೆ ಸೀರೆ ಸುತ್ತಿಕೊಂಡು ಕಿರುಚಾಡುತ್ತಿದ್ದಾಗ ಮನೆಯಲ್ಲಿದ್ದ ಅಜ್ಜಿ ಮತ್ತು ತಾತಾ ಬಂದು ಸೀರೆಯನ್ನು ಬಿಡಿಸಿದ್ದಾರೆ. ದೇವಿಶ್ರೀ ಉಸಿರಾಟದಲ್ಲಿ ತೊಂದರೆಯಾಗಿದ್ದು, ಕೋಲಾರ ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಮೇಘನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವರದಿ : ರಾಜೇಂದ್ರಸಿಂಹ

ಇದನ್ನೂ ಓದಿ: ಧ್ವಜಸ್ತಂಭ ನೆಡುವ ವೇಳೆ ಮೃತಪಟ್ಟ ವಿದ್ಯಾರ್ಥಿ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಿದ ಬಿ ಸಿ ನಾಗೇಶ್

ಹಾವೇರಿ: ಕಾಲುವೆಯಲ್ಲಿದ್ದ ಕೊಳೆತ ಮೃತದೇಹ ಮೇಲೆತ್ತಲು ಎಲ್ಲರೂ ಹಿಂದೇಟು ಹಾಕುತ್ತಿದ್ದಾಗ ಸ್ವತಃ ಪಿಎಸ್​ಐ ಕಾಲುವೆಗೆ ಜಿಗಿದರು!