AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ 20 ಕೆಜಿ ಅಂಗರ್​ಗ್ರೀಸ್ ವಶ; ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಮೃತ

ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ಪೊಲೀಸರು ಒಟ್ಟು 20 ಕೆಜಿ ಅಂಬರ್‌ಗ್ರಿಸ್​ನ್ನು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ 20 ಕೆಜಿ ಅಂಗರ್​ಗ್ರೀಸ್ ವಶ; ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಮೃತ
ತಿಮಿಂಗಿಲದ ವಾಂತಿ
TV9 Web
| Edited By: |

Updated on:Aug 17, 2021 | 11:03 PM

Share

ಬೆಂಗಳೂರು: ಖಚಿತ ಮಾಹಿತಿ ಆಧರಿಸಿ ನಗರದ ಎರಡು ಕಡೆ ದಾಳಿ ಮಾಡಿರುವ ಪೊಲೀಸರು 20 ಕೋಟಿ ಮೌಲ್ಯದ ಅಂಬರ್‌ಗ್ರಿಸ್​ನ್ನು ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ಎನ್ ಆರ್ ರಸ್ತೆಯ ಖಾಸಗಿ ವಸತಿ ಗೃಹದ ಕೊಠಡಿಯೊಂದರಲ್ಲಿ ಸಂಗ್ರಹಿಸಲಾಗಿದ್ದ 2.5 ಕೆ.ಜಿ ಅಂಬರ್‌ಗ್ರಿಸ್​ನ್ನು ಎಸ್‌.ಜೆ.ಪಾರ್ಕ್‌ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜತೆಗೆ ಹೊಸಕೋಟೆಯಲ್ಲೂ ಅಂಬರ್‌ಗ್ರಿಸ್ ಸಂಗ್ರಹ ಬಗ್ಗೆ ಮಾಹಿತಿ ಪಡೆದ ಪೊಲೀಸರು 17.5 ಕೆಜಿ ಅಂಬರ್‌ಗ್ರಿಸ್​ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈಮೂಲಕ ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ಪೊಲೀಸರು ಒಟ್ಟು 20 ಕೆಜಿ ಅಂಬರ್‌ಗ್ರಿಸ್​ನ್ನು ವಶಕ್ಕೆ ಪಡೆದಿದ್ದಾರೆ.

ಕೋಲಾರದಲ್ಲಿ ಉಸಿರುಗಟ್ಟಿ ಬಾಲಕಿ ಸಾವು ಕೋಲಾರ: ಸೀರೆಯಲ್ಲಿ‌ ಉಯ್ಯಾಲೆ ಮಾಡಿಕೊಂಡು ಆಡುತ್ತಿದ್ದ ವೇಳೆ ಕುತ್ತಿಗೆ ಬಿಗಿದು ಕೋಲಾರ ಜಿಲ್ಲೆ‌ ಮುಳಬಾಗಲು ತಾಲೂಕಿನ ಪೆದ್ದೂರು ಗ್ರಾಮದಲ್ಲಿ ಉಸಿರುಗಟ್ಟಿ ಬಾಲಕಿಯೋರ್ವಳು ಸಾವನ್ನಪ್ಪಿದ್ದಾಳೆ. ಮತ್ತೋರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ನಂಗಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಗುಂಡು ಹಾರಿಸಿ ಬಟ್ಟೆ ವ್ಯಾಪಾರಿಯ ಹತ್ಯೆ ಚಿತ್ರದುರ್ಗ: ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ‌ ಗುಂಡು ಹಾರಿಸಿ ವ್ಯಾಪಾರಿಯೋರ್ವನ ಹತ್ಯೆ ಮಾಡಲಾಗಿದೆ. ಖಾಸಗಿ ಟೆಕ್ಸ್ ಟೈಲ್ಸ್ ಮಾಲೀಕ ಮೂಲಸಿಂಗ್(50) ಎಂಬಾತನೇ ಹತ್ಯೆಗೀಡಾದ ದುರ್ದೈವಿ. ಬಟ್ಟೆ ಅಂಗಡಿ ಬಳಿ ವ್ಯಾಪಾರಿಯ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಘಟನಾ ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ, ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: 

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗೆ ಜಯ: ಜಮ್ಮು ಕಾಶ್ಮೀರದಲ್ಲಿ ಕಟ್ಟೆಚ್ಚರ, ಕಾದು ನೋಡುವ ತಂತ್ರ ಅನುಸರಿಸಲು ಭಾರತ ನಿರ್ಧಾರ

ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್​ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್​ ಉಗ್ರರು; ಮಹಿಳೆಯರಿಗೂ ಆಹ್ವಾನ

(Bengaluru police detained 20 kg of amber grice today)

Published On - 9:33 pm, Tue, 17 August 21

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!