ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್​ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್​ ಉಗ್ರರು; ಮಹಿಳೆಯರಿಗೂ ಆಹ್ವಾನ

Afghanistan Crisis: ಅಫ್ಘಾನಿಸ್ತಾನದ ಅನೇಕ ನಾಗರಿಕರು ಭಯದಿಂದ ಈಗಾಗಲೇ ದೇಶ ತೊರೆದಿದ್ದಾರೆ. ಅಲ್ಲೇ ಉಳಿದವರಿಗೂ ಮಹಿಳಾ ಸುರಕ್ಷತೆ ಬಗ್ಗೆ ದಿಗಿಲು ಶುರುವಾಗಿದೆ. ಯಾಕೆಂದರೆ ತಾಲಿಬಾನಿಗಳ ಷರಿಯಾ ಆಡಳಿತದಲ್ಲಿ ಅತ್ಯಂತ ಹೆಚ್ಚು ಕಷ್ಟವಾಗುವುದು ಮಹಿಳೆಯರಿಗೆ.

ಕೆಲಸಕ್ಕೆ ಹಿಂದಿರುಗುವಂತೆ ಅಫ್ಘಾನ್​ ಸರ್ಕಾರಿ ನೌಕರರಿಗೆ ಕರೆಕೊಟ್ಟ ತಾಲಿಬಾನ್​ ಉಗ್ರರು; ಮಹಿಳೆಯರಿಗೂ ಆಹ್ವಾನ
ತಾಲಿಬಾನ್​ ಉಗ್ರರು (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Lakshmi Hegde

Updated on: Aug 17, 2021 | 3:49 PM

ಕಾಬೂಲ್​: ಅಫ್ಘಾನಿಸ್ತಾನ ಸರ್ಕಾರ  (Afghanistan Government)ಬೀಳುತ್ತಿದ್ದಂತೆ, ಆ ಸರ್ಕಾರಿ ನೌಕರರು ಅತಂತ್ರರಾಗಿದ್ದಾರೆ. ಜೀವ ಉಳಿದರೆ ಸಾಕು..ನೌಕರಿ ಆಮೇಲಿರಲಿ ಎಂದು ಅವಡುಗಚ್ಚಿ ಕುಳಿತಿದ್ದಾರೆ. ಹೀಗಿರುವಾ ತಾಲಿಬಾನ್​ ಉಗ್ರರು (Taliban Fighters) ಸರ್ಕಾರಿ ನೌಕರರಿಗೆ ಅಭಯಹಸ್ತ ನೀಡಿದ್ದಾರೆ. ಅಫ್ಘಾನಿಸ್ತಾನದ ಈ ಹಿಂದಿನ ಸರ್ಕಾರವಿದ್ದಾಗ ಕೆಲಸ ಮಾಡುತ್ತಿದ್ದ ನೌಕರರ ಮೇಲೆ ನಮಗೆ ಯಾವುದೇ ದ್ವೇಷವೂ ಇಲ್ಲ. ಅವರಿಗೆ ನಾವೇನೂ ತೊಂದರೆ ಮಾಡುವುದಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಸರ್ಕಾರಿ ನೌಕರರು ಬಂದು ಮತ್ತೆ ಕೆಲಸ ಶುರು ಮಾಡಿ ಎಂದೂ ಕರೆ ನೀಡಿದ್ದಾರೆ. ಇನ್ನೂ ಮುಖ್ಯವಾಗಿ ಮಹಿಳಾ ಸರ್ಕಾರಿ ನೌಕರರೂ ಕೆಲಸಕ್ಕೆ ಹಿಂದಿರುಗಿ ಎಂದಿದ್ದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಅಫ್ಘಾನಿಸ್ತಾನದ ಏರಿಯಾನಾ ನ್ಯೂಸ್​ ವರದಿ ಮಾಡಿದೆ.

ಅಫ್ಘಾನಿಸ್ತಾನದ ಅನೇಕ ನಾಗರಿಕರು ಭಯದಿಂದ ಈಗಾಗಲೇ ದೇಶ ತೊರೆದಿದ್ದಾರೆ. ಅಲ್ಲೇ ಉಳಿದವರಿಗೂ ಮಹಿಳಾ ಸುರಕ್ಷತೆ ಬಗ್ಗೆ ದಿಗಿಲು ಶುರುವಾಗಿದೆ. ಯಾಕೆಂದರೆ ತಾಲಿಬಾನಿಗಳ ಷರಿಯಾ ಆಡಳಿತದಲ್ಲಿ ಅತ್ಯಂತ ಹೆಚ್ಚು ಕಷ್ಟವಾಗುವುದು ಮಹಿಳೆಯರಿಗೆ. ಅನೇಕ ಕಟ್ಟಳೆಗಳನ್ನು ಹೇರಲಾಗುತ್ತದೆ. ಮಹಿಳೆಯರು ಹಕ್ಕುಗಳು ಪೂರ್ತಿಯಾಗಿ ಕಸಿಯಲ್ಪಡುತ್ತವೆ. ಇಡೀ ಅಫ್ಘಾನ್​ ಇದೇ ಭಯದಲ್ಲಿ ಇದೆ. ನಿನ್ನೆ ಸಾವಿರಾರು ಜನರು ದೇಶಬಿಟ್ಟು ಹೋಗಿದ್ದನ್ನು ನೋಡಿದ ತಾಲಿಬಾನ್​ ಇಂದು ಪರಿಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಶಾಂತಗೊಳಿಸಲು ಪ್ರಯತ್ನಿಸಿದ್ದಾಗಿ ಕೂಡ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಅಫ್ಘಾನಿಸ್ತಾನದಿಂದ ಸೇನೆಯನ್ನು ಹಿಂಪಡೆಯುವ ನಿರ್ಧಾರವನ್ನು ಅಮೆರಿಕ ಗಟ್ಟಿಗೊಳಿಸಿದ್ದೇ ಇದೀಗ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ಹಾಗಿದ್ದಾಗ್ಯೂ, ಇಲ್ಲಿನ ಮಹಿಳೆಯರು, ಬಾಲಕಿಯರು ಮತ್ತು ಯುವತಿಯರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸುತ್ತೇವೆ. ಈ ಬಗ್ಗೆ ಸಂಬಂಧಪಟ್ಟವರ ಬಳಿ ಮಾತುಕತೆ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹೇಳಿದ್ದಾರೆ.

ಇದನ್ನೂ ಓದಿ: Anandha Kannan: ಖ್ಯಾತ ನಿರೂಪಕ, ನಟ ಆನಂದ ಕಣ್ಣನ್ ಕ್ಯಾನ್ಸರ್​ನಿಂದ ನಿಧನ; ಸೆಲೆಬ್ರಿಟಿಗಳ ಸಂತಾಪ

Pakistan: ಪಾಕಿಸ್ತಾನದ ಲಾಹೋರ್​ನಲ್ಲಿ ಮಹಾರಾಜ ರಣಜೀತ್ ಸಿಂಗ್ ಪ್ರತಿಮೆ ಧ್ವಂಸ

ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
Video: ಮನೆ ಎದುರು ಮೈಗೆ ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್