Video: ಕಾಬೂಲ್ ಏರ್ಪೋರ್ಟ್ ನುಗ್ಗಲು ಯತ್ನಿಸಿದ ಅಫ್ಘಾನ್ ನಾಗರಿಕನತ್ತ ಗುಂಡು ಹಾರಿಸಿದ ಕಪ್ಪು ವಸ್ತ್ರಧಾರಿ ಉಗ್ರ
ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್ಗೆ ಸಾಗಿಸಲಾಗಿದೆ.
ಕಾಬೂಲ್ ಏರ್ಪೋರ್ಟ್ (Kabul Airport)ಗೆ ನುಗ್ಗಲು ಯತ್ನಿಸಿದ ಅಫ್ಘಾನಿಸ್ತಾನ್ (Afghanistan) ನಾಗರಿಕನೊಬ್ಬನತ್ತ ತಾಲಿಬಾನ್ ಉಗ್ರ (Taliban Terrorist) ಗುಂಡು ಹಾರಿಸಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. ತಾಲಿಬಾನ್ ಉಗ್ರರ ನಿಯಂತ್ರಣದಿಂದ ಅಸ್ತವ್ಯಸ್ತಗೊಂಡ ಕಾಬೂಲ್ (Kabul)ನಲ್ಲಿ ನಡೆಯುತ್ತಿರುವವ ಒಂದೊಂದು ಬೆಳವಣಿಗೆಗಳೂ ಆತಂಕ ಸೃಷ್ಟಿಸಿದ್ದು, ಅಲ್ಲಿನ ಹಲವು ಫೋಟೋ-ವಿಡಿಯೋಗಳು ಇದೀಗ ವೈರಲ್ ಆಗುತ್ತಿವೆ.
ನಾಗರಿಕನೆಡೆಗೆ ಉಗ್ರ ಗುಂಡು ಹಾರಿಸಿದ ವಿಡಿಯೋವನ್ನು ಅಸ್ವಕಾ ನ್ಯೂಸ್ ಶೇರ್ ಮಾಡಿದೆ. ಕಾಬೂಲ್ ಏರ್ಪೋರ್ಟ್ ಒಳ ನುಸುಳಲು ವ್ಯಕ್ತಿಯೊಬ್ಬ, ಹೊರಗಿನಿಂದ ಅತ್ಯಂತ ಎತ್ತರದ ಗೋಡೆಯನ್ನು ಹತ್ತಿ ಕುಳಿತು, ಇನ್ನೇನು ಏರ್ಪೋರ್ಟ್ ಒಳಗೆ ಹಾರಬೇಕು ಎನ್ನುವಷ್ಟರಲ್ಲಿ, ಕಪ್ಪು ಬಣ್ಣದ ಉಡುಪು ಧರಿಸಿದ್ದ ವ್ಯಕ್ತಿಯೊಬ್ಬ ಆತನೆಡೆಗೆ ಗುಂಡು ಹಾರಿಸಿದ್ದಾನೆ. ಹಾಗಂತ ಆ ನಾಗರಿಕನಿಗೆ ಯಾವುದೇ ಗಾಯವೂ ಆಗಲಿಲ್ಲ. ಆದರೆ ಹೆದರಿದ ವ್ಯಕ್ತಿ ಹೊರಗೆ ಜಿಗಿದಿದ್ದಾನೆ. ಇನ್ನು ಅಪ್ಘಾನಿಸ್ತಾನದಿಂದ ಸಾವಿರಾರು ಮಂದಿ ಬೇರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ.
ಕಾಬೂಲ್ ಏರ್ಪೋರ್ಟ್ನಲ್ಲಿ ಸಿಕ್ಕ ವಿಮಾನವನ್ನ ನೂಕು-ನುಗ್ಗಲಿನಲ್ಲಿ ಏರುವ ದೃಶ್ಯ ನೋಡಿದರೆ ಜೀವ ಹಿಂಡಿದಂತಾಗುತ್ತದೆ. ಅಪ್ಘಾನಿಸ್ತಾನವೀಗ ಸಂಪೂರ್ಣವಾಗಿ ತಾಲಿಬಾನ್ ತೆಕ್ಕೆಯಲ್ಲಿದ್ದು, ಅಲ್ಲಿ ಉಸಿರುಕಟ್ಟುವ ವಾತಾವರಣ ಸೃಷ್ಟಿಯಾಗಿದೆ. ಯುಎಸ್ನ ಸೇನಾ ವಿಮಾನದಲ್ಲಿ ಬರೋಬ್ಬರಿ 640 ಮಂದಿಯನ್ನು ಕತಾರ್ಗೆ ಸಾಗಿಸಲಾಗಿದೆ. ಹಾಗೇ, ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಇನ್ನು ಅಫ್ಘಾನಿಸ್ತಾನದಲ್ಲಿರುವ ಭಾರತೀಯರಿಗಾಗಿ ಭಾರತದಲ್ಲಿ ಸಹಾಯವಾಣಿಯನ್ನೂ ಪ್ರಾರಂಭಿಸಲಾಗಿದೆ. ಒಟ್ಟಾರೆ, ಅಫ್ಘಾನಿಸ್ತಾನದಲ್ಲಿ ಮತ್ತೊಮ್ಮೆ ತಾಲಿಬಾನಿಗಳ ಅಟ್ಟಹಾಸ ಶುರುವಾಗಿದ್ದು, ಅಲ್ಲಿನವರ ಜೀವನ ಅಭದ್ರತೆಗೆ ಸಿಲುಕಿದೆ.
Taliban Fighter shooting on a man trying to enter to the #kabulairport, He actually expected the Taliban to behave like the police of the previous Government, while No, Taliban speak another language of behavior. pic.twitter.com/3T8tcl4joY
— Aśvaka – آسواکا News Agency (@AsvakaNews) August 17, 2021
ಇದನ್ನೂ ಓದಿ: Motorola Edge 20: ಮಾರುಕಟ್ಟೆಗೆ 108MP ಕ್ಯಾಮೆರಾದ ಮತ್ತೊಂದು ಹೊಸ ಸ್ಮಾರ್ಟ್ಫೋನ್: ಬೆಲೆ ಕೇವಲ 22,999 ರೂ.
8,000ಕ್ಕಿಂತಲೂ ಹೆಚ್ಚು ಬಿಯರ್ ಬಾಟಲಿಗಳ ರಾಶಿ, ಅಲ್ಲಲ್ಲೇ ಎಸೆದ ಆಹಾರ ಪದಾರ್ಥ; ಬಾಡಿಗೆ ಕೊಟ್ಟು ಕಂಗಾಲಾದ ಮಾಲೀಕ