ಪ್ರಯಾಣಿಕರ ಗಮನಕ್ಕೆ! ಈ ಮಾರ್ಗದ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ

ಸಕಲೇಶಪುರ ಟು ಸುಬ್ರಹ್ಮಣ್ಯ ಮಾರ್ಗದಲ್ಲಿ ನಡೆಯುತ್ತಿರುವ ವಿದ್ಯುದ್ದೀಕರಣ ಕಾರ್ಯದಿಂದಾಗಿ, ನೈಋತ್ಯ ರೈಲ್ವೆ ನವೆಂಬರ್ 2 ರಿಂದ ಡಿಸೆಂಬರ್ 15 ರವರೆಗೆ ಪ್ರತಿದಿನ 4 ಗಂಟೆಗಳ ಕಾಲ ಲೈನ್ ಬ್ಲಾಕ್ ಘೋಷಿಸಿದೆ. ಇದರಿಂದ ಯಶವಂತಪುರ-ಮಂಗಳೂರು, ಕಾರವಾರ ಸೇರಿ ಹಲವು ಪ್ರಮುಖ ರೈಲು ಸೇವೆಗಳ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.

ಪ್ರಯಾಣಿಕರ ಗಮನಕ್ಕೆ! ಈ ಮಾರ್ಗದ ರೈಲು ಸೇವೆಗಳ ತಾತ್ಕಾಲಿಕ ರದ್ದತಿಯ ಅವಧಿ ವಿಸ್ತರಣೆ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 24, 2025 | 6:18 PM

ಹುಬ್ಬಳ್ಳಿ, ಅಕ್ಟೋಬರ್​ 24: ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ (ಘಾಟ್ ಸೆಕ್ಷನ್) ನಡುವಿನ ರೈಲ್ವೆ ವಿದ್ಯುದ್ದೀಕರಣ ಕಾರ್ಯವು ನಡೆಯುತ್ತಿರುವ ಕಾರಣ, ನೈಋತ್ಯ ರೈಲ್ವೆ (South Western Railway)
ನವೆಂಬರ್ 2 ರಿಂದ ಡಿಸೆಂಬರ್ 15 ರ ವರೆಗೆ ಪ್ರತಿದಿನ ನಾಲ್ಕು ಗಂಟೆಗಳ ಕಾಲ ಲೈನ್ ಬ್ಲಾಕ್ ತೆಗೆದುಕೊಳ್ಳಲಿದೆ. ಈ ಕಾರಣದಿಂದಾಗಿ ಕೆಲವು ರೈಲು ಸೇವೆಗಳ (train services) ತಾತ್ಕಾಲಿಕ ರದ್ದತಿಯ ಅವಧಿಯನ್ನು ವಿಸ್ತರಿಸಲಾಗಿದೆ.

ಯಾವೆಲ್ಲಾ ರೈಲುಗಳ ಅವಧಿ ವಿಸ್ತರಣೆ?

  • ರೈಲು ಸಂಖ್ಯೆ 16539 ಯಶವಂತಪುರ–ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್​​ಪ್ರೆಸ್ ರೈಲು ಮೊದಲು ನವೆಂಬರ್​​ 01 ರವರೆಗೆ ರದ್ದುಗೊಂಡಿತ್ತು. ಇದೀಗ ನವೆಂಬರ್​​ 08 ರಿಂದ ಡಿಸೆಂಬರ್​ 13ರ ವರೆಗೆ ರದ್ದುಗೊಳ್ಳಲಿದೆ.

ನೈಋತ್ಯ ರೈಲ್ವೆ ಟ್ವೀಟ್​​

  • ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್–ಯಶವಂತಪುರ ಸಾಪ್ತಾಹಿಕ ಎಕ್ಸ್​ಪ್ರೆಸ್ ರೈಲು ಮೊದಲು ನವೆಂಬರ್​ 02 ರ ವರೆಗೆ ರದ್ದುಗೊಂಡಿತ್ತು. ಇದೀಗ ನವೆಂಬರ್​ 09 ರಿಂದ ಡಿಸೆಂಬರ್​ 14ರ ವರೆಗೆ ರದ್ದುಗೊಳ್ಳಲಿದೆ.
  • ರೈಲು ಸಂಖ್ಯೆ 16575 ಯಶವಂತಪುರ–ಮಂಗಳೂರು ಜಂಕ್ಷನ್ ಗೋಮಟೇಶ್ವರ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ಮೊದಲು ಅಕ್ಟೋಬರ್​​ 30ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್​ 02 ರಿಂದ ಡಿಸೆಂಬರ್​​ 14ರ ವರೆಗೆ ರದ್ದುಗೊಳ್ಳಲಿದೆ.
  • ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ಮೊದಲು ಅಕ್ಟೋಬರ್​ 30ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 03 ರಿಂದ ಡಿಸೆಂಬರ್​ 15ರ ವರೆಗೆ ರದ್ದುಗೊಳ್ಳಲಿದೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು

  • ರೈಲು ಸಂಖ್ಯೆ 16515 ಯಶವಂತಪುರ–ಕಾರವಾರ ಟ್ರೈ-ವೀಕ್ಲಿ ಎಕ್ಸ್​​ಪ್ರೆಸ್ ಮೊದಲು ಅಕ್ಟೋಬರ್​ 31 ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 03 ರಿಂದ ಡಿಸೆಂಬರ್​ 15ರ ವರೆಗೆ ರದ್ದುಗೊಳ್ಳಲಿದೆ.
  • ರೈಲು ಸಂಖ್ಯೆ 16516 ಕಾರವಾರ–ಯಶವಂತಪುರ ಟ್ರೈ-ವೀಕ್ಲಿ ಎಕ್ಸ್​ಪ್ರೆಸ್ ಮೊದಲು ಅಕ್ಟೋಬರ್​ 01ರ ವರೆಗೆ ರದ್ದುಗೊಂಡಿತ್ತು. ಈಗ ನವೆಂಬರ್ 04 ರಿಂದ ಡಿಸೆಂಬರ್​ 16ರ ವರೆಗೆ ರದ್ದುಗೊಳ್ಳಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.