ಹುಬ್ಬಳ್ಳಿ, ಜೂ.01: ನೇಹಾ ಹಾಗೂ ಅಂಜಲಿ ಹಾಗೆಯೇ ಹತ್ಯೆ ಆಗುತ್ತದೆ ಎಂದು ಹುಬ್ಬಳ್ಳಿ(Hubballi)ಯ ಬೆಂಗೇರಿಯಲ್ಲಿರುವ ರೋಟರಿ ಪ್ರಾಥಮಿಕ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ(Teacher)ಗೆ ಅನಾಮಧೇಯ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿದ್ದಾನೆ. ಮುಖ್ಯ ಶಿಕ್ಷಕಿ ದೀಪಾ ಅಡವಿಮಠ ಎನ್ನುವವರಿಗೆ ಕಳೆದ ಐದು ದಿನಗಳ ಹಿಂದೆ ಪೋಸ್ಟ್(ಅಂಚೆ) ಮೂಲಕ ಅನಾಮಧೇಯ ಬೆದರಿಕೆ ಪತ್ರ ಬಂದಿದೆ. ಈ ಹಿನ್ನಲೆ ಹತ್ಯೆ ಬೆದರಿಕೆ ಪತ್ರದ ಕುರಿತು ಕೇಶ್ವಾಪೂರ ಪೊಲೀಸರ ಗಮನಕ್ಕೆ ಮುಖ್ಯ ಶಿಕ್ಷಕಿ ತಂದಿದ್ದು, ಹುಬ್ಬಳ್ಳಿಯ ಬೆಂಗೇರಿಯಲ್ಲಿರುವ ಮುಖ್ಯ ಶಿಕ್ಷಕಿ ಮನೆಗೆ ಪೊಲೀಸರು ಭೇಟಿ ನೀಡಿದ್ದಾರೆ.
ಶಿಕ್ಷಕಿ ದೀಪಾ ಮನೆಗೆ ಎಸಿಪಿ ಶಿವಪ್ರಕಾಶ್ ನಾಯಕ್ ಭೇಟಿ ನೀಡಿದ್ದು, ಮಾಹಿತಿ ಪಡೆದಿದ್ದಾರೆ. ಜೊತೆಗೆ ಮುಂಜಾಗ್ರತಾ ಕ್ರಮವಾಗಿ ಮುಖ್ಯ ಶಿಕ್ಷಕಿ ಮನೆ ಬಳಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನೇಹಾ, ಅಂಜಲಿ ಹತ್ಯೆ ಘಟನೆ ಮಾಸುವ ಮುನ್ನವೇ ಕೊಲೆ ಬೆದರಿಕೆ ಪತ್ರ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ:ನೇಹಾ ಹಿರೇಮಠ ತಂದೆಯನ್ನು ಚೇಸ್ ಮಾಡಿದ ಆಟೋ ಚಾಲಕ, ಮುಂದೇನಾಯ್ತು ನೋಡಿ
ಈ ಕುರಿತು ಮಾತನಾಡಿದ ಮುಖ್ಯ ಶಿಕ್ಷಕಿ ದೀಪಾ ಅಡವಿಮಠ, ‘ ಮೇ. 28 ರಂದು ನನಗೆ ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ ‘ದೀಪಾ ನಿನ್ನ ಹತ್ಯೆ ನೇಹಾ ಹಾಗೂ ಅಂಜಲಿ ಹಾಗೆ ಕೆಲವೇ ದಿನಗಳಲ್ಲಿ ಅಂತಾ ಬರೆದಿದೆ. ಯಾವ ಮಕ್ಕಳ ಮೇಲೂ ನನಗೆ ದ್ವೇಷ ಇಲ್ಲ, ಮಕ್ಕಳಿಗೂ ನನ್ಮ ಮೇಲೆ ದ್ವೇಷವಿಲ್ಲ. ನಾನು ಕಣ್ಣಲ್ಲಿ ಬುದ್ದಿ ಹೇಳಿದ್ದೇನೆ. ಇದೀಗ ಬೆಂಗೇರಿಯ ರೋಟರಿ ಶಾಲೆಗೆ ಪತ್ರ ಬಂದಿದೆ ಎಂದರು.
ಇನ್ನು ನಾನು ಮುಖ್ಯ ಶಿಕ್ಷಕಿಯಾಗಿ ನಾನು ಕೆಲಸ ಮಾಡುತ್ತಿದ್ದು, ನನಗೆ ಪತ್ರ ಬಂದ ದಿನವೇ ನಾನು ಪೊಲೀಸರ ಗಮನಕ್ಕೆ ತಂದಿದ್ದೇನೆ. ಈ ಹಿನ್ನಲೆ ಪೊಲೀಸರು ತನಿಖೆ ಮಾಡ್ತೀವಿ ಎಂದಿದ್ದು, ಪತ್ರ ಬರೆದ ಅನಾಮಧೇಯ ವ್ಯಕ್ತಿಯನ್ನು ಪತ್ತೆ ಮಾಡೋದಾಗಿ ಹೇಳಿದ್ದಾರೆ. ಈ ರೀತಿ ಯಾರೇ ಪತ್ರ ಬರೆದರೂ ಅವರಿಗೆ ಶಿಕ್ಷೆ ಆಗಬೇಕು. ನಾವು ಅಮಾಯಕ ಶಿಕ್ಷಕಿ, ವಿದ್ಯಾರ್ಥಿಗಳ ಮೇಲೆ ನನಗೆ ಅನುಮಾನ ಇಲ್ಲ. ಎಲ್ಲ ವಿದ್ಯಾರ್ಥಿಗಳು ಪ್ರೀತಿ ಇಂದ ಇದ್ದಾರೆ. ವಿದ್ಯಾರ್ಥಿಗಳು ನನ್ನ ಮೊಬೈಲ್ ನಂಬರ್ ಗಾಡ್ ಎಂದು ಸೇವ್ ಮಾಡಿದ್ದಾರೆ. ಪತ್ರ ಬಂದ ದಿನದಿಂದ ನನಗೆ ಫ್ರೀಯಾಗಿ ಇರೋಕೆ ಆಗುತ್ತಿಲ್ಲ. ಭಯ ಆಗುತ್ತಿದೆ ಎಂದು ದೀಪಾ ಅಡವಿಮಠ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:42 pm, Sat, 1 June 24