Hubballi Tirupati Train: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಪುನರಾರಂಭ!

ತಿರುಪತಿ ತಿಮ್ಮಪ್ಪನ ದರುಶನಕ್ಕಾಗಿ ಉತ್ತರ ಕರ್ನಾಟಕ ಭಾಗದವರಿಗೆ ರೈಲ್ವೆ ಸಂಚಾರ ವ್ಯವಸ್ಥೆ ಪುನರ್​ ಸ್ಥಾಪಿಸಲಾಗಿದೆ. ಅಕ್ಟೋಬರ್ 17 ರಿಂದ ಹುಬ್ಬಳ್ಳಿ ಜಂಕ್ಷನ್​ ಮತ್ತು ತಿರುಪತಿ ಮಧ್ಯೆ ನೇರವಾಗಿ ಪ್ರಯಾಣ ಬೆಳೆಸಿ, ವೇಂಕಟೇಶ್ವರನ ದರ್ಶನ ಪಡೆಯಬಹುದಾಗಿದೆ.

Hubballi Tirupati Train: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಪುನರಾರಂಭ!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹುಬ್ಬಳ್ಳಿ ಪ್ಯಾಸೆಂಜರ್ ರೈಲು ಪುನರಾರಂಭ!
Edited By:

Updated on: Oct 18, 2022 | 12:11 PM

ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ತಿರುಪತಿ ತಿಮ್ಮಪ್ಪನ ಭಕ್ತರು ಅಕ್ಟೋಬರ್ 17 ರಿಂದ ಮತ್ತೆ ನೇರವಾಗಿ ಹುಬ್ಬಳ್ಳಿ ಜಂಕ್ಷನ್​ ನಿಂದ ತಿರುಪತಿಗೆ ಪ್ರಯಾಣ ಬೆಳೆಸಿ, ವೇಂಕಟೇಶ್ವರನ ದರ್ಶನ ಪಡೆಯಬಹುದಾಗಿದೆ. ಈ ಹಿಂದೆ ಹುಬ್ಬಳ್ಳಿ – ತಿರುಪತಿ – ಹುಬ್ಬಳ್ಳಿ ಪ್ಯಾಸೆಂಜರ್ ರೈಲು (Tirupati Main – Hubballi Junction Passenger Train) ಕಾರ್ಯನಿರ್ವಹಿಸುತ್ತಿದ್ದಾದರೂ ಕೊರೊನಾ ಮಹಾಮಾರಿಯಿಂದಾಗಿ ಎರಡೂವರೆ ವರ್ಷಗಳಿಂದ ಸಂಚಾರ ಸ್ಥಗಿತಗೊಂಡಿತ್ತು.

ಹುಬ್ಬಳ್ಳಿ-ತಿರುಪತಿ ರೈಲು ಸಂಚಾರ ಸಮಯ:

ತಿರುಪತಿಯಿಂದ: ತಿರುಪತಿಯಿಂದ ಹುಬ್ಬಳ್ಳಿಗೆ ಬರುವ ಮಾರ್ಗವಾಗಿ ತಿರುಪತಿ ರೈಲ್ವೆ ನಿಲ್ದಾಣದಿಂದ ಬೆಳಿಗ್ಗೆ 6.10 ಕ್ಕೆ ಹೊರಡಲಿದೆ. ಅಂದೇ ರಾತ್ರಿ 9.10 ಕ್ಕೆ ಹುಬ್ಬಳ್ಳಿ ತಲುಪಲಿದೆ. ತಿರುಪತಿಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ರೈಲು ರಾಜ್ಯದ ಹಲವೆಡೆ ನಿಲ್ಲಲಿದೆ. ಮುನಿರಾಬಾದ್ ನಲ್ಲಿ ಸಾಯಂಕಾಲ 4.40ಕ್ಕೆ, ಹಿಟ್ನಾಳ್ ಹಾಲ್ಡ್ ನಲ್ಲಿ ಸಾಯಂಕಾಲ 4.48 ಕ್ಕೆ, ಗಿಣಿಗೇರಾದಲ್ಲಿ ಸಂಜೆ 5 ಕ್ಕೆ, ಕೊಪ್ಪಳದಲ್ಲಿ ಸಂಜೆ 5.20ರಲ್ಲಿ ಸ್ಟಾಪ್ ಕೊಡಲಿದೆ.

ಹುಬ್ಬಳ್ಳಿಯಿಂದ: ಹುಬ್ಬಳ್ಳಿಯಿಂದ ತಿರುಪತಿಗೆ ಹೋಗುವಾಗ ಹುಬ್ಬಳ್ಳಿಯಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿದೆ. ಅಂದೇ ರಾತ್ರಿ 9.50ಕ್ಕೆ ತಿರುಪತಿ ತಲುಪಲಿದೆ. ಹುಬ್ಬಳ್ಳಿಯಿಂದ ತಿರುಪತಿಗೆ ಹೋಗುವ ಮಾರ್ಗದಲ್ಲಿ ಕರ್ನಾಟಕದ ಈ ರೈಲ್ವೆ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ: ಗದಗ – ಬೆಳಗ್ಗೆ 7.03ಕ್ಕೆ, ಭಾನಾಪುರ ಬೆಳಗ್ಗೆ 7.47ಕ್ಕೆ, ಕೊಪ್ಪಳ – 8.03ಕ್ಕೆ, ಗಿಣಿಗೇರಾ – 8.14 ಕ್ಕೆ, ಹಿಟ್ನಾಳ್ ಹಾಲ್ಸ್ – 8.24 ಕ್ಕೆ ಮತ್ತು ಮುನಿರಾಬಾದ್ – ಬೆಳಗ್ಗೆ 8.33ಕ್ಕೆ ಆಯಾ ನಿಲ್ದಾಣಗಳಲ್ಲಿ ಸ್ಟಾಪ್​ ಕೊಡಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

Published On - 12:03 pm, Tue, 18 October 22