ಹುಬ್ಬಳ್ಳಿ: ಅಖಿಲ ಭಾರತ ಮಾಧ್ವ ಮಹಾ ಮಂಡಲ ಉಡುಪಿ (Udupi) ಪ್ರಧಾನ ಕಛೇರಿ ಹಾಗೂ ಹುಬ್ಬಳ್ಳಿ ಶಾಖೆಯ (Hubballi) ವತಿಯಿಂದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Udupi seer Vishwaprasanna Teertha Swamiji) ಅವರಿಗೆ ‘ಷಷ್ಟ್ಯಬ್ದ ಅಭಿವಂದನಾ’ ಕಾರ್ಯಕ್ರಮ, ಸಂತ ಸಂಗಮ ಹಾಗೂ ಪಂಢರಿನಾಥ ಆಚಾರ್ಯ ಗಲಗಲಿ ಅವರ ಜನ್ಮ ಶತಮಾನೋತ್ಸವ ಸಮಾರಂಭ ಅಕ್ಟೋಬರ್ 11 ಮತ್ತು 12ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ ಎಂದು ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಘನಮಲ್ಲಳ್ಳಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 11ರಂದು ಮಧ್ಯಾಹ್ನ 3 ಗಂಟೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಮಾರಂಭ ಉದ್ಘಾಟಿಸುವರು. ಅಕ್ಟೋಬರ್ 12 ರಂದು ಬೆಳಿಗ್ಗೆ 7 ರಿಂದ 8 ರವರೆಗೆ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದಲಿತರ ಕ್ಷೇತ್ರವಾದ ಹೆಗ್ಗೇರಿಯ ಭುವನೇಶ್ವರಿ ನಗರದಲ್ಲಿ ಪಾದಯಾತ್ರೆ (padayatra, Dalit) ನಡೆಸಲಿದ್ದಾರೆ.
(ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ)