AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tirupati: ತಿರುಮಲ ಬೆಟ್ಟದಲ್ಲಿ ಖಾಸಗಿ ಹೋಟೆಲ್ಸ್​​ ಊಟ-ವಸತಿ ಎಂಬ ಹಗಲುದರೋಡೆ ಮೇಲೆ TTD ಪ್ರಹಾರ, ಎಪಿ ಟೂರಿಸಂ ಅಧೀನಕ್ಕೆ ಪ್ರವಾಸಿ ಹೋಟೆಲ್‌ ನೀಡುವ ನಿರ್ಣಯ

Dial your EO -TTD: ಟಿಟಿಡಿ ಆಡಳಿತ ಮಂಡಳಿಯ ಎಕ್ಸಿಕ್ಯೂಟೀವ್ ಆಫೀಸರ್ ಜೊತೆ ಭಕ್ತರು ನೇರವಾಗಿ ಮಾತನಾಡಿ, ತಮ್ಮ ದೂರುಗಳನ್ನು ಹೇಳಿಕೊಳ್ಳುವ ವೇದಿಕೆಯಾಗಿ ಡಯಲ್ ಯುವರ್ ಈಓ ದೂರವಾಣಿ ಕರೆ ಕಾರ್ಯಕ್ರಮವನ್ನು ಕಳೆದ ವಾರ ನಡೆಸಲಾಗಿದೆ.​ ಆ ವೇಳೆ ಭಕ್ತರಿಂದ ಬಂದ ದೂರುಗಳನ್ನು ಪರಿಶೀಲಿಸಿ, ಈ ಆ್ಯಕ್ಷನ್ ಪ್ಲಾನ್ ಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

Tirupati: ತಿರುಮಲ ಬೆಟ್ಟದಲ್ಲಿ ಖಾಸಗಿ ಹೋಟೆಲ್ಸ್​​ ಊಟ-ವಸತಿ ಎಂಬ ಹಗಲುದರೋಡೆ ಮೇಲೆ TTD ಪ್ರಹಾರ, ಎಪಿ ಟೂರಿಸಂ ಅಧೀನಕ್ಕೆ ಪ್ರವಾಸಿ ಹೋಟೆಲ್‌ ನೀಡುವ ನಿರ್ಣಯ
ತಿರುಪತಿ: ಖಾಸಗಿ ಹೋಟೆಲುಗಳ ಹಗಲುದರೋಡೆ ಮೇಲೆ ಟಿಟಿಡಿ ಪ್ರಹಾರ
ಸಾಧು ಶ್ರೀನಾಥ್​
|

Updated on:Oct 10, 2023 | 10:24 AM

Share

ಪವಿತ್ರ ಪುಣ್ಯಕ್ಷೇತ್ರಂ ತಿರುಪತಿಯ ತಿರುಮಲ ಬೆಟ್ಟದಲ್ಲಿ ಖಾಸಗಿ ಹೋಟೆಲ್ ಗಳ ( private hotels, eateries) ರೂಮ್​​ ಬಾಡಿಗೆ ಎಂಬ ಹಗಲು ದರೋಡೆ ಮೇಲೆ ದೇವಸ್ಥಾನದ ಆಡಳಿತ ಮಂಡಳಿ- ಟಿಟಿಡಿ ಕ್ರಮ ಕೈಗೊಳ್ಳಲು ಮುಂದಾಗಿದೆ. ತಿರುಪತಿ ತಿಮ್ಮಪ್ಪನ ಭಕ್ತರ ವಾಸ್ತವ್ಯ, ಊಟ ತಿಂಡಿ ಆಹಾರ ಸಾಮಗ್ರಿಗಳ ಅವಶ್ಯಕತೆಗಳನ್ನು ಮನಗಂಡು ಅದಕ್ಕೆಲ್ಲ ಆಸರೆಯಾಗುವ ಸೋಗಿನಲ್ಲಿ ಖಾಸಗಿ ಹೋಟೆಲ್‌ಗಳು ವಿಧಿಸುತ್ತಿರುವ ದುಬಾರಿ ಬಾಡಿಗೆ, ದರಗಳನ್ನು ನಿಯಂತ್ರಿಸಲು ಆಡಳಿತ ಮಂಡಳಿ ಕ್ರಮ ಕೈಗೊಂಡಿದೆ. ಇನ್ನೂ ಹೇಳಬೇಕೆಂದರೆ ತಿರುಮಲದಲ್ಲಿ ನಡೆದಿರುವ ಖಾಸಗಿ ಹೋಟೆಲುಗಳ ಈ ಹಗಲು ದರೋಡೆ ಮೇಲೆ ಪ್ರಹಾರ ಮಾಡಿದೆ. ಭಕ್ತರ ದೂರುಗಳನ್ನು (Tourism) ಗಮನಕ್ಕೆ ತೆಗೆದುಕೊಂಡು ಕಡಿಮೆ ದರದಲ್ಲಿ ಉತ್ತಮ ಆಹಾರ ಸರಬರಾಜು ಮಾಡುವ ಬಗ್ಗೆ ಆಲೋಚಿಸಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‌ಗಳ ನಿರ್ವಹಣೆ ಜವಾಬ್ದಾರಿಯನ್ನು ಎಪಿ ಟೂರಿಜಂ ಇಲಾಖೆಗೆ ಒಪ್ಪಿಸಲು ಮುಂದಾಗಿದೆ. ಈಗಾಗಲೇ ಎರಡು ಹೋಟೆಲ್‌ಗಳ ನಿರ್ವಹಣೆಯನ್ನು ಟಿಟಿಡಿ (TTD) ಆಡಳಿತ ಮಂಡಳಿಯು ಎಪಿ ಟೂರಿಜಂ (AP Tourism Corporation) ಅಧೀನಕ್ಕೆ ನೀಡಿದೆ. ದುಬಾರಿ ದರಗಳನ್ನು ವಿಧಿಸಿರುವ ಕೆಲವು ಹೋಟೆಲ್‌ಗಳ ಲೈಸೆನ್ಸುಗಳನ್ನು ರದ್ದುಗೊಳಿಸುವ ಬಗ್ಗೆಯೂ ಆಲೋಚಿಸುತ್ತಿದೆ.

ಇಲ್ಲಿ ದಾಖಲಾರ್ಹ ಸಂಗತಿಯೆಂದರೆ ಈ ಹಿಂದೆಯೂ ಅನೇಕ ಬಾರಿ ಖಾಸಗಿ ಹೋಟೆಲುಗಳ ವಿರುದ್ಧ ಇಂತಹ ಕಠಿಣ ಕ್ರಮಗಳನ್ನ ಕೈಗೊಳ್ಳಲು ಯತ್ನಿಸಿತ್ತಾದರೂ ಅವೆಲ್ಲಾ ವಿಫಲವಾಗಿವೆ ಎಂಬುದು ಗಮನಾರ್ಹ. ಆದಾಗ್ಯೂ, ಟಿಟಿಡಿ ಆಡಳಿತ ಮಂಡಳಿಯ ಎಕ್ಸಿಕ್ಯೂಟೀವ್ ಆಫೀಸರ್ ಜೊತೆ ಭಕ್ತರು ನೇರವಾಗಿ ಮಾತನಾಡಿ, ತಮ್ಮ ದೂರುದುಮ್ಮಾನುಗಳನ್ನು ಹೇಳಿಕೊಳ್ಳುವ ವೇದಿಕೆಯಾಗಿ ಡಯಲ್ ಯುವರ್ ಈಓ (Dial your EO -TTD) ದೂರವಾಣಿ ಕರೆ ಕಾರ್ಯಕ್ರಮವನ್ನು ಕಳೆದ ವಾರ ನಡೆಸಲಾಗಿದೆ.​

ಇದನ್ನೂ ಓದಿ: Srivari Navaratri Brahmotsav: ಅ.15 ರಿಂದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನವರಾತ್ರಿ ಬ್ರಹ್ಮೋತ್ಸವ ಈ ಬಾರಿ 2 ಬಾರಿ! ಯಾವ ದಿನ, ಹೇಗೆ ದರ್ಶನ ವಿವರ ಇಲ್ಲಿದೆ

ಆ ವೇಳೆ ಭಕ್ತರಿಂದ ಬಂದ ದೂರುಗಳನ್ನು ಪರಿಶೀಲಿಸಿ, ಟಿಟಿಡಿಈ ಆ್ಯಕ್ಷನ್ ಪ್ಲಾನ್ ಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಬೆಟ್ಟದ ಮೇಲೆ ಒಂದು ರೆಸ್ಟೋರೆಂಟ್‌ ತನ್ನಿಷ್ಟಕ್ಕೆ ಬಂದಂತೆ ತಿಂಗಳಿಗೆ ಸುಮಾರು 50 ಲಕ್ಷ ರೂಪಾಯಿವರೆಗೆ ಬಾಡಿಗೆ ವಿಧಿಸುತ್ತಿದೆ. ಈ ಹಗಲು ದರೋಡೆಯನ್ನು ತಡೆಯುವಂತೆ ಭಕ್ತರು TTD EO ಗೆ ಕರೆ ಮಾಡಿ ಗಮನ ಸೆಳೆದಿದ್ದಾರೆ. ಇನ್ನು, ದೇವಸ್ಥಾನದ ಆಜುಬಾಜು ಇರುವ ಸಾವಿರಾರು ಫಾಸ್ಟ್ ಫುಡ್ ಸೆಂಟರ್ ಗಳಲ್ಲಿಯೂ ಇದೇ ರೀತಿಯಲ್ಲಿ ದರೋಡೆ ನಡೆಯುತ್ತಿರುವುದನ್ನು ಗಮನಿಸಿ ಟಿಟಿಡಿ ಈ ಆಕ್ಷನ್ ಪ್ಲಾನ್​ ಸ್ಟಾರ್ಟ್ ಮಾಡಿದೆ.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಆಂಧ್ರ ಪ್ರದೇಶ ಟೂರಿಸಂ ಕಾರ್ಪೊರೇಷನ್​ (ಎಪಿ ಟಿಡಿಸಿ) ಕಡಿಮೆ ಟೆಂಡರ್ ಮೂಲಕ ಕಡಿಮೆ ದರದಲ್ಲಿ ಉತ್ತಮ ಆಹಾರವನ್ನು ಭಕ್ತರಿಗೆ ನೀಡುವ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ತಿರುಮಲಕ್ಕೆ ಬಂದ ಭಕ್ತರಿಗೆ ಅನ್ನ ಪ್ರಸಾದಗಳು ಯಾವುದೇ ವೆಚ್ಚವಿಲ್ಲದೆ ಟಿಟಿಡಿ ಒದಗಿಸುವ ಪ್ರಸ್ತಾವನೆ ಮುಂದಿಡಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಟಿಫಿನ್ ಗಾಗಿ ಪ್ರವಾಸಿ ಭಕ್ತರು ಹೋಟೆಲ್‌ಗಳಿಗೆ ಹೋದಾಗ 500 ರೂಪಾಯಿಗಳವರೆಗೂ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಹಗಲು ದರೋಡೆ ಸಮ್ಮುಖದಲ್ಲಿ ಅವುಗಳಿಗೆ ನಿಯಂತ್ರಣ ಹಾಕಲು ಎಪಿ ಟೂರಿಜಂ ನಿಗಮಕ್ಕೆ ಹೋಟೆಲ್‌ಗಳನ್ನು ನೀಡುವ ಬಗ್ಗೆ ಸದ್ಯಕ್ಕೆ ಟಿಟಿಡಿ ನಿರ್ಣಯ ತೆಗೆದುಕೊಂಡಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:23 am, Tue, 10 October 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?