ಚೆನ್ನಮ್ಮ ಮೈದಾನ ಪಾಲಿಕೆಯ ಆಸ್ತಿಯೇ ಹೊರತು ಯಾವುದೇ ಸಂಘಟನೆಯ ಆಸ್ತಿಯಲ್ಲ: ಗಣೇಶ ಪ್ರತಿಷ್ಠಾಪನೆ ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ

| Updated By: ಆಯೇಷಾ ಬಾನು

Updated on: Aug 31, 2022 | 8:18 AM

ಗಣೇಶ ಪ್ರತಿಷ್ಠಾಪನೆ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಚೆನ್ನಮ್ಮ ಮೈದಾನ ಪಾಲಿಕೆಯ ಆಸ್ತಿಯೇ ಹೊರತು ಯಾವುದೇ ಸಂಘಟನೆಯ ಅಥವಾ ಯಾವುದೇ ಧರ್ಮದ ಆಸ್ತಿಯಲ್ಲ ಎಂದರು

ಚೆನ್ನಮ್ಮ ಮೈದಾನ ಪಾಲಿಕೆಯ ಆಸ್ತಿಯೇ ಹೊರತು ಯಾವುದೇ ಸಂಘಟನೆಯ ಆಸ್ತಿಯಲ್ಲ: ಗಣೇಶ ಪ್ರತಿಷ್ಠಾಪನೆ ಬಳಿಕ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆ
ಸಚಿವ ಪ್ರಲ್ಹಾದ ಜೋಶಿ
Follow us on

ಹುಬ್ಬಳ್ಳಿ: ಹುಬ್ಬಳ್ಳಿಯ ಚೆನ್ನಮ್ಮ ಮೈದಾನದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ(Hubli Idgah Maidan) ಮಾಡಲು ನಿನ್ನೆ ಮಂಗಳವಾರ ತಡರಾತ್ರಿ ಹೈಕೋರ್ಟ್ ಸಮ್ಮತಿ ನೀಡಿದ್ದು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ(Pralhad Joshi) ಹೇಳಿದ್ದಾರೆ.

ಹು-ಧಾ ಮಹಾನಗರ ಪಾಲಿಕೆಯ ವತಿಯಿಂದ ರಚನೆಯಾದ ಸಮಿತಿಯ ನಿರ್ಣಯದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರಿಗೂ ಅವರು ಧನ್ಯವಾದ ಸಲ್ಲಿಸಿದರು‌. ಅದೇ ರೀತಿ ಮಹಾನಗರ ಪಾಲಿಕೆಯ ನಿರ್ದೇಶನದಂತೆ ಸರಕಾರದ ನಿಯಮಾವಳಿಯಂತೆ ಶಾಂತಿಯಿಂದ ಸೌಹಾರ್ದಯುತವಾಗಿ ಜನರು ವರ್ತಿಸಬೇಕೆಂದು ವಿನಂತಿ ಮಾಡಿದರು.

ನಂತರ ಗಣೇಶ ಪ್ರತಿಷ್ಠಾಪನೆ ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಚೆನ್ನಮ್ಮ ಮೈದಾನ ಪಾಲಿಕೆಯ ಆಸ್ತಿಯೇ ಹೊರತು ಯಾವುದೇ ಸಂಘಟನೆಯ ಅಥವಾ ಯಾವುದೇ ಧರ್ಮದ ಆಸ್ತಿಯಲ್ಲ ಎಂದರು. ವಿಘ್ನ ವಿನಾಶಕ ಗಣಪತಿಯು ಎಲ್ಲರಿಗೂ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸಿ ಎಲ್ಲರಿಗೂ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು‌.

ತೀರ್ಪು ಹೊರಬೀಳುತ್ತಿದ್ದಂತೆ ಜೋಶಿ ‘ಖುಷಿ’, ನಿವಾಸದಲ್ಲಿ ಸಭೆ

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹೈಕೋರ್ಟ್​ ಅಸ್ತು ಎಂದ ಹಿನ್ನೆಲೆ ಹುಬ್ಬಳ್ಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ರಾತ್ರೋರಾತ್ರಿ ಸಭೆ ನಡೆಸಲಾಗಿದ್ದು, ಗಣೇಶೋತ್ಸವದ ಚಟುವಟಿಕೆ ಗರಿಗೆದರಿದೆ. ಮೇಯರ್ ಈರೇಶ ಅಂಚಟಗೇರಿ ಬಿಜೆಪಿ ಕಾಪೋರೇಟರ್​ಗಳ ಜೊತೆ ಕೇಂದ್ರ ಸಚಿವರು ಸಭೆ ನಡೆಸಿದರು. ಈ ಸಭೆಯಲ್ಲಿ ಪಕ್ಷದ ಮುಖಂಡರು ಕೂಡ ಭಾಗಿಯಾಗಿದ್ದರು.

ಅನಗತ್ಯ ವಿವಾದಕ್ಕೆ ಯತ್ನ

ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಿದ ಹೈಕೋರ್ಟ್ ತೀರ್ಪನ್ನು ಸ್ವಾಗತಿಸಿದ ಪ್ರಹ್ಲಾದ್ ಜೋಶಿ, ವರ್ಷಕ್ಕೆ ಕೇವಲ 2 ಬಾರಿ ನಮಾಜ್​ ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿತ್ತು. ಹುಬ್ಬಳ್ಳಿಯ ಈದ್ಗಾ ಮೈದಾನ ಒಂದು ಸಾರ್ವಜನಿಕ ಸ್ವತ್ತು ಆಗಿದೆ. ಆದರೆ ಅನಗತ್ಯವಾಗಿ ವಿವಾದ ಮಾಡಲು ಪ್ರಯತ್ನ ಮಾಡಿದ್ದರು ಎಂದರು. ಅಲ್ಲದೆ ಮೈದಾನದಲ್ಲಿ ನಮಾಜ್ ಮಾಡಲು ಯಾರೂ ವಿರೋಧ ಮಾಡಿಲ್ಲ. ಹೀಗಾಗಿ ಮೂರು ದಿನಗಳ ಗಣೇಶೋತ್ಸವದ ಸಂದರ್ಭದಲ್ಲಿ ಯಾರು ಕೂಡ ವಿರೋಧ ಮಾಡಬಾರದು ಎಂದರು.