ಹುಬ್ಬಳ್ಳಿ: ತಾಪಮಾನ ಏರಿಕೆ, ಮಳೆಯಿಂದಾಗಿ ತರಕಾರಿ ಮತ್ತು ಸೊಪ್ಪುಗಳ ದರ ಗಗನಕ್ಕೇರಿವೆ(Vegetables Price Hike). ಮುಂಗಾರು(Monsoon) ಮಳೆ ಕೈಕೊಟ್ಟಿದ್ದು ಬಿತ್ತನೆ ಇಲ್ಲದೆ ತರಕಾರಿ ಡಿಮ್ಯಾಂಡ್ ಹೆಚ್ಚಿದೆ. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಡಬಲ್ ಆಗಿದೆ. ಮಳೆಯಾಗದ ಹಿನ್ನಲೆ ರೈತರು ತರಕಾರಿ ಬೆಳೆಯೋದು ಕಡಿಮೆಯಾಗಿದೆ(Karnataka Rains). ಹೀಗಾಗಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೆಚ್ಚಿದೆ. ಹುಬ್ಬಳ್ಳಿಯ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.
ತರಕಾರಿ | ಇಂದಿನ ದರ | ಹಿಂದಿನ ದರ |
ಬದನೆಕಾಯಿ | 80 Rs | 30 Rs |
ಟೊಮೆಟೊ | 50 Rs | 30 Rs |
ಬೀನ್ಸ್ | 120 Rs | 50 Rs |
ಮೆಣಸಿನಕಾಯಿ | 100 Rs | 30 Rs |
ಸೋತಿಕಾಯಿ | 80 Rs | 30 Rs |
ಹೀರಿಕಾಯಿ | 80 Rs | 30 Rs |
ಕ್ಯಾಬೀಜ್ | 30 Rs | 10 Rs |
ಹೂಕೋಸು | 40 Rs | 10 Rs |
ಚವಳಿಕಾಯಿ | 80 Rs | 20 Rs |
ಕೋತಂಬರಿ | 20 Rs | 5 Rs |
ಮೂಲಂಗಿ | 20 Rs | 10 Rs |
ಮೆಂತೆಪಲ್ಲೆ | 25 ರೂಗೆ ಒಂದು | 10 ರೂಗೆ ಒಂದು |
ಗಜ್ಜರಿ | 80 Rs | 30 Rs |
ಬೀಟ್ರೂಟ್ | 60 Rs | 20 Rs |
ಆಲೂಗಡ್ಡೆ | 30 Rs | 15 Rs |
ಬೆಂಡೆಕಾಯಿ | 80 Rs | 40 Rs |
ಕ್ಯಾಪ್ಸಿಕಾಮ್ | 120 Rs | 50 Rs |
ಹಾಗಲಕಾಯಿ | 80 Rs | 30 Rs |
ಇದನ್ನೂ ಓದಿ: Tamil Nadu Rain: ತಮಿಳುನಾಡಿನ ಕರಾವಳಿ ಭಾಗದಲ್ಲಿ ಭಾರಿ ಮಳೆ ಸಾಧ್ಯತೆ, 6 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ
ಮುಂಗಾರು ಕೈ ಕೊಟ್ಟ ಹಿನ್ನಲೆ ತರಕಾರಿ ಬೆಲೆ ಹೆಚ್ಚಳವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಮಾರುಕಟ್ಟೆಗೆ ತರಕಾರಿ ಬರ್ತಿಲ್ಲ. ಹೊರಗಿನ ರಾಜ್ಯದಿಂದ ಬರ್ತಿದೆ. ಹೀಗಾಗಿ ತರಕಾರಿ ಬೆಲೆ ದುಪ್ಟಟ್ಟಾಗಿದೆ. ತರಕಾರಿ ಖರೀದಿಗೆ ಗ್ರಾಹಕರು ಬಂದರೂ ಎರಡು ಕೆಜಿ ಖರೀದಿ ಮಾಡೋರು ಅರ್ಧ ಕೆಜಿ ಖರೀದಿ ಮಾಡ್ತೀದ್ದಾರೆ. ಮಳೆಯಾಗಿದ್ರೆ ಸ್ಥಳೀಯ ರೈತರು ತರಕಾರಿ ಬೆಳಿತಿದ್ರು. ಇದೀಗ ಮಳೆಯಾಗಿಲ್ಲ ತರಕಾರಿ ಬೆಳದಿಲ್ಲ. ಹೀಗಾಗಿ ಬೆಲೆ ದುಪ್ಪಟ್ಟಾಗಿದೆ ಎಂದು ತರಾಕರಿ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ