ಪತ್ನಿಗೆ ಜಿಪಿಎ ಅಧಿಕಾರ ಪತ್ರ ನೀಡಲು ಧಾರವಾಡಕ್ಕೆ ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಆಗಮನ

ವಿನಯ್ ಕೋರಿಕೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆ ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಾರೆ.

ಪತ್ನಿಗೆ ಜಿಪಿಎ ಅಧಿಕಾರ ಪತ್ರ ನೀಡಲು ಧಾರವಾಡಕ್ಕೆ ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಆಗಮನ
ಮಾಜಿ ಸಚಿವ ವಿನಯ್ ಕುಲಕರ್ಣಿ
Follow us
TV9 Web
| Updated By: sandhya thejappa

Updated on:Jul 27, 2021 | 9:17 AM

ಧಾರವಾಡ: ಯೋಗೇಶ್ ಗೌಡ ಹತ್ಯೆ ಕೇಸ್​ನಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಇಂದು (ಜುಲೈ 27) ಧಾರವಾಡಕ್ಕೆ ಆಗಮಿಸುತ್ತಿದ್ದಾರೆ. ಕಳೆದ 9 ತಿಂಗಳಿನಿಂದ ಜೈಲಿನಲ್ಲಿರುವ ವಿನಯ್, ತನ್ನ ಪತ್ನಿ ಶಿವಲೀಲಾ ಅವರಿಗೆ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ನೀಡಲು ಧಾರವಾಡಕ್ಕೆ ಬರುತ್ತಿದ್ದಾರೆ. ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲಕರ್ಣಿಯನ್ನು ಪೊಲೀಸರು ಧಾರವಾಡಕ್ಕೆ ಕರೆ ತರಲಿದ್ದಾರೆ.

ವಿನಯ್ ಕೋರಿಕೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅನುಮತಿ ನೀಡಿದ ಹಿನ್ನೆಲೆ ಧಾರವಾಡದ ಉಪ ನೋಂದಣಾಧಿಕಾರಿ ಕಚೇರಿಗೆ ಆಗಮಿಸುತ್ತಿದ್ದಾರೆ. ಮಿನಿ ವಿಧಾನಸೌಧ ಕಟ್ಟಡದಲ್ಲಿರುವ ಕಚೇರಿಗೆ ಇಂದು ಆಗಮಿಸುತ್ತಾರೆ. ಹೀಗಾಗಿ ಕಚೇರಿಗೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ಅರೆಸ್ಟ್ ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ, ಕೆಎಎಸ್ ಅಧಿಕಾರಿ ಸೋಮು ನ್ಯಾಮಗೌಡನನ್ನು ಸಿಬಿಐ ಅಧಿಕಾರಿಗಳು ಜುಲೈ 7 ರ ರಾತ್ರಿ ಗದಗಕ್ಕೆ ತೆರಳಿ, ಜುಲೈ 8ಕ್ಕೆ ಬೆಳಗಿನ ಜಾವ ಆತನನ್ನು ಅರೆಸ್ಟ್ ಮಾಡಿ ಧಾರವಾಡ ಉಪನಗರ ಠಾಣೆಗೆ ಕರೆತಂದಿದ್ದರು. ಈ ಬಂಧನದ ಹಿಂದೆ ಕುತೂಹಲಕಾರಿ ಸಂಗತಿಯಿದೆ. ಸಿಬಿಐ ಅಧಿಕಾರಿಗಳ ಮಾಸ್ಟರ್ ಪ್ಲಾನ್ ಕೆಲಸ ಮಾಡಿದೆ.

ಇದನ್ನೂ ಓದಿ

ರಾಜ್​ ಕುಂದ್ರಾ ಅಶ್ಲೀಲ ಸಿನಿಮಾ ದಂಧೆಯಲ್ಲಿ ಕನ್ನಡ ಸಿನಿಮಾ ನಟಿ ಹೆಸರು ಪ್ರಸ್ತಾಪ; ಅಸಲಿಯತ್ತು ಏನು?

ಮಾತನಾಡುವ ನೆಪದಲ್ಲಿ ಕರೆಸಿ ನಡು ರಸ್ತೆಯಲ್ಲಿ ಚಾಕುವಿನಿಂದ ಇರಿದು ಯುವಕನ ಭೀಕರ ಕೊಲೆ

(Vinay Kulkarni is coming to Dharwad to issue a GPA letter to his wife)

Published On - 8:42 am, Tue, 27 July 21