ಹುಬ್ಬಳ್ಳಿ : ಪ್ರಸ್ತುತ ಅಸೆಂಬ್ಲಿ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ (Hubli-Dharwad Central Assembly constituency) ಸಿಗುವ ವಿಶ್ವಾಸವಿದೆ. ಈ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ನಗರದಲ್ಲಿಂದು (Hubballi) ಅಂಬೇಡ್ಕರ್ ಜಯಂತಿ ಪ್ರಯುಕ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯಲ್ಲಿ (BJP) 52 ಜನ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಶೆಟ್ಟರ್‌ಗೆ ಟಿಕೆಟ್ ಸಿಗುವ ನೀರಿಕ್ಷೆ ಇದೆ. ಈಗಾಗಲೆ ನಮ್ಮ ಅಭಿಪ್ರಾಯವನ್ನು ಮುಖಂಡರ ಬಳಿ ಹೇಳಿದ್ದೇವೆ. ಎಲ್ಲವೂ ಸುಲಲಿತವಾಗಿ ಪರಿಹಾರ ಆಗಲಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯಲ್ಲಿ ಕಾಂಗ್ರೆಸ್‍ನಂತೆ ಅಪ್ಪ ಮಕ್ಕಳಿಗೆ ಟಿಕೆಟ್ ಕೊಡುವುದಿಲ್ಲ. ಕಾಂಗ್ರೆಸ್ ಯೂಸ್ ಎಂಡ್ ಥ್ರೋ ಪಕ್ಷ, ಅಂತಹ ಪಕ್ಷಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೋಗಬಾರದು ಅನ್ನೋದು ನಮ್ಮ ಅಪೇಕ್ಷೆ. ಸವದಿ ಅವರಿಗೆ ನಮ್ಮ ಪಾರ್ಟಿ ಎಲ್ಲವನ್ನೂ ಕೊಟ್ಟಿದೆ. ಅವರನ್ನು ಉಪಮುಖ್ಯಮಂತ್ರಿಯಾಗಿ ಮಾಡಿದ್ದು ನಮ್ಮ ಪಕ್ಷ. ಇಲ್ಲಿ ಅವರಿಗೆ ಉತ್ತಮ ಭವಿಷ್ಯ ಇತ್ತು ಎಂದಿದ್ದಾರೆ.
ಬಿಜೆಪಿಯಲ್ಲಿ ಟಿಕೆಟ್‍ಗೆ ಬಹಳ ಅಭ್ಯರ್ಥಿಗಳಿದ್ದರು. ಇದರಿಂದ ಕೆಲವು ಕಡೆ ಗೊಂದಲ ಆಗಿದೆ. ಯಾವ ಪಕ್ಷ ಗೆಲ್ಲುತ್ತದೆಯೋ ಅಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುತ್ತಾರೆ. ಇನ್ನೆರಡು ದಿನದಲ್ಲಿ ಪಕ್ಷದಲ್ಲಿ ಎದ್ದಿರುವ ಗೊಂದಲಗಳು ಬಗೆಹರಿಯುತ್ತವೆ. ಪಕ್ಷದ ಕಾರ್ಯಕರ್ತರು ನಮ್ಮ ಜೊತೆಗೆ ನಿಲ್ಲುತ್ತಾರೆ ಎಂದು ಅವರು ಹೇಳಿದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Fri, 14 April 23