ಹುಬ್ಬಳ್ಳಿಯಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ; ದೇಹ ಛಿದ್ರ ಛಿದ್ರ

| Updated By: sandhya thejappa

Updated on: Sep 19, 2021 | 12:03 PM

ರೈಲಿಗೆ ಸಿಲುಕಿದ ಯುವಕನ ದೇಹ ಛಿದ್ರ ಛಿದ್ರವಾಗಿದೆ. ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಹುಬ್ಬಳ್ಳಿಯಲ್ಲಿ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ; ದೇಹ ಛಿದ್ರ ಛಿದ್ರ
ಆತ್ಮಹತ್ಯೆಗೆ ಶರಣಾದ ಯುವಕ, ರೈಲು ಹಳಿಯಲ್ಲಿ ತುಂಡಾದ ಯುವಕನ ದೇಹ
Follow us on

ಹುಬ್ಬಳ್ಳಿ: ರೈಲಿಗೆ ತಲೆ ಕೊಟ್ಟು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿಯ ಅಮರಗೋಳದ ನಿವಾಸಿ ಬಸವರಾಜ ಆತ್ಮಹತ್ಯೆಗೆ ಶರಣಾದ ಯುವಕ. ರೈಲಿಗೆ ಸಿಲುಕಿದ ಯುವಕನ ದೇಹ ಛಿದ್ರ ಛಿದ್ರವಾಗಿದೆ. ಸಾವಿಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಧಾರವಾಡ: ಕೌಟುಂಬಿಕ ಕಲಹ ಹಿನ್ನೆಲೆ, ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನವಲೂರು ಬಡಾವಣೆಯಲ್ಲಿ ರಾತ್ರಿ ನಡೆದಿದೆ. ಸೋದರ ಸಂಬಂಧಿಗಳು ತೋಟದ ಮನೆಯಲ್ಲಿದ್ದ ಮಡಿವಾಳೆಪ್ಪ ಮತ್ತಿಕಟ್ಟಿ ಮೇಲೆ ಹಲ್ಲೆ ಮಾಡಿದ್ದಾರೆ. ಗಾಯಾಳು ಮಡಿವಾಳೆಪ್ಪ ಧಾರವಾಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಆಸ್ತಿ ವಿಚಾರಕ್ಕೆ ಕೊಲೆಗೆ ಯತ್ನಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ವೃದ್ಧೆಯ ಮೇಲೆ ಕಳ್ಳನಿಂದ ಹಲ್ಲೆ
ಕಲಬುರಗಿ: ಮನೆಗಳ್ಳತನಕ್ಕೆ ಬಂದಿದ್ದವನು ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಳ್ಳೂರು ಗ್ರಾಮದಲ್ಲಿ ಗುಂಡಮ್ಮ(75) ಎಂಬ ವೃದ್ಧೆಯ ಮೇಲೆ ಹಲ್ಲೆ ಮಾಡಿದ್ದಾನೆ. ಕಳ್ಳತನಕ್ಕೆ ಬಂದಿದ್ದವನನ್ನು ನೋಡಿ ವೃದ್ಧೆ ಚೀರಾಟ ನಡೆಸಿದ ಹಿನ್ನೆಲೆ ಕಳ್ಳ ಹಲ್ಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಮಚ್ಚಿನಿಂದ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಕಳ್ಳ ಪರಾರಿಯಾಗಿದ್ದಾನೆ. ತೀವ್ರ ಗಾಯಗೊಂಡ ವೃದ್ಧೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ

ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಜ್ವರದಿಂದ 12 ಮಂದಿ ಸಾವು; ಡೆಂಗ್ಯೂ, ಮಲೇರಿಯಾ ಕಾರಣ ಎಂದ ಅಧಿಕಾರಿಗಳು

ಕುಟುಂಬವೇ ಮಣ್ಣಾದ್ರೂ ಸಂಪಾದಕ ಶಂಕರ್​ಗೆ ಹಣ-ಚಿನ್ನಾಭರಣದ ಆಸೆ? ಹೆಚ್ಚಾಯ್ತು ಅನುಮಾನ

(Young man commits suicide in hubli train track)