ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah)ಮಾಸ್ ಲೀಡರ್, ಜನಪರ ನಾಯಕ, ಮಾತಾಡಿದರೆ ವಿಪಕ್ಷಗಳಿಗೆ ಗುಮ್ಮುವ ಟಗರು ಇಂತಹ ಟಗರಿಗೆ ಈಗ ಕ್ಷೇತ್ರದ ಹುಡುಕಾಟವೇ ಒಂದು ಚಾಲೆಂಜ್ ಆಗಿದೆ. ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬರ್ತಿದ್ದವು. ಯಾಕೆಂದರೆ ಕಳೆದ ಬಾರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಒಂದು ಕ್ಷೇತ್ರದಲ್ಲಿ ಗೆದ್ದಿದ್ದರು. ಆದರೆ ಈ ಬಾರಿ ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಹೈಕಮಾಂಡ್ ಬ್ರೆಕ್ ಹಾಕಿದೆಯಾ ಎಂಬ ಸಂಶಯ ಕಾಡುತ್ತಿದೆ. ಸಿದ್ದರಾಮಯ್ಯ ದೂರ ಅಂತ ಬಾದಾಮಿ ಬಿಟ್ಟಿದ್ದು ಈಗ ಕೋಲಾರ ಅಂತಿದ್ದಾರೆ. ಆದರೆ ಎಲ್ಲೂ ಕೂಡ ಎರಡು ಕ್ಷೇತ್ರದಲ್ಲಿ ನಿಲ್ಲುವ ಬಗ್ಗೆ ಮಾತಾಡಿಲ್ಲ. ಇದರಿಂದ ಟಗರಿಗೆ ಹೈಕಮಾಂಡ್ ಲಗಾಮು ಹಾಕಿದೆಯಾ ಎಂಬ ಮಾತುಗಳು ಇದೀಗ ಶುರುವಾಗಿವೆ.
ಈಗಾಗಲೇ ಕೋಲಾರ ಕ್ಷೇತ್ರ ಘೋಷಿಸಿರುವ ಸಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಪುತ್ರ ಯತೀಂದ್ರನಿಂದಲೂ ಒತ್ತಡವಿದ್ದು, ಕೋಲಾರದ ಜೊತೆ ವರುಣಾದಲ್ಲಿಯೂ ಕೂಡ ಸಿದ್ದರಾಮಯ್ಯ ಸ್ಪರ್ಧೆ ಮಾಡುವಂತೆ ಬೆಂಬಲಿಗರು ಮನವಿ ಮಾಡಿದ್ದಾರೆ. ಇನ್ನು ದೇವರ ಭವಿಷ್ಯ ಕೂಡ ಎರಡು ಕ್ಷೇತ್ರ ಅಂತಿದೆ. 2 ಕ್ಷೇತ್ರದಲ್ಲಿ ಸ್ಪರ್ಧಿಸಿದ್ರೆ ಸೇಫ್ ಅಂತಾ ಬೆಂಬಲಿಗರ ಲೆಕ್ಕಾಚಾರ ಇದೆ. ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿರುವ ಸಿದ್ದರಾಮಯ್ಯನವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಸಿದ್ದು ಅಲೆಮಾರಿ ಎಂಬ ಪ್ರಶ್ನೆಗೆ ಗರಂ ಆದ ಸಿದ್ದು ನಾನೇನೂ ಕ್ಷೇತ್ರವಿಲ್ಲದೆ ಅಲೆಮಾರಿ ಆಗಿಲ್ಲ, ಮೋದಿ 2 ಕಡೆ ಸ್ಪರ್ಧಿಸಿದ್ರೆ ದೊಡ್ಡ ಲೀಡರಾ.? ಸಿದ್ದರಾಮಯ್ಯ ಎರಡು ಕಡೆ ನಿಂತ್ಕೋಬಾರದಾ? ಜನ ಎಲ್ಲಿ ಪ್ರೀತಿ ತೋರಿಸ್ತಾರೋ ಅಲ್ಲಿ ಸ್ಪರ್ಧೆ ಮಾಡ್ತಿನಿ ಎಂದಿದ್ದಾರೆ.
ಇನ್ನು ಸಿದ್ದರಾಮಯ್ಯ ಒಂದೇ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯುವ ಹೇಳಿಕೆ ಹಿಂದೆ ಡಿಕೆಶಿ ಮಾಸ್ಟರ್ ಮೈಂಡ್ ಏನಾದರೂ ಇದೆಯಾ ಎಂಬ ಅನುಮಾನವಿದೆ. ಸಿದ್ದರಾಮಯ್ಯ ಅವರ 2 ಕ್ಷೇತ್ರದ ಕನಸಿಗೆ ತಣ್ಣೀರೆರಚಿದ್ರಾ ಡಿಕೆ? ಒಂದೇ ಅರ್ಜಿ, ಒಂದೇ ಟಿಕೆಟ್ ಎಂದು ಡಿಕೆಶಿ ಖಡಕ್ ಆಗಿ ಹೇಳಿದ್ದಾರೆ. ಸಿದ್ದರಾಮಯ್ಯರಿಂದಲೂ ಒಂದೇ ಕ್ಷೇತ್ರದ ಆಯ್ಕೆ ಮಾತು ಬರುವ ಮೂಲಕ ಸಿದ್ದು ಎರಡು ಕ್ಷೇತ್ರದ ಆಯ್ಕೆ ಕಂಪ್ಲೀಟ್ ಕೈ ಬಿಟ್ಟರಾ ಎಂಬಂತಿದೆ. ಸಿದ್ದರಾಮಯ್ಯ ಅವರೇ ನೇರವಾಗಿ ಒಂದೇ ಕಡೆ ಸ್ಪರ್ಧೆ ಮಾಡ್ತಿನಿ ಎಂದಿದ್ದಾರೆ. ಸಿದ್ದರಾಮಯ್ಯ ಒಂದೇ ಅರ್ಜಿ ಹಾಕಿದ್ದಾರೆ. ಅಂತಿಮವಾಗಿ ಈ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ ಎನ್ನುವ ಮೂಲಕ ಸಿದ್ದು ಕಡೆಯೇ ಬೊಟ್ಟು ಮಾಡಿ ಹೈಕಮಾಂಡ್ ಮೇಲೆ ಹಾಕಿ ಜಾರಿಕೊಂಡಿದ್ದಾರೆ ಶಿವಕುಮಾರ್.
ಇದನ್ನೂ ಓದಿ:ಕೋಲಾರ ಕುರುಬರ ಸಂಘದಲ್ಲಿ ಕೈ ವಿರೋಧಿ ಭಾವನೆ ಇದೆ: ರಾಜಕೀಯವಾಗಿ ಬಳಸಿಕೊಳ್ಳಿ- ಕಾರ್ಯಕರ್ತರಿಗೆ ಬಿ ಎಲ್ ಸಂತೋಷ್ ಸೂಚನೆ
ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಎರಡು ಕ್ಷೇತ್ರ ಸೇಫ್ ಗೇಮ್ಗೆ ಹೈಕಮಾಂಡ್ ಬ್ರೆಕ್ ಹಾಕುತ್ತಿದೆ. ಇದರ ಹಿಂದೆ ಡಿಕೆ ಶಿವಕುಮಾರ್ ಪಾತ್ರದ ಸಂಶಯವಿದ್ದು. ಸಿದ್ದು ಯಾವ ಕ್ಷೇತ್ರ, ಎಷ್ಟು ಕಡೆ ಸ್ಪರ್ಧೆ ಎಂಬ ಕುತೂಹಲ ಮನೆ ಮಾಡಿದೆ.
ವರದಿ: ರವಿ ಮೂಕಿ ಟಿವಿ9 ಬಾಗಲಕೋಟೆ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ