
ಬೆಳಗಾವಿ: ಜಿಲ್ಲೆಯ ಹಿಂಡಲಗಾ ಜೈಲಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ರಾಜಾತಿಥ್ಯ ನೀಡುತ್ತಿರುವ ಆರೋಪ ಕೇಳಿಬರುತ್ತಿದ್ದಂತೆ ಜೈಲು ಅಧೀಕ್ಷಕ ಕೃಷ್ಣಕುಮಾರ್ ಇಡೀ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಟಿವಿ9 ನಿನ್ನೆಯಷ್ಟೇ ವಿನಯ್ ಕುಲಕರ್ಣಿ ಹಾಗೂ ಕಾರಾಗೃಹದ ಜೈಲು ಡೈರಿಯನ್ನು ಬಟಾಬಯಲು ಮಾಡಿತ್ತು. ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ DIG ಸೋಮಶೇಖರ್ ಹಿಂಡಲಗಾ ಜೈಲಿಗೆ ಭೇಟಿ ಕೊಟ್ಟರು. ಆದರೆ, ಜೈಲು ಅಧೀಕ್ಷಕ ಕೃಷ್ಣಕುಮಾರ್ ಕೊಟ್ಟ ವರದಿಯನ್ನೇ ಒಪ್ಪಿಕೊಂಡು ಮೇಲಾಧಿಕಾರಿ DIG ಸೋಮಶೇಖರ್ ವಾಪಸ್ ಆಗಿದ್ದಾರೆ ಎಂದು ಹೇಳಲಾಗಿದೆ. ಇದೇ ವೇಳೆ, ಇನ್ನು ಮುಂದೆ ವಿನಯ್ ಕುಲಕರ್ಣಿಗೆ ರಾಜಾತಿಥ್ಯ ನೀಡದಂತೆ ಸೋಮಶೇಖರ್ ಕೇವಲ ವಾರ್ನ್ ಮಾಡಿ ಹೋಗಿದ್ದಾರಂತೆ.
ದೊಡ್ಡ ಬ್ಯಾಗ್ನಲ್ಲಿ ಅಷ್ಟೊಂದು ಮೆಡಿಸನ್ ತರ್ತಾರಾ?
ಈ ನಡುವೆ, ವಿನಯ್ ಕುಲಕರ್ಣಿಗೆ ದೊಡ್ಡ ಬ್ಯಾಗ್ನಲ್ಲಿ ಊಟ, ಎಣ್ಣೆ ಸರಬರಾಜು ಆಗ್ತಿದ್ರೂ ಅದು ಕೇವಲ ಔಷಧಿ ಅಂತಾ ಜೈಲು ಅಧೀಕ್ಷಕ ಕೃಷ್ಣಕುಮಾರ್ರಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ ಎಂಬ ಮಾತು ಕೇಳಿಬಂದಿದೆ.
ದೊಡ್ಡ ಬ್ಯಾಗ್ನಲ್ಲಿ ಅಷ್ಟೊಂದು ಮೆಡಿಸನ್ ತರ್ತಾರಾ? ಹೊರಗಿನಿಂದ ಅಷ್ಟು ಪ್ರಮಾಣದಲ್ಲಿ ಔಷಧಿ ತರಿಸಿವಷ್ಟು ವಿನಯ್ ಕುಲಕರ್ಣಿಯ ಆರೋಗ್ಯ ಹದಗೆಟ್ಟಿದ್ಯಾ? ಹಾಗಾದ್ರೆ, ಅಷ್ಟೊಂದು ಆರೋಗ್ಯ ಹದಗೆಟ್ಟಿದ್ರೂ ವಿನಯ್ ಕುಲಕರ್ಣಿಯವರನ್ನು ಜೈಲಿನಲ್ಲಿ ಇಟ್ಟುಕೊಂಡಿದ್ಯಾಕೆ? ಅವರನ್ನು ಆಸ್ಪತ್ರೆಗೆ ರೆಫರ್ ಯಾಕೆ ಮಾಡಿಲ್ಲ ಎಂಬ ಹತ್ತು ಹಲವಾರು ಪ್ರಶ್ನೆಗಳು ಇದೇ ಸಂದರ್ಭದಲ್ಲಿ ಮೂಡುತ್ತಿವೆ.
ಸ್ವತಃ ಜೈಲಿನ ಸಾಮಾನ್ಯ ಕೈದಿಗಳು ಆಕ್ರೋಶ
ಈ ಮಧ್ಯೆ, ಮಾಜಿ ಸಚಿವನಿಗೆ ಕಾರಾಗೃಹದಲ್ಲಿ ನೀಡಲಾಗುತ್ತಿರುವ ರಾಜಾತಿಥ್ಯದ ಬಗ್ಗೆ ಸಾಕ್ಷ್ಯ ಸಮೇತ ಟಿವಿ9 ಬಹಿರಂಗ ಪಡಿಸಿದ್ರೂ ಜೈಲು ಅಧಿಕಾರಿಗಳ ಮೇಲೆ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ, ಸರ್ಕಾರದ ವಿರುದ್ಧ ಜನಸಾಮಾನ್ಯರಲ್ಲ ಬದಲಿಗೆ ಖುದ್ದು ಜೈಲಿನ ಸಾಮಾನ್ಯ ಕೈದಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಜನಸಾಮಾನ್ಯರಿಗೊಂದು ನ್ಯಾಯ ದುಡ್ಡು ಇದ್ದವರಿಗೆ ಒಂದು ನ್ಯಾಯನಾ ಅಂತಾ ಸಾಮಾನ್ಯ ಕೈದಿಗಳು ಈಗ ಸರ್ಕಾರಕ್ಕೆ ಸವಾಲ್ ಹಾಕಿದ್ದಾರಂತೆ.
Published On - 11:28 am, Thu, 3 December 20