ದೇವರ ಕೋಣೆಯಲ್ಲಿ ನಾಗರಹಾವು ಪ್ರತ್ಯಕ್ಷ.. ಕರ್ಪೂರ ಹಚ್ಚಿ ಆರತಿ ಬೆಳಗಿ ಕಾಡಿಗೆ ಬಿಟ್ಟುಬಂದ್ರು
ಮನೆಯೊಂದರ ದೇವರ ಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ಬಸವರಾಜು ಎಂಬುವವರ ಮನೆಯ ದೇವರ ಕೋಣೆಯಲ್ಲಿ ನಾಗರ ಹಾವಿನ ಮರಿ ಪ್ರತ್ಯಕ್ಷವಾಗಿದೆ.

ದೇವರ ಮನೆಯಲ್ಲಿ ಹಾವು ಪ್ರತ್ಯಕ್ಷ
ನೆಲಮಂಗಲ: ಮನೆಯೊಂದರ ದೇವರ ಕೋಣೆಯಲ್ಲಿ ನಾಗರಹಾವು ಕಾಣಿಸಿಕೊಂಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ನಿಡವಂದ ಗ್ರಾಮದ ಬಸವರಾಜು ಎಂಬುವವರ ಮನೆಯ ದೇವರ ಕೋಣೆಯಲ್ಲಿ ನಾಗರ ಹಾವಿನ ಮರಿ ಪ್ರತ್ಯಕ್ಷವಾಗಿದೆ.
ಈ ಹಾವಿನ ಮರಿ ಕಂಡು ಮನೆಯವರು ಆತಂಕಕ್ಕೆ ಒಳಗಾಗಿದ್ರು. ಸದ್ಯ ಸ್ಥಳಕ್ಕೆ ಬಂದ ಸ್ನೇಕ್ ರಾಜು ಅವಿತಿದ್ದ ಹಾವನ್ನ ರಕ್ಷಣೆ ಮಾಡಿದ್ದಾರೆ. ಮನೆಯವರಲ್ಲಿದ್ದ ಭಯವನ್ನು ದೂರ ಮಾಡಿದ್ದಾರೆ. ಬಳಿಕ ಮನೆ ಮಾಲೀಕ ಬಸವರಾಜು ನಾಗ ರಾಜನಿಗೆ ಕರ್ಪೂರ ಹಚ್ಚಿ ಆರತಿ ಬೆಳಗಿ ಸಾವನದುರ್ಗ ಅರಣ್ಯ ಪ್ರದೇಶದಲ್ಲಿ ಹಾವನ್ನು ಬಿಟ್ಟು ಬಂದಿದ್ದಾರೆ.

ಮೈಸೂರು: ನಿಜದ ನಾಗರ ಕಂಡರೆ ಪೂಜೆ ಮಾಡುವರಯ್ಯಾ, ಕೇರೆ ಹಾವು ಕಂಡರೆ?
Published On - 9:29 am, Thu, 3 December 20




