ಅನರ್ಹ ಶಾಸಕರು ಆಪರೇಷನ್ ಕಮಲ ಸಂತ್ರಸ್ತರು ಎಂದ ಹೆಚ್​ಡಿ ಕುಮಾರಸ್ವಾಮಿ

|

Updated on: Sep 22, 2019 | 4:10 PM

ರಾಜ್ಯಕ್ಕೆ ಬರಬೇಕಿರುವ ನೆರೆ ಪರಿಹಾರ ಹೇಳಲು ಸಿಎಂಗೆ ಪುರುಸೊತ್ತಿಲ್ಲ. ಆದ್ರೆ ಅನರ್ಹ ಶಾಸಕರ ಭವಿಷ್ಯ ಉಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಭಾವ ಬಳಸಿಕೊಂಡು ಆಪರೇಷನ್ ಕಮಲ ಮಾಡಿದ್ದಾರೆ. ಈಗ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್​ ಕಮಲದ ಸಂತ್ರಸ್ತರನ್ನು ರಕ್ಷಿಸಲು ಸಿಎಂ ಬಿಎಸ್​ವೈ ಯತ್ನಿಸುತ್ತಿದ್ದಾರೆ. ಇನ್ನು ದೆಹಲಿಗೆ ತೆರಳಲು ಸಿಎಂಗೆ ಸಾಕಷ್ಟು ಸಮಯಾವಕಾಶವಿದೆ. ಆದ್ರೆ ನೆರೆ ಪರಿಹಾರ ಕೇಳಲು ಸಮಯ ಸಿಗಲಿಲ್ಲ ಎಂದು ಟ್ಟಿಟ್ಟರ್​ನಲ್ಲಿ […]

ಅನರ್ಹ ಶಾಸಕರು ಆಪರೇಷನ್ ಕಮಲ ಸಂತ್ರಸ್ತರು ಎಂದ ಹೆಚ್​ಡಿ ಕುಮಾರಸ್ವಾಮಿ
Follow us on

ರಾಜ್ಯಕ್ಕೆ ಬರಬೇಕಿರುವ ನೆರೆ ಪರಿಹಾರ ಹೇಳಲು ಸಿಎಂಗೆ ಪುರುಸೊತ್ತಿಲ್ಲ. ಆದ್ರೆ ಅನರ್ಹ ಶಾಸಕರ ಭವಿಷ್ಯ ಉಳಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಭಾವ ಬಳಸಿಕೊಂಡು ಆಪರೇಷನ್ ಕಮಲ ಮಾಡಿದ್ದಾರೆ. ಈಗ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್​ ಕಮಲದ ಸಂತ್ರಸ್ತರನ್ನು ರಕ್ಷಿಸಲು ಸಿಎಂ ಬಿಎಸ್​ವೈ ಯತ್ನಿಸುತ್ತಿದ್ದಾರೆ. ಇನ್ನು ದೆಹಲಿಗೆ ತೆರಳಲು ಸಿಎಂಗೆ ಸಾಕಷ್ಟು ಸಮಯಾವಕಾಶವಿದೆ. ಆದ್ರೆ ನೆರೆ ಪರಿಹಾರ ಕೇಳಲು ಸಮಯ ಸಿಗಲಿಲ್ಲ ಎಂದು ಟ್ಟಿಟ್ಟರ್​ನಲ್ಲಿ ಕುಮಾರಸ್ವಾಮಿ ಟೀಕಿಸಿದ್ದಾರೆ.

Published On - 1:15 pm, Sun, 22 September 19