ಪ್ರವಾಹಗಳು ತಲೆದೋರಿದರೆ ಎದುರಿಸಲು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ: ಸಿದ್ದರಾಮಯ್ಯ
ಬರ ಪರಿಹಾರದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ತಮ್ಮ ಸರ್ಕಾರ ಈಗಾಗಲೇ ರೈತರಿಗೆ ತಲಾ ₹ 2,000 ಯಂತೆ ವಿತರಣೆ ಮಾಡಿದೆ. ಎನ್ ಡಿ ಆರ್ ಎಫ್ ನಿಂದ ₹3,454 ಕೋಟಿ ನೆರವು ಬಂದಿದೆ, ಅದನ್ನು ಹಂಚುವ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸಿಂಗ್ ನಡೆಸಿದ ಬಳಿಕ ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮೇ ತಿಂಗಳಲ್ಲಿ ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ ಮತ್ತು ರಾಜ್ಯದ ಕೆಲ ಪ್ರದೇಶಗಳಲ್ಲಿ ಬಿತ್ತನೆ ಕೆಲಸ ಪ್ರಾರಂಭವಾಗಿದೆ ಎಂದು ಹೇಳಿದರು. ಹವಮಾನ ಇಲಾಖೆ (MET department) ವರದಿ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಮಳೆಯಾಗಲಿದೆ. ಅತಿಹೆಚ್ಚು ಮಳೆ ಕಾಣುವ ರಾಜ್ಯದ ಪ್ರದೇಶಗಳಲ್ಲಿ ಪ್ರವಾಹಗಳು (floods) ಉಂಟಾಗುವ ಪರಿಸ್ಥಿತಿ ತಲೆದೋರಿದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ, ಹೂಳೆತ್ತ್ತುವ ಕೆಲಸ ಅರಂಭಿಸಿ ನೀರು ಸರಾಗವಾಗಿ ಕೆರೆಕುಂಟೆಗಳಿಗೆ ಹರಿದುಹೋಗುವಂತೆ ಮಾಡುವುದು, ನದಿ ನೀರುಹರಿವಿಗೆ ಅಡೆತಡೆಗಳು ಉಂಟಾಗಿದ್ದರೆ ಅವುಗಳನ್ನು ನಿವಾರಿಸುವುದು-ಒಟ್ಟಿನಲ್ಲಿ ಜನರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಬರ ಪರಿಹಾರದ ಬಗ್ಗೆ ಮಾತಾಡಿದ ಸಿದ್ದರಾಮಯ್ಯ ತಮ್ಮ ಸರ್ಕಾರ ಈಗಾಗಲೇ ರೈತರಿಗೆ ತಲಾ ₹ 2,000 ಯಂತೆ ವಿತರಣೆ ಮಾಡಿದೆ. ಎನ್ ಡಿ ಆರ್ ಎಫ್ ನಿಂದ ₹3,454 ಕೋಟಿ ನೆರವು ಬಂದಿದೆ, ಅದನ್ನು ಹಂಚುವ ಕೆಲಸ ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ