ಕೃಷಿ ಕೆಲಸಕ್ಕೆ ಮಕ್ಕಳ ಬದುಕು ಬಲಿ, 10 ಶಾಲಾ ಮಕ್ಕಳ ರಕ್ಷಣೆ

|

Updated on: Nov 20, 2019 | 2:05 PM

ರಾಯಚೂರು: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ನಾಗಡದಿನ್ನಿ ಕ್ರಾಸ್ ಬಳಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 10 ಮಂದಿ ಶಾಲಾ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ. 3 ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ದಾಳಿ ಮಾಡಿದ ಅಧಿಕಾರಿಗಳು ಮಕ್ಕಳನ್ನ ರಕ್ಷಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಪೋಷಕರಿಂದ ವಿರೋಧವಿತ್ತು. ದಾಳಿ ವೇಳೆ ಅಧಿಕಾರಿಗಳ ಜೊತೆ ಪೋಷಕರ ವಾಗ್ವಾದ ನಡೆದಿದೆ. 150-200 ರೂಪಾಯಿ ಕೂಲಿ ಆಸೆಗೆ ಪೋಷಕರೇ ಮಕ್ಕಳನ್ನು ಕೃಷಿ ಚಟುವಟಿಕೆಗೆ ಬಾಲ ಕಾರ್ಮಿಕರಾಗಿ […]

ಕೃಷಿ ಕೆಲಸಕ್ಕೆ ಮಕ್ಕಳ ಬದುಕು ಬಲಿ, 10 ಶಾಲಾ ಮಕ್ಕಳ ರಕ್ಷಣೆ
Follow us on

ರಾಯಚೂರು: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ನಾಗಡದಿನ್ನಿ ಕ್ರಾಸ್ ಬಳಿ ಕೂಲಿ ಕೆಲಸಕ್ಕೆ ಕರೆದೊಯ್ಯುತ್ತಿದ್ದ 10 ಮಂದಿ ಶಾಲಾ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.

3 ಗೂಡ್ಸ್ ವಾಹನಗಳಲ್ಲಿ ಮಕ್ಕಳನ್ನ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ದಾಳಿ ಮಾಡಿದ ಅಧಿಕಾರಿಗಳು ಮಕ್ಕಳನ್ನ ರಕ್ಷಿಸಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕೆ ಪೋಷಕರಿಂದ ವಿರೋಧವಿತ್ತು. ದಾಳಿ ವೇಳೆ ಅಧಿಕಾರಿಗಳ ಜೊತೆ ಪೋಷಕರ ವಾಗ್ವಾದ ನಡೆದಿದೆ. 150-200 ರೂಪಾಯಿ ಕೂಲಿ ಆಸೆಗೆ ಪೋಷಕರೇ ಮಕ್ಕಳನ್ನು ಕೃಷಿ ಚಟುವಟಿಕೆಗೆ ಬಾಲ ಕಾರ್ಮಿಕರಾಗಿ ಕೆಲಸ ಮಾಡಿಸುತ್ತಿದ್ದಾರೆ.

3 ಗೂಡ್ಸ್ ವಾಹನಗಳನ್ನು ಜಪ್ತಿ ಮಾಡಿದ್ದು, ಮೂವರು ಚಾಲಕರನ್ನು ಬಂಧಸಿಲಾಗಿದೆ. ರಾಯಚೂರ ಜಿಲ್ಲೆಯ ಸಿರವಾರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Published On - 2:02 pm, Wed, 20 November 19