ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ಆದ್ರೆ ಕೆಲ ಅಕೌಂಟಿಂಗ್ ವಿಚಾರದಲ್ಲಿ ಸ್ವಲ್ಪ ಮಿಸ್ಟೇಕ್ ಆಗಿದೆ ಅಷ್ಟೇ ಎಂದು ಡಿಕೆ ಶಿವಕುಮಾರ್, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಬಳಿ ಅವಲತ್ತುಕೊಂಡಿದ್ದಾರೆ.
ಕಳೆದ ವಾರ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದೆ. ಆಗ ನಾನು ಯಾವುದೇ ತಪ್ಪು ಮಾಡಿಲ್ಲ, ಇಡಿ ಅಧಿಕಾರಿಗಳು ನನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ. ಕೆಲ ಅಕೌಂಟ್ನಲ್ಲಿ ಮಾತ್ರ ಸ್ವಲ್ಪ ತಪ್ಪಾಗಿದೆ ಅಂತ ನನ್ನ ಬಳಿ ಡಿಕೆ ಶಿವಕುಮಾರ್ ಹೇಳಿದ್ರು ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.
ಸದ್ಯ ಕಾಂಗ್ರೆಸ್ನ ಮಾಜಿ ಸಚಿವ ಡಿಕೆ ಶಿವಕುಮಾರ್ ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಂದು ಆರ್ಎಂಎಲ್ ಆಸ್ಪತ್ರೆಯಿಂದ ನೇರವಾಗಿ ದೆಹಲಿಯ ತಿಹಾರ್ ಜೈಲಿಗೆ ಡಿಕೆಶಿಯನ್ನು ಶಿಫ್ಟ್ ಮಾಡಲಾಗಿದೆ.
Published On - 2:20 pm, Thu, 19 September 19