ಶುಭ ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ?

ಶುಭ ಶುಕ್ರವಾರ ಬೆಂಗಳೂರಿನಲ್ಲಿ ಚಿನ್ನದ ದರ  ಎಷ್ಟಿದೆ?

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯವಾಗಿದ್ದು, ಇಂದು (ಶುಕ್ರವಾರ) ರಾಜ್ಯಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 35,150 ರೂಪಾಯಿ ಇದ್ದರೆ, ಒಂದು ಕೆ.ಜಿ ಬೆಳ್ಳಿ ಬೆಲೆ 48,770 ರೂಪಾಯಿ ಇದೆ. ಭಾರತೀಯ ಸಂಪ್ರದಾಯ ಮತ್ತು ಜನಜೀನವದಲ್ಲಿ ಚಿನ್ನ ಸದಾ ಫಳಫಳ ಹಳೆಯುತ್ತಿರುತ್ತದೆ.  ಅದು ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಸಿರಿವಂತಿಕೆಯ ಪ್ರತೀಕ. ಕಷ್ಟಕ್ಕೆ ಸಾಥ್ ನೀಡುವ ಬಂಧು. ಆದರೆ ಕೆಲವೊಮ್ಮೆ ಆ ಹಳದಿ ಲೋಹ ತನ್ನ ಹೊಳಪನ್ನು ಕಳೆದುಕೊಂಡು ಮಂಕಾಗುತ್ತಿರುತ್ತದೆ. ಗಮನಿಸಿ, […]

sadhu srinath

|

Sep 20, 2019 | 12:11 PM

ಬೆಂಗಳೂರು: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಸಾಮಾನ್ಯವಾಗಿದ್ದು, ಇಂದು (ಶುಕ್ರವಾರ) ರಾಜ್ಯಧಾನಿ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಬಂಗಾರದ ಬೆಲೆ 35,150 ರೂಪಾಯಿ ಇದ್ದರೆ, ಒಂದು ಕೆ.ಜಿ ಬೆಳ್ಳಿ ಬೆಲೆ 48,770 ರೂಪಾಯಿ ಇದೆ.

ಭಾರತೀಯ ಸಂಪ್ರದಾಯ ಮತ್ತು ಜನಜೀನವದಲ್ಲಿ ಚಿನ್ನ ಸದಾ ಫಳಫಳ ಹಳೆಯುತ್ತಿರುತ್ತದೆ.  ಅದು ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಸಿರಿವಂತಿಕೆಯ ಪ್ರತೀಕ. ಕಷ್ಟಕ್ಕೆ ಸಾಥ್ ನೀಡುವ ಬಂಧು. ಆದರೆ ಕೆಲವೊಮ್ಮೆ ಆ ಹಳದಿ ಲೋಹ ತನ್ನ ಹೊಳಪನ್ನು ಕಳೆದುಕೊಂಡು ಮಂಕಾಗುತ್ತಿರುತ್ತದೆ. ಗಮನಿಸಿ, ಇದು ಬೆಲೆಯಲ್ಲಿ ಮಾತ್ರ.

ಇದೀಗ ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. ಬಡವರು ಚಿನ್ನ ಖರೀದಿಸಲಾಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಒಮ್ಮೆ ರಾಕೆಟ್ ನಂತೆ ಏರಿದರೆ ಕೆಲವೊಮ್ಮೆ ಕೊಂಚ ಸುಧಾರಣೆ ಕಾಣುತ್ತದೆ. ಒಟ್ಟಿನಲ್ಲಿ ಚಿನ್ನದ ಬೆಲೆ ಹಾವು ಏಣಿಯ ಆಟವಾಡುತ್ತಿದೆ.

ಈಗ ಹಬ್ಬದ ಸಾಲು. ಈ ಸಂದರ್ಭದಲ್ಲಿ ಚಿನ್ನದ ಬೆಲೆ ಏನಾಗಬಹುದು. ಚಿನ್ನದ ದರದಲ್ಲಿನ ವ್ಯತ್ಯಾಸ ಏನಿದೆ ಎಂಬುದನ್ನ ಇಲ್ಲಿ ತಮ್ಮ ಮುಂದಿಡಲಾಗಿದೆ.

ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ದರ 1 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 3,515,  ನಿನ್ನೆಯ ದರ 3,545. ಅಂದ್ರೆ, ₹ 30 ಇಳಿಕೆ ಕಂಡಿದೆ.

8 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 28,120, ನಿನ್ನೆಯ ದರ ₹ 28,360.  ಅಂದ್ರೆ, ₹ 240 ಇಳಿಕೆ ಕಂಡಿದೆ.

10 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 35,150. ನಿನ್ನೆಯ ದರ ₹ 35,450.  ಅಂದ್ರೆ, ₹ 300 ಇಳಿಕೆ ಕಂಡಿದೆ.

100 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 3,51,500. ನಿನ್ನೆಯ ದರ ₹ 3,54,500 ಅಂದ್ರೆ, ₹ 3,000 ಇಳಿಕೆ ಕಂಡಿದೆ.

ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ದರ 1 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 3,834 ನಿನ್ನೆಯ ದರ ₹ 3,864. ಅಂದ್ರೆ, ₹ 30 ಇಳಿಕೆ ಕಂಡಿದೆ.

8 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 30,672. ನಿನ್ನೆಯ ದರ ₹ 30,912. ಅಂದ್ರೆ, ₹ 240 ಇಳಿಕೆ ಕಂಡಿದೆ

10 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 38,340. ನಿನ್ನೆಯ ದರ ₹ 38,640. ಅಂದ್ರೆ, ₹ 300 ಇಳಿಕೆ ಕಂಡಿದೆ.

100 ಗ್ರಾಂ ಚಿನ್ನಕ್ಕೆ ಇಂದಿನ ದರ ₹ 3,83,400. ನಿನ್ನೆಯ ದರ ₹ 3,86,400. ಅಂದ್ರೆ, ₹ 3,000 ಇಳಿಕೆ ಕಂಡಿದೆ.

ಸುಮಾರು ಒಂದು ತಿಂಗಳಿಂದ ಹಳದಿ ಲೋಹದ 24 ಕ್ಯಾರೆಟ್ ದರ 10 ಗ್ರಾಂಗೆ ₹ 38,370 ರಿಂದ  ಇದೀಗ ಮತ್ತೇ ಅದೇ 10 ಗ್ರಾಂ ಚಿನ್ನಕ್ಕೆ ₹ 38,340 ದರಕ್ಕೆ  ಬಂದು ನಿಂತಿದೆ. ಆದರೆ ಇದರ ಮಧ್ಯೆ ಬಹಳ ಏರಿಳಿತಗಳಾಗಿದ್ದು, ಸೆಪ್ಟೆಂಬರ್ ನಲ್ಲಿ ₹ 40,000 ಕ್ಕೆ ಏರಿತ್ತು. ಈಗ ಮತ್ತೆ ಕಡಿಮೆ ಆಗುವ ಸಾಧ್ಯತೆ ಕಂಡು ಬಂದಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಮುಸುಕಿನ ಗುದ್ದಾಟ ಚಿನ್ನದ ಬೆಲೆಯಲ್ಲಿ ಏರುಪೇರಾಗಲು ಮುಖ್ಯ ಕಾರಣವಾಗಿತ್ತು. ಬೆಲೆ ಹೆಚ್ಚಾದಂತೆ ಚಿನ್ನ ಖರೀದಿಸುವವರ ಸಂಖ್ಯೆ ಕೂಡ ಇಳಿದಿತ್ತು. ಆದರೆ ಈಗ ಬೆಲೆ ಇಳಿದಿದೆ. ಆದರೆ ಮತ್ತೆ ನಾಳೆ ಬೆಲೆ ಹೀಗೆಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ.

ಅಂತಾರಾಷ್ಟ್ರೀಯ ಚಿನ್ನ ಮಾರಾಟಗಾರರ ಒಕ್ಕೂಟದ ಪ್ರಕಾರ ಭಾರತದಿಂದ ಚಿನ್ನದ ಬೇಡಿಕೆ  ಏರುತ್ತಲೇ ಇದೆ. ಗಮನಾರ್ಹವೆಂದ್ರೆ ಚಿನ್ನದ ಬೇಡಿಕೆ ಕುಸಿಯುತ್ತಿದೆ.

Follow us on

Related Stories

Most Read Stories

Click on your DTH Provider to Add TV9 Kannada