ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣ; ಮೃತರ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ನೀಡಿದ ಡಿ.ಕೆ.ಶಿವಕುಮಾರ್

| Updated By: sandhya thejappa

Updated on: Jun 27, 2021 | 12:33 PM

ಆಕ್ಸಿಜನ್ ಸಿಗದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಇದು ಸರ್ಕಾರವೇ ಮಾಡಿರುವ ಕೊಲೆ. ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ ಎಂದು ನ್ಯಾಯಾಲಯವೇ ಹೇಳಿದೆ. ಇಷ್ಟಾದರೂ ಅಧಿಕಾರಿಗಳು, ಸಚಿವರ ಮೇಲೆ ಕ್ರಮಕೈಗೊಂಡಿಲ್ಲ.

ಚಾಮರಾಜನಗರದಲ್ಲಿ ಆಕ್ಸಿಜನ್ ದುರಂತ ಪ್ರಕರಣ; ಮೃತರ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ನೀಡಿದ ಡಿ.ಕೆ.ಶಿವಕುಮಾರ್
ಮೃತನ ಕುಟುಂಬಕ್ಕೆ ಚೆಕ್ ವಿತರಿಸಿದ ಡಿಕೆಶಿ
Follow us on

ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಸ್ಥರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 1 ಲಕ್ಷ ರೂ. ಚೆಕ್ ನೀಡಿದ್ದಾರೆ. ಮೃತ ರಂಗಸ್ವಾಮಿ ಪತ್ನಿ ಪುಷ್ಪಾರಿಗೆ ಚೆಕ್ ನೀಡಿದ ಡಿಕೆಶಿ, ಕೆಂಪಯ್ಯ ಮತ್ತು ರಾಜು ಅವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇಡೀ ದಿನ ಮೃತ 36 ಕುಟುಂಬಗಳ ಮನೆಗೆ ಭೇಟಿ ನೀಡಲಿರುವ ಶಿವಕುಮಾರ್, ಕೆಪಿಸಿಸಿ ವತಿಯಿಂದ ತಲಾ 1 ಲಕ್ಷ ರೂ. ಚೆಕ್ ನೀಡಲಿದ್ದಾರೆ.

ಆಕ್ಸಿಜನ್ ಸಿಗದೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಇದು ಸರ್ಕಾರವೇ ಮಾಡಿರುವ ಕೊಲೆ. ಆಕ್ಸಿಜನ್ ಸಿಗದೆ ಸಾವನ್ನಪ್ಪಿದ್ದಾರೆ ಎಂದು ನ್ಯಾಯಾಲಯವೇ ಹೇಳಿದೆ. ಇಷ್ಟಾದರೂ ಅಧಿಕಾರಿಗಳು, ಸಚಿವರ ಮೇಲೆ ಕ್ರಮಕೈಗೊಂಡಿಲ್ಲ. ಸರ್ಕಾರ ಬದುಕಿದೆಯಾ, ಸತ್ತಿದೆಯಾ ಅಂತ ಜನ ನಿರ್ಧರಿಸುತ್ತಾರೆ. ಸರ್ಕಾರ 2 ಲಕ್ಷ ಪರಿಹಾರ ನೀಡಿದೆ. ಕೆಪಿಸಿಸಿ ವತಿಯಿಂದ 1 ಲಕ್ಷ ರೂ. ನೀಡುತ್ತೇವೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿ.ಎಸ್.ಯಡಿಯೂರಪ್ಪ ಬರೀ ಶಿವಮೊಗ್ಗಕ್ಕೆ ಸಿಎಂ ಅಲ್ಲ. ಇಡೀ ರಾಜ್ಯಕ್ಕೆ ಸಿಎಂ. ಸಿಎಂ ಯಡಿಯೂರಪ್ಪ ಎಲ್ಲರ ಮನೆಗೆ ಹೋಗುವುದು ಬೇಡ. ಚಾಮರಾಜನಗರಕ್ಕೆ ಬಂದು ಸಾಂತ್ವನ ಹೇಳುವ ಕೆಲಸ ಮಾಡಿ. ಇದನ್ನು ಮಾಡದ ಸರ್ಕಾರ ಸತ್ತುಹೋಗಿದೆ. ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಎಳೆಎಳೆಯಾಗಿ ಬಿಚ್ಚಿಡುತ್ತೇವೆ ಎಂದು ಟಿವಿ9ಗೆ ತಿಳಿಸಿದರು.

ಚಾಮರಾಜನಗರಕ್ಕೆ ಬಂದರೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಜನ ಹೊಡೆಯುತ್ತಾರೆ ಅನ್ನೋ ಭಯವಿದೆ. ಹೀಗಾಗಿ ಚಾಮರಾಜನಗರಕ್ಕೆ ಬರುವ ಧೈರ್ಯ ಮಾಡುತ್ತಿಲ್ಲ. ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದರೆ ಜನ ಬೈಯ್ಯುತ್ತಾರೆ. ಅದನ್ನು ಸ್ವೀಕರಿಸಬೇಕು. ಆದರೆ ಯಡಿಯೂರಪ್ಪ ಅದನ್ನು ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಕಿಡಿಕಾರಿದ್ದಾರೆ.

ಇದನ್ನೂ ಓದಿ

ಕಲಬುರಗಿಯಲ್ಲಿ ಭೂಕಂಪನ ಅನುಭವ; 5 ಸೆಕೆಂಡ್ ಕಾಲ ಭಾರಿ ಶಬ್ದ

ಬೀದಿ ಪ್ರಾಣಿಗಳಿಗೆ ಆಸರೆಯಾದ ಕೋಲಾರದ ವ್ಯಕ್ತಿ; ನಾಯಿ, ಕೋತಿಗಳಿಗೆ ನಿತ್ಯ ಆಹಾರ ನೀಡಿ ಪೋಷಣೆ

(DK Shivakumar helps families of deceased victims of lack of oxygen at Chamarajanagar)