ತುಮಕೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಬಿಡುಗಡೆಯಾಗಿ ಇಂದಿಗೆ 6 ದಿನಗಳಾಯಿತು. ರಾಜ್ಯದಲ್ಲಿ ಈ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ವಿಪಕ್ಷ ನಾಯಕರ ಲೇವಡಿಗೆ ಆಹಾರ ಸಿಕ್ಕಂತಾಗಿದೆ. ಅದರಂತೆ ಇಂದು (ಮಾರ್ಚ್ 7) ಜಿಲ್ಲೆಯ ಮಧುಗಿರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿನಿತ್ಯ ಟಿವಿಗಳಲ್ಲಿ ಸಿನಿಮಾ ನೋಡುತ್ತಿದ್ದೀರಿ. ಟಿವಿಗಳಲ್ಲಿ ಯಾವ ಸಿನಿಮಾ ಬರ್ತಿದೆ ಎಂದು ಗೊತ್ತಾ ಎಂದು ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿಜೆಪಿ ಶಾಸಕರು ತಮ್ಮ ಸ್ಥಾನಕ್ಕೆ ಅಪಮಾನ ಮಾಡುತ್ತಿದ್ದಾರೆ. ನಾವು ಶಾಸಕರೆಂದು ಹೇಳುವುದಕ್ಕೂ ನಾಚಿಕೆಯಾಗುತ್ತಿದೆ. ಬಿಜೆಪಿ ಶಾಸಕರು ಆ ರೀತಿಯಾಗಿ ಮಾಡಿಬಿಟ್ಟಿದ್ದಾರೆ. ಕೆಲವರು ಕುರ್ಚಿಗೆ ಹೆಚ್ಚು ಗೌರವವನ್ನು ತರುತ್ತಾರೆ. ಇನ್ನೂ ಕೆಲವರು ಗೌರವ ಕಳೆಯುತ್ತಾರೆ ಎಂದರು.
ಇನ್ನು ಮಧುಗಿರಿಯಲ್ಲಿ ನಡೆಯುತ್ತಿರುವ ನೂತನ ಗ್ರಾಮ ಪಂಚಾಯತಿ ಸದ್ಯರುಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿರುವ ಅವರು ಕಾಂಗ್ರೆಸ್ ದೇವಸ್ಥಾನ (ಕಾಂಗ್ರೆಸ್ ಕಚೇರಿ) ಕಟ್ಟಬೇಕು. ಇದಕ್ಕೆ ಸಾಮಾನ್ಯ ಕಾರ್ಯಕರ್ತರು ಹಣ ಕೊಡಬೇಕು. ನನ್ನ ಕ್ಷೇತ್ರದ ಅಭಿವೃದ್ಧಿಯನ್ನು ನೀವೆಲ್ಲಾ ನೋಡಬೇಕು. ನರೇಗಾದಲ್ಲಿ ಇಡೀ ರಾಜ್ಯಕ್ಕೆ ಕನಕಪುರ ತಾಲೂಕು ಮಾದರಿ ಎಂದು ಪ್ರಶಸ್ತಿ ಕೊಟ್ಟಿದೆ. ಅದಕ್ಕಾಗಿ ಜನ ನನ್ನನ್ನು ಜನರು 80 ಸಾವಿರ ಲೀಡಲ್ಲಿ ಗೆಲ್ಲಿಸಿದ್ದಾರೆ ಎಂದು ಕ್ಷೇತ್ರದ ಅಭಿವೃದ್ಧಿಯನ್ನು ಬಿಚ್ಚಿಟ್ಟರು.
ಸಮಾರಂಭದಲ್ಲಿ ಪ್ರಧಾನಿ ಬಗ್ಗೆ ಮಾತನಾಡಿ, ಮೋದಿಗೆ ರೈತರ ಸಂಕಷ್ಟವನ್ನು ಕೇಳುವ ಸೌಜನ್ಯವಿಲ್ಲ. ಇಂತವರನ್ನು ನಾವು ಅಧಿಕಾರದಲ್ಲಿ ಉಳಿಸಿಕೊಳ್ಳಬೇಕಾ? ಎಂದು ಪ್ರಶ್ನಿಸಿದರು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆಯಾಗುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರವನ್ನು ಕಿತ್ತು ಎಸೆಯಬೇಕು. ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ಹೆಚ್ಚಾಗುತ್ತಿದೆ. ಸಿಎಂ ಮುಂದಿನ ಬಾರಿ 150 ಸೀಟ್ ಗೆಲ್ಲುವುದಾಗಿ ಹೇಳುತ್ತಾರೆ. ಆದರೆ ಈಗ ಪ್ರತಿನಿತ್ಯ ಟಿವಿಗಳಲ್ಲಿ ಬಿಜೆಪಿ ಸಿನಿಮಾ ಬರುತ್ತಿದೆ. ಹೀಗಾಗಿ ಮುಂದಿನ ಬಾರಿ 150 ಸೀಟ್ ಬಿಜೆಪಿಯದ್ದಲ್ಲ. ಕಾಂಗ್ರೆಸ್ ಪಕ್ಷ 150 ಸೀಟ್ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ
ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೋಡೆತ್ತುಗಳಲ್ಲ, ಗುದ್ದಾಡುವ ಹೋರಿಗಳು: ಬಿ.ಶ್ರೀರಾಮುಲು
ಭದ್ರಾವತಿ ಕಬಡ್ಡಿ ಟೂರ್ನಮೆಂಟ್ ಗಲಾಟೆ: ಭದ್ರಾವತಿ ಎಮ್ಎಲ್ಎ ಸೀಟು ಗೆಲ್ಲಲು ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದು?
Published On - 3:44 pm, Sun, 7 March 21