ಶಿವಕುಮಾರ್ ತಾಯಿ ಗೌರಮ್ಮ ‘ಇಲ್ಲೇ ವಿಚಾರಣೆ ಮಾಡಿ’ ಎಂದಿದ್ಯಾಕೆ?

|

Updated on: Oct 15, 2019 | 12:29 PM

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ. ಮತ್ತೊಂದೆಡೆ ಡಿಕೆಶಿ ಕುಟುಂಬಸ್ಥರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿದೆ. ಸೆಪ್ಟೆಂಬರ್ 12ರಂದು ಡಿಕೆಶಿ ಪುತ್ರಿ ಐಶ್ವರ್ಯಾಗೆ ದೆಹಲಿಗೆ ಬುಲಾವ್ ನೀಡಿದ್ದ ಇಡಿ, ಹಣ ವರ್ಗಾವಣೆ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಸಿತ್ತು. ಬಳಿಕ ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್​ರನ್ನ ದೆಹಲಿಗೆ ಕರೆಸಿಕೊಂಡು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ. ಇದೀಗ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ […]

ಶಿವಕುಮಾರ್ ತಾಯಿ ಗೌರಮ್ಮ ‘ಇಲ್ಲೇ ವಿಚಾರಣೆ ಮಾಡಿ’ ಎಂದಿದ್ಯಾಕೆ?
Follow us on

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್​ನ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದಾರೆ. ಮತ್ತೊಂದೆಡೆ ಡಿಕೆಶಿ ಕುಟುಂಬಸ್ಥರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿ ವಿಚಾರಣೆ ನಡೆಸುತ್ತಿದೆ.

ಸೆಪ್ಟೆಂಬರ್ 12ರಂದು ಡಿಕೆಶಿ ಪುತ್ರಿ ಐಶ್ವರ್ಯಾಗೆ ದೆಹಲಿಗೆ ಬುಲಾವ್ ನೀಡಿದ್ದ ಇಡಿ, ಹಣ ವರ್ಗಾವಣೆ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಪ್ರಶ್ನೆಗಳ ಸುರಿಮಳೆ ಸುರಿಸಿತ್ತು. ಬಳಿಕ ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ.ಸುರೇಶ್​ರನ್ನ ದೆಹಲಿಗೆ ಕರೆಸಿಕೊಂಡು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುತ್ತಿದೆ.

ಇದೀಗ ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಹಾಗೂ ಡಿಕೆಶಿ ತಾಯಿ ಗೌರಮ್ಮಗೂ ಇಡಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದ್ರೆ, ಅನಾರೋಗ್ಯ ಹಿನ್ನೆಲೆ ನವದೆಹಲಿಗೆ ಹೋಗುವುದಕ್ಕೆ ಆಗುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲೇ ವಿಚಾರಣೆ ನಡೆಸುವಂತೆ ಇಡಿ ಅಧಿಕಾರಿಗಳಿಗೆ ಮನವಿ ಮಾಡಲು ಗೌರಮ್ಮ ನಿರ್ಧರಿಸಿದ್ದಾರೆ. ಅಲ್ಲದೆ, ಇಡಿ ಸಮನ್ಸ್ ಪ್ರಶ್ನಿಸಿ ಗೌರಮ್ಮ ಹೈಕೋರ್ಟ್‌ ಮೊರೆ ಹೋಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.

Published On - 12:29 pm, Tue, 15 October 19