ಆಮೆರಿಕಾದಿಂದ ಭಾರತಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್​ ನೆರವು; ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರವಾನೆ

|

Updated on: May 10, 2021 | 10:41 AM

ಕೊರೊನಾ ಸಂಕಷ್ಟ ಕಾಲದಲ್ಲಿ ಅಮರಿಕದಿಂದ ಬಂದಿಳಿದಿರುವ ವೈದ್ಯಕೀಯ ನೆರವಿನಲ್ಲಿ ಕರ್ನಾಟಕಕ್ಕೆ 400 ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳು (Oxygen Concentrators), ಮಹಾರಾಷ್ಟ್ರಕ್ಕೆ 300 ಆಕ್ಸಿಜನ್ ಕಾನ್ಸೆಂಟ್ರೇಟರ್​ ನೀಡಿಕೆಯಾಗಿದೆ. ಇನ್ನು ಪಲ್ಸ್ ಆಕ್ಸಿಮೀಟರ್ (Oximeters) ಪೈಕಿ ಕರ್ನಾಟಕಕ್ಕೆ 1,308 ನೀಡಲಾಗಿದೆ.

ಆಮೆರಿಕಾದಿಂದ ಭಾರತಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್​ ನೆರವು; ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರವಾನೆ
ಆಮೆರಿಕಾದಿಂದ ಭಾರತಕ್ಕೆ ಆಕ್ಸಿಜನ್ ಕಾನ್ಸೆಂಟ್ರೇಟರ್​ ನೆರವು; ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರವಾನೆ
Follow us on

ದೆಹಲಿ: ಆಮೆರಿಕಾದಿಂದ ಭಾರತಕ್ಕೆ 2200 ಆಕ್ಸಿಜನ್ ಕಾನ್ಸೆಂಟ್ರೇಟರ್​​ ನೆರವು ಒದಗಿಬಂದಿದೆ. ಜೊತೆಗೆ 10 ಸಾವಿರ ಆಕ್ಸಿಮೀಟರ್ ಸಹ ಭಾರತಕ್ಕೆ ರವಾನೆಯಾಗಿದೆ. ಕೇಂದ್ರ ಸರ್ಕಾರವು ಇವುಗಳನ್ನ ತಕ್ಷಣ ಕೆಲ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಕೇಂದ್ರ ನೀತಿ ಆಯೋಗ (National Institution for Transforming India-NITI Aayog) ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ಕರ್ನಾಟಕಕ್ಕೆ ಹೆಚ್ಚು ಪಾಲು ಸಂದಾಯವಾಗಿದೆ ಎಂಬುದು ಸಮಧಾನಕರ ವಿಷಯ.

ಕೊರೊನಾ ಸಂಕಷ್ಟ ಕಾಲದಲ್ಲಿ ಅಮರಿಕದಿಂದ ಬಂದಿಳಿದಿರುವ ವೈದ್ಯಕೀಯ ನೆರವಿನಲ್ಲಿ ಕರ್ನಾಟಕಕ್ಕೆ 400 ಆಕ್ಸಿಜನ್ ಕಾನ್ಸೆಂಟ್ರೇಟರ್​ಗಳು (Oxygen Concentrators), ಮಹಾರಾಷ್ಟ್ರಕ್ಕೆ 300 ಆಕ್ಸಿಜನ್ ಕಾನ್ಸೆಂಟ್ರೇಟರ್​ ನೀಡಿಕೆಯಾಗಿದೆ. ಇನ್ನು ಪಲ್ಸ್ ಆಕ್ಸಿಮೀಟರ್ (Oximeters) ಪೈಕಿ ಕರ್ನಾಟಕಕ್ಕೆ 1,308 ನೀಡಲಾಗಿದೆ. ಮಹಾರಾಷ್ಟ್ರಕ್ಕೆ 2,144 ಆಕ್ಸಿಮೀಟರ್​ಗಳು ಹೋಗಿವೆ. ಕೇರಳಕ್ಕೆ 1048 ಆಕ್ಸಿಮೀಟರ್ ನೀಡಲಾಗಿದೆ.

(Donations from Sales Force USA include 2200 Oxygen Concentrators and 10000 Oximeters which have been allocated to Indian states NITI Aayog)

Published On - 10:38 am, Mon, 10 May 21