ಖಾಕಿ ಕಜ್ಜಾಯ! ಬೆಸ್ಕಾಂ ಚಾಲಕನನ್ನೂ ಬಿಡಲಿಲ್ಲ ಪೊಲೀಸರು, ಐಡಿ ಕಾರ್ಡ್ ತೋರಿಸು ಅಂತಾ ಚಾರ್ಜ್​

ಐಡಿ ಕಾರ್ಡ್ ತೋರ್ಸು, ಗಾಡಿ ತಗೊಂಡೋಗು ಅಂದಿದ್ದಾರೆ. 30 ನಿಮಿಷದಿಂದ ಚಾಲಕ ತನ್ನ ಗಾಡಿ ಬಿಡಿಸಿಕೊಳ್ಳಲು ಹರಸಾಹಸಪಡುತ್ತಿದ್ದಾನೆ. ಎಚ್​ಎಎಲ್ ಏರ್​ಪೋರ್ಟ್​ ರಸ್ತೆಯಲ್ಲಿ ಮಾರತ್​ಹಳ್ಳಿ ಬಳಿ ಈ ಘಟನೆ ನಡೆದಿದೆ.

ಖಾಕಿ ಕಜ್ಜಾಯ! ಬೆಸ್ಕಾಂ ಚಾಲಕನನ್ನೂ ಬಿಡಲಿಲ್ಲ ಪೊಲೀಸರು,  ಐಡಿ ಕಾರ್ಡ್ ತೋರಿಸು ಅಂತಾ ಚಾರ್ಜ್​
ನನಗೆ ಯಾವುದೇ ಐಡಿ ಕಾರ್ಡ್ ಕೊಟ್ಟಿಲ್ಲ. ಯಾರಾದ್ರೂ ಹಿಡಿದ್ರೆ ಈ ಲೆಟರ್ ತೋರ್ಸು ಅಂತ ಕೊಟ್ಟಿದ್ದಾರೆ ಎಂದು ಗಾಡಿ ಮೇಲಿದ್ದ ಸ್ಟಿಕರ್ ತೋರಿಸಿದ ಚಾಲಕ
Follow us
ಸಾಧು ಶ್ರೀನಾಥ್​
|

Updated on:May 10, 2021 | 10:12 AM

ಬೆಂಗಳೂರು: ಇದೊಂದು ರೀತಿಯ ಯುದ್ಧ ಕಾಲವಾಗಿದೆ. ಕೊಡುನಾ ಮಹಾಮಾರಿ ವಿರುದ್ಧದ ಸಮರವಾಗಿದೆ. ಕೊರೊನಾ ಕ್ರಮಿಯನ್ನು ಕಟ್ಟಿಹಾಕಲು ಸರ್ಕಾರಗಳು ಎಲ್ಲ ರೀತಿಯಲ್ಲೂ ಹರಸಅಹಸ ಪಟ್ಟು ಬಸವಳಿದಿವೆ. ಆದರೆ ನಿಯಂತ್ರಣಕ್ಕೆ ಸಿಕ್ಕುತ್ತಿಲ್ಲ. ಕೊನೆ ದಂಡ ಪ್ರಯೋಗ ಮಾಡಿ, ಜನರನ್ನೇ ತಹಬಂದಿಗೆ ತಂದರೆ ಎಲ್ಲಾ ಸರಿಹೋದೀತು ಎಂದು ರಾಜ್ಯ ಸರ್ಕಾರ ಇಂದಿನಿಂದ ಪೊಲೀಸರನ್ನೇ ಫೀಲ್ಡ್​ಗೆ ಬಿಟ್ಟಿದೆ. ಪೊಲೀಸರೋ ತುಸು ಹೆಚ್ಚೇ ಅನ್ನುವಂತೆ ತಮ್ಮ ಕೈಗೆ ನೀಡಿರುವ ಅಧಿಕಾರವನ್ನು ಝಳಪಿಸುತ್ತಿದ್ದಾರೆ. ಲಾಠಿ ದಂಡ ಪ್ರಯೋಗದ ಮೂಲಕ ಜನರ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಸ್ವಲ್ಪಮಟ್ಟಿನ ವಿವೇಚನೆಯನ್ನೂ ಪೊಲೀಸರು ಬಳಸಬೇಕಾದೀತು. ಇನ್ನು ಪೊಲೀಸರ ಕಣ್ಣಿಗೆ ಮೊದಲು ಬೀಳುತ್ತಿರುವುದೇ ದ್ವಿಚಕ್ರ-ತ್ರಿಚಕ್ರ ವಾಹನ ಸವಾರರು. ಕಾರಿನಲ್ಲಿ ಓಡಾಡುವರನ್ನು ಶಾಸ್ತ್ರಕ್ಕೆ ವಿಚಾರಿಸಿಕೊಂಡು ಬಿಟ್ಟುಕಳುಹಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಪರಿಸ್ಥಿತಿ ಹೀಗಿರುವಾಗ ಆನ್​ ಡ್ಯೂಟಿ ಹೊರಟಿದ್ದ ಬೆಸ್ಕಾಂ ಚಾಲಕರೊಬ್ಬರು ಪೊಲೀಸರಿಗೆ ತಗಲಾಕಿಕೊಂಡಿದ್ದಾರೆ. ಜಪ್ಪಯ್ಯ ಅಂದ್ರೂ ಪೊಲೀಸರು ಆತನನ್ನು ಬಿಟ್ಟಿಲ್ಲ.

ಬೆಸ್ಕಾಂ ಚಾಲಕರೊಬ್ಬರು ಎಂದಿನಂತೆ ಕಚೇರಿವರೆಗೂ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳಿದ್ದಾರೆ. ಆದರೆ ಮಾರ್ಗ ಮಧ್ಯೆ ಪೊಲೀಸರು ಆತನ ವಾಹನವನ್ನು ತಡೆದಿದ್ದಾರೆ. ಐಡಿ ಕಾರ್ಡ್ ತೋರಿಸಿ, ಮುಂದೆ ಹೋಗು ಅಂತಾ ಹೇಳಿದ್ದಾರೆ. ಆತನೋ, ಅಯ್ಯೋ ಅಂಥದ್ದೇನೂ ತನ್ನ ಬಳಿ ಇಲ್ಲ. ನನ್ನ ಬಳಿಯಿರುವುದು ಆಧಾರ್ ಕಾರ್ಡ್ ಒಂದೇ. ನೋಡಿಕೊಳ್ಳಿ ಎಂದು ಅದನ್ನು ತೋರಿಸಿದ್ದಾನೆ.

Bengaluru police during covid curfew demand bescom driver to show id card

30 ನಿಮಿಷದಿಂದ ಚಾಲಕ ತನ್ನ ಗಾಡಿ ಬಿಡಿಸಿಕೊಳ್ಳಲು ಹರಸಾಹಸಪಡುತ್ತಿರುವ ಬೆಸ್ಕಾಂ ಚಾಲಕ

ಅದಕ್ಕೂ ಮುನ್ನ.. ನಾನು ಬೆಸ್ಕಾಂನಲ್ಲಿ ಚಾಲಕನಾಗಿ ಕೆಲಸ ಮಾಡ್ತಿದ್ದೀನಿ. ನನಗೆ ಯಾವುದೇ ಐಡಿ ಕಾರ್ಡ್ ಕೊಟ್ಟಿಲ್ಲ. ಯಾರಾದ್ರೂ ಹಿಡಿದ್ರೆ ಈ ಸ್ಟಿಕ್ಕರ್ ತೋರಿಸು ಅಂತ ಗಾಡಿ ಮುಂಭಾಗ ಅಂಟಿಸಿದ್ದ ಲೆಟರ್​ ತೋರಿಸಿ ಪೊಲೀಸರ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆದರೆ  ಪೊಲೀಸರು ಹಠಕ್ಕೆ ಬಿದ್ದವರಂತೆ ಇವೆಲ್ಲಾ ಆಗಾಕಿಲ್ಲ. ಇಲಾಖೆಯವರು ನಿನಗೆ ಕೊಟ್ಟಿರುವ ಐಡಿ ಕಾರ್ಡ್​ ಕಾರ್ಡ್​ ತೋರ್ಸು, ಗಾಡಿ ತಗೊಂಡೋಗು ಅಂದಿದ್ದಾರೆ. 30 ನಿಮಿಷದಿಂದ ಚಾಲಕ ತನ್ನ ಗಾಡಿ ಬಿಡಿಸಿಕೊಳ್ಳಲು ಹರಸಾಹಸಪಡುತ್ತಿದ್ದಾನೆ. ಎಚ್​ಎಎಲ್ ಏರ್​ಪೋರ್ಟ್​ ರಸ್ತೆಯಲ್ಲಿ ಮಾರತ್​ಹಳ್ಳಿ ಬಳಿ ಈ ಘಟನೆ ನಡೆದಿದೆ.

(Bengaluru police during covid curfew demand bescom driver to show id card)

ಅಗತ್ಯವಾಗಿ ರಸ್ತೆಗೆ ಬಂದು ಅವಾಜ್ ಹಾಕಿದ ಕಾರ್​ ಚಾಲಕನಿಗೆ ಲೇಡಿ ಪೊಲೀಸ್ ಪಂಚ್ ಕೊಟ್ಟಿದ್ದಾರೆ

Published On - 10:05 am, Mon, 10 May 21

ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!