AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಎಂಎಲ್​ಸಿ ಬೋರ್ಡ್ ಅಳವಡಿಸಿದ್ದ ಫಾರ್ಚುನರ್ ಕಾರು ಸೀಜ್; ಪೊಲೀಸರಿಗೆ ಫೋನ್ನಲ್ಲೇ ಸೂಚನೆ ಕೊಟ್ಟ ವ್ಯಕ್ತಿ!

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ MLC ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ ಫಾರ್ಚುನರ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ವಾಹನ ತಡೆದ ಪೊಲೀಸರು ಚಾಲಕನ ಬಳಿ ವಾಹನ ಯಾರದೆಂದು ಡಿಲೈಟ್ಸ್ ಕೇಳಿದ್ದಾರೆ. ಈ ವೇಳೆ ಡಿಎಲ್ ಇಲ್ಲದೆ, ಸೂಕ್ತ ಕಾರಣ ನೀಡದೆ, ಎಂಎಲ್ ಸಿ ಯಾರೆಂದು ಹೇಳದೆ ಚಾಲಕ ತಲೆ ತಗ್ಗಿಸಿದ್ದಾನೆ.

ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಎಂಎಲ್​ಸಿ ಬೋರ್ಡ್ ಅಳವಡಿಸಿದ್ದ ಫಾರ್ಚುನರ್ ಕಾರು ಸೀಜ್; ಪೊಲೀಸರಿಗೆ ಫೋನ್ನಲ್ಲೇ ಸೂಚನೆ ಕೊಟ್ಟ ವ್ಯಕ್ತಿ!
ಫಾರ್ಚುನರ್ ಕಾರು ಸೀಜ್
ಆಯೇಷಾ ಬಾನು
|

Updated on: May 10, 2021 | 12:20 PM

Share

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಲಾಕ್ಡೌನ್ ಶುರುವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಪೊಲೀಸರು ಫೀಲ್ಡ್ಗೆ ಇಳಿದಿದ್ದು ಸುಖಾಸುಮ್ಮನೆ ರಸ್ತೆಯಲ್ಲಿ ಓಡಾಡುವವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಅನಾವಶ್ಯಕವಾಗಿ ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿಯುವವರನ್ನು ಅರೆಸ್ಟ್ ಮಾಡ್ತಿದ್ದಾರೆ, ವಾಹನ ಸೀಜ್ ಮಾಡ್ತಿದ್ದಾರೆ. ಕೆಲವರು ಏನೇನೋ ಕಾರಣಗಳನ್ನು ಹೇಳಿ ತಪ್ಪಿಸಿಕೊಳ್ಳುವ ಮಾರ್ಗ ಹುಡುಕುತ್ತಿದ್ದಾರೆ. ಆದ್ರೆ 10 ಗಂಟೆಯ ನಂತರ ರಾಜ್ಯಾದ್ಯಂತ ಸಂಪೂರ್ಣ ಲಾಕ್ಡೌನ್ ಆಗಿದೆ. ಆದ್ರೆ ಈ ಮಧ್ಯೆ, ಹತ್ತು ಗಂಟೆಯಾದ್ರೂ ವಾಹನಗಳ ಓಡಾಟ ನಿಂತಿಲ್ಲ. ಇದೇ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ MLC ಬೋರ್ಡ್ ಅಳವಡಿಸಿದ್ದ ಫಾರ್ಚುನರ್ ಕಾರು ಸೀಜ್ ಮಾಡಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ MLC ಎಂದು ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ ಫಾರ್ಚುನರ್ ಕಾರನ್ನು ಪೊಲೀಸರು ಸೀಜ್ ಮಾಡಿದ್ದಾರೆ. ವಾಹನ ತಡೆದ ಪೊಲೀಸರು ಚಾಲಕನ ಬಳಿ ವಾಹನ ಯಾರದೆಂದು ಡಿಟೇಲ್ಸ್​ ಕೇಳಿದ್ದಾರೆ. ಈ ವೇಳೆ ಡಿಎಲ್ ಇಲ್ಲದೆ, ಸೂಕ್ತ ಕಾರಣ ನೀಡದೆ, ಎಂಎಲ್ ಸಿ ಯಾರೆಂದು ಹೇಳದೆ ಚಾಲಕ ತಲೆ ತಗ್ಗಿಸಿದ್ದಾನೆ.

ಯಾವ ಎಂಎಲ್ಸಿ ಕಾರ್ ಎಂದು ಪೊಲೀಸರು ಮತ್ತೆ ಮತ್ತೆ ಕೇಳಿದ ಪ್ರಶ್ನೆಗೆ ಚಾಲಕ ಸೈಲೆಂಟ್ ಆಗಿದ್ದಾನೆ. ಎಂಎಲ್ಸಿ ಹೆಸರೂ ಹೇಳಲು ಹಿಂದೇಟು ಹಾಕಿದ್ದಾನೆ. ಬಳಿಕ ಚಾಲಕ ಯಾರಿಗೋ ಕರೆ ಮಾಡಿ ಕೊಟ್ಟಿದ್ದು ಫೋನ್ನಲ್ಲಿ ಮಾತನಾಡಿದ ವ್ಯಕ್ತಿ ನಿಮ್ಗೆ ನಿಮ್ ಡಿಪಾರ್ಟ್ಮೆಂಟ್ ಕಡೆಯಿಂದ ಕರೆ ಮಾಡಿಸ್ತೇನೆ, ಮೊದಲು ಕಾರ್ ಬಿಡಿ ಎಂದು ಪೊಲೀಸ್ ಸಿಬ್ಬಂದಿಗೆ ಫೋನ್ನಲ್ಲೇ ಸೂಚನೆ ಕೊಟ್ಟಿದ್ದಾನೆ. ಇಂತಹದೊಂದು ಹೈಡ್ರಾಮ ಇಂದು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದೆ.

MLC Car

ಫಾರ್ಚುನರ್ ಕಾರು ಸೀಜ್

ಇದನ್ನೂ ಓದಿ: ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಬಳ್ಳಾರಿಯಲ್ಲಿ ಬಟ್ಟೆ ಅಂಗಡಿ ಓಪನ್; ಎಫ್ಐಆರ್ ದಾಖಲಿಸಲು ಡಿವೈಎಸ್​ಪಿ ಸೂಚನೆ