ಕೊರೊನಾ ನಿಯಮ ಉಲ್ಲಂಘಿಸಿ ಯಾದಗಿರಿಯಲ್ಲಿ ನಡೆಯಿತು ಗ್ರಾಮದೇವತೆ ಜಾತ್ರೆ; ಸಾವಿರಾರು ಜನರು ಭಾಗಿ
ಬಳಿಚಕ್ರ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಜಾತ್ರೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದೇವತೆ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ವೇಳೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗ್ರಾಮದೇವತೆ ಜಾತ್ರೆಯನ್ನು ಗ್ರಾಮಸ್ಥರು ಮಾಡಿದ್ದಾರೆ.

ಯಾದಗಿರಿ: ಕೊರೊನಾ ಎರಡನೇ ಅಲೆ ಎಲ್ಲೆಡೆ ವ್ಯಾಪಿಸಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಈ ಕಾರಣ ಕೊರೊನಾ ಸೋಂಕನ್ನು ತಡೆಗಟ್ಟಲು ಕೊರೊನಾ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಈ ನಡುವೆಯೂ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ನಡೆದಿದೆ. ಕೊರೊನ ನಿಯಮ ಉಲ್ಲಂಘಿಸಿ ನಡೆದ ಜಾತ್ರೆಯಲ್ಲಿ ಸಾವಿರಾರು ಜನರು ಭಾಗಿಯಾಗಿದ್ದರು.
ಬಳಿಚಕ್ರ ಗ್ರಾಮದಲ್ಲಿ ಗ್ರಾಮದೇವತೆ ಜಾತ್ರೆ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಜಾತ್ರೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದೇವತೆ ಜಾತ್ರೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಈ ವೇಳೆ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗ್ರಾಮದೇವತೆ ಜಾತ್ರೆಯನ್ನು ಗ್ರಾಮಸ್ಥರು ಮಾಡಿದ್ದಾರೆ. ಬಳಿಚಕ್ರ ಗ್ರಾಮಸ್ಥರು ಗ್ರಾಮದೇವತೆ ಜಾತ್ರೆ ಮಾಡಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾವಿರಾರು ಜನ ಸೇರಿಸಿ ಜಾತ್ರೆ ಮಾಡಿದ್ದರೂ ಕೂಡ ಜಿಲ್ಲಾಡಳಿತ ಇದನ್ನು ತಡೆಗಟ್ಟಲು ಮುಂದಾಗಿಲ್ಲ. ಗ್ರಾಮಸ್ಥರು ಕಳೆದ ಒಂದು ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ರಥೋತ್ಸವ ಮಾಡಿದ್ದರು. ರಥೋತ್ಸವ ವೇಳೆ ರಥ ಮುರಿದು ಬಿದ್ದಿತ್ತು. ಆದರೆ ಯಾವುದೇ ಅನಾಹುತ ಆಗಿರಲಿಲ್ಲ. ಇಷ್ಟಾಗಿದ್ದರೂ ಕೂಡ ಮತ್ತೆ ಸಾವಿರಾರು ಜನ ಸೇರಿ ಗ್ರಾಮದೇವತೆ ಜಾತ್ರೆ ಮಾಡಲಾಗಿದೆ. ಪೋಲಿಸರ ಸಮ್ಮುಖದಲ್ಲಿಯೇ ಗ್ರಾಮದೇವತೆ ಜಾತ್ರೆ ನಡೆದಿದ್ದು, ಈ ವೇಳೆ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಬಿಡಲಾಗಿತ್ತು.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನ ಪ್ರಕರಣಗಳು ಹೆಚ್ಚಾಗುತ್ತಿದೆ. ದಿನಕ್ಕೆ 800 ರಿಂದ 1000 ಸಾವಿರ ಕೊವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಷ್ಟು ಪ್ರಕರಣಗಳು ಬೆಳಕಿಗೆ ಬಂದರು ಕೂಡ ಜಾತ್ರೆ ನಡೆಸಲು ಜಿಲ್ಲಾಡಳಿತ ಹೇಗೆ ಅನುಮತಿ ನೀಡಿತು? ಎಂಬ ಪ್ರಶ್ನೆ ಸದ್ಯ ಮೂಡುತ್ತಿದೆ.
ಜನರಿಂದ ನಿರ್ಲಕ್ಷ್ಯ ಇಂದಿನಿಂದ ಲಾಕ್ಡೌನ್ ಜಾರಿಯಾಗಿದೆ. 10 ಗಂಟೆಯವರೆಗೆ ಪೊಲೀಸರು ತಪಾಸಣೆ ನಡಿಸಿ, 10 ಗಂಟೆ ಬಳಿಕ ಪೊಲೀಸರು ತಮ್ಮ ಮನೆಗೆ ವಾಪಾಸ್ ಆಗಿದ್ದಾರೆ. ಹೀಗಾಗಿ ಯಾದಗಿರಿಯಲ್ಲಿ ಜನರು ಯಾವ ಭಯವಿಲ್ಲದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ. 10 ಗಂಟೆ ನಂತರ ಒಬ್ಬರು ಹೊರ ಬರಬಾರದು ಅಂತ ಸರ್ಕಾರ ಹೇಳಿದೆ. ಆದರೆ ನಗರದಲ್ಲಿ ಕಾಲ್ನಡಿಗೆಯಲ್ಲಿ ಹಾಗೂ ಬೈಕ್ ಸಮೇತ ಹೊರ ಬರುತ್ತಿದ್ದಾರೆ.
ಇದನ್ನೂ ಓದಿ
ಸೋಂಕು ಹರಡುವಿಕೆಯ ವೇಗ ಶೇ.5ರಷ್ಟು ಕಡಿಮೆ; ಎರಡನೇ ಅಲೆ ಉತ್ತುಂಗಕ್ಕೆ ತಲುಪಿ ಇಳಿಯುವ ಸೂಚನೆಯೇ ಇದು?
ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್ಗೆ ಕೊವಿಡ್; ಸೀತಾಪುರ್ ಜೈಲಿನಿಂದ ಲಕ್ನೊ ಆಸ್ಪತ್ರೆಗೆ ದಾಖಲು
(villagers held the fair in violation of coronavirus rule at Yadgir)



