‘ಗಟ್ಸ್ ಇದ್ದಿದ್ದರೆ ರಾಜೀವ್​ಗೆ ಮುಂಚೆ, ಅಂಬೇಡ್ಕರ್​ಗೆ ಕೊಡಿಸ್ಬೇಕಿತ್ತು ಭಾರತ ರತ್ನ’

|

Updated on: Oct 19, 2019 | 2:17 PM

ಹುಬ್ಬಳ್ಳಿ: ಸಿದ್ದರಾಮಯ್ಯನವರು ವೀರ ಸಾವರ್ಕರ್​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರಿಗೆ ಗಟ್ಸ್ ಇದ್ದರೆ ರಾಜೀವ್​ಗಾಂಧಿಗಿಂತ ಮೊದಲೇ ಅಂಬೇಡ್ಕರ್​ಗೆ ಭಾರತ ರತ್ನ ಕೊಡಿ ಅಂತಾ ಕೇಳಬೇಕಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ಸಂವಿಧಾನ ಬರೆದ ಅಂಬೇಡ್ಕರ್​ಗೆ ಮೊದಲು ಭಾರತ ರತ್ನ ನೀಡಲಿಲ್ಲ. ಆದ್ರೆ, ರಾಜೀವ್ ಗಾಂಧಿಗೆ ಮೊದಲು ಭಾರತ ರತ್ನ ನೀಡಲಾಗಿದೆ. ರಾಜೀವ್ ಗಾಂಧಿ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಬಳುವಳಿಯಾಗಿ ಕೊಡಲಾಯಿತು. ಅಲ್ಲದೆ, ದೇಶಕಂಡ ಅಪ್ರತಿಮ ವೀರ ಸಾವರ್ಕರ್​ ಬಗ್ಗೆ ಅಪಮಾನ ಮಾಡೋದು […]

‘ಗಟ್ಸ್ ಇದ್ದಿದ್ದರೆ ರಾಜೀವ್​ಗೆ ಮುಂಚೆ, ಅಂಬೇಡ್ಕರ್​ಗೆ ಕೊಡಿಸ್ಬೇಕಿತ್ತು ಭಾರತ ರತ್ನ’
ಸಿದ್ದರಾಮಯ್ಯ-ಪ್ರಲ್ಹಾದ್​ ಜೋಶಿ
Follow us on

ಹುಬ್ಬಳ್ಳಿ: ಸಿದ್ದರಾಮಯ್ಯನವರು ವೀರ ಸಾವರ್ಕರ್​ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರಿಗೆ ಗಟ್ಸ್ ಇದ್ದರೆ ರಾಜೀವ್​ಗಾಂಧಿಗಿಂತ ಮೊದಲೇ ಅಂಬೇಡ್ಕರ್​ಗೆ ಭಾರತ ರತ್ನ ಕೊಡಿ ಅಂತಾ ಕೇಳಬೇಕಿತ್ತು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

ಸಂವಿಧಾನ ಬರೆದ ಅಂಬೇಡ್ಕರ್​ಗೆ ಮೊದಲು ಭಾರತ ರತ್ನ ನೀಡಲಿಲ್ಲ. ಆದ್ರೆ, ರಾಜೀವ್ ಗಾಂಧಿಗೆ ಮೊದಲು ಭಾರತ ರತ್ನ ನೀಡಲಾಗಿದೆ. ರಾಜೀವ್ ಗಾಂಧಿ ತಾತ, ತಾಯಿ ಪ್ರಧಾನಿಯಾಗಿದ್ದಕ್ಕೆ ಅವರಿಗೆ ಬಳುವಳಿಯಾಗಿ ಕೊಡಲಾಯಿತು. ಅಲ್ಲದೆ, ದೇಶಕಂಡ ಅಪ್ರತಿಮ ವೀರ ಸಾವರ್ಕರ್​ ಬಗ್ಗೆ ಅಪಮಾನ ಮಾಡೋದು ಸರಿಯಲ್ಲ. ಮೊದಲು ಇತಿಹಾಸವನ್ನ ಸರಿಯಾಗಿ ಓದಿಕೊಂಡು ಮಾತನಾಡಲಿ ಎಂದ ಸಿದ್ದರಾಮಯ್ಯನವರ ನಡೆಯನ್ನು ಪ್ರಹ್ಲಾದ್ ಜೋಶಿ ಖಂಡಿಸಿದ್ದಾರೆ.

ಮುಂದೆ ದಾವುದ್ ಇಬ್ರಾಹಿಂಗೂ ಕಾಂಗ್ರೆಸ್​ನವರು ಭಾರತ ರತ್ನ ಕೊಡಲಿದ್ದಾರೆಂದು ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಹ್ಲಾದ್ ಜೋಶಿ ಇದೇ ವೇಳೆ ವ್ಯಂಗ್ಯವಾಡಿದ್ದಾರೆ.

ವೀರ ಸಾವರ್ಕರ್​ಗೆ ಭಾರತ ರತ್ನ ನೀಡಬೇಕೆಂಬ ಪ್ರಸ್ತಾವನೆಗೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಮಹಾತ್ಮ ಗಾಂಧಿ ಹತ್ಯೆಗೆ ಸ್ಕೆಚ್ ಹಾಕಿದ್ದವರಲ್ಲಿ ವೀರ ಸಾವರ್ಕರ್ ಕೂಡಾ ಒಬ್ಬರು ಎಂದು ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ವಿವಾದದ ಕಿಡಿ ಹೊತ್ತಿಸಿದ್ದರು.

Published On - 2:15 pm, Sat, 19 October 19