ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ 73ನೇ ಜನ್ಮದಿನದ ಸಂಭ್ರಮ, ಶುಭಾಶಯಗಳ ಸುರಿಮಳೆ

|

Updated on: Nov 25, 2020 | 2:56 PM

ಹೆಗ್ಗಡೆಯವರ ಹುಟ್ಟುಹಬ್ಬಕ್ಕೆ ಶುಭಕೋರಿದ ಬಿ.ಎಸ್.ಯಡಿಯೂರಪ್ಪ, ಅಶ್ವತ್ಥನಾರಾಯಣ, ಪುನೀತ್ ರಾಜ್​ಕುಮಾರ್.

ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ 73ನೇ ಜನ್ಮದಿನದ ಸಂಭ್ರಮ, ಶುಭಾಶಯಗಳ ಸುರಿಮಳೆ
Follow us on

ದಕ್ಷಿಣ ಕನ್ನಡ: ಅನ್ನ, ಅಕ್ಷರ, ಅಭಯ, ಔಷಧ ದಾನಗಳ ಮೂಲಕ ಚತುರ್ದಾನ ಪರಂಪರೆಯ ಕ್ಷೇತ್ರವೆಂದೇ ಹೆಸರಾದ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಇಂದು 73ನೇ ಜನ್ಮದಿನದ ಸಂಭ್ರಮ. ಧಾರ್ಮಿಕ ಕ್ಷೇತ್ರವೊಂದು ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ, ಪುನೀತ್ ರಾಜ್​ಕುಮಾರ್ ಸೇರಿದಂತೆ ನಾಡಿನೆಲ್ಲೆಡೆಯ ಭಕ್ತರು ಶುಭ ಕೋರಿದ್ದಾರೆ.

ಶಿಕ್ಷಣ ಸಂಸ್ಥೆ, ಗ್ರಾಮೀಣಾಭಿವೃದ್ಧಿ ಯೋಜನೆ, ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘಗಳ ಸ್ಥಾಪನೆಗೆ ಕಾರಣರಾದ ವೀರೇಂದ್ರ ಹೆಗ್ಗಡೆಯವರು ಇನ್ನೂ ನೂರ್ಕಾಲ ಹೀಗೇ ಸಮಾಜದ ಮಾರ್ಗದರ್ಶಕರಾಗಿ ನಮ್ಮೊಂದಿಗಿರಲಿ ಎಂದು ಹಾರೈಸಿದ್ದಾರೆ.

ಜನರ ಕಷ್ಟಗಳಿಗೆ ಸದಾ ಸ್ಪಂದಿಸುವ ಹೆಗ್ಗಡೆಯವರು ದೇಶ, ಭಾಷೆಗಳ ಗಡಿ ಮೀರಿ ಜನಮನ್ನಣೆಗಳಿಸಿದ್ದು ಸಮಾಜದ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಮಾದರಿ ಎನಿಸಿಕೊಂಡಿದ್ದಾರೆ. ತಮ್ಮ ಸಂಸ್ಥೆಗಳ ಮೂಲಕ ಕೊರೊನಾ ಸಂದರ್ಭದಲ್ಲಿ ಪ್ರಧಾನಮಂತ್ರಿ ನಿಧಿಗೆ 5 ಕೋಟಿ, ಕಳೆದ ಬಾರಿ ನೆರೆ ಸಂದರ್ಭದಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 25 ಕೋಟಿ ದೇಣಿಗೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 1:46 pm, Wed, 25 November 20