AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾರಿಗೆ ಡಿಕ್ಕಿ ಹೊಡೆದ ಪೊಲೀಸ್ ವಾಹನ; ಆರು ಮಂದಿಗೆ ಗಂಭೀರ ಗಾಯ

ವಾಹನದಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಪೊಲೀಸರು, ಆರೋಪಿಗಳು ಇದ್ದರು.

ಲಾರಿಗೆ ಡಿಕ್ಕಿ ಹೊಡೆದ ಪೊಲೀಸ್ ವಾಹನ; ಆರು ಮಂದಿಗೆ ಗಂಭೀರ ಗಾಯ
Lakshmi Hegde
| Edited By: |

Updated on: Nov 25, 2020 | 1:18 PM

Share

ದಾವಣಗೆರೆ: ಪೊಲೀಸ್​ ವಾಹನ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಹರಿಹರದಲ್ಲಿ ನಡೆದಿದೆ. ವಾಹನದಲ್ಲಿ ಬೆಂಗಳೂರಿನ ಮಾಗಡಿ ರಸ್ತೆಯ ಪೊಲೀಸರು, ಆರೋಪಿಗಳು ಇದ್ದರು.

ಕಾನ್ಸ್​ಟೆಬಲ್​ ಪರೀಕ್ಷೆಯಲ್ಲಿ ನಕಲು ಮಾಡಿದ ಆರೋಪಿಗಳನ್ನು ಮಹಜರಿಗೆಂದು ಕರೆದುಕೊಂಡು ಹೋಗಲಾಗುತ್ತಿತ್ತು. ಅಪಘಾತದಿಂದ ವಾಹನ ನುಜ್ಜುಗುಜ್ಜಾಗಿದೆ. ಪಿಎಸ್​ಐ ಸುಧಾ, ಪೊಲೀಸ್ ಸಿಬ್ಬಂದಿ ಮಹೇಶ್​, ಶಿವರಾಜ್​, ಮೌನೇಶ್​, ವಾಹನ ಚಾಲಕ ಮೋಹನ್, ಆರೋಪಿ ಮಲ್ಲಿಕಾರ್ಜುನ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಲಾಗಿದೆ.