ಚುನಾವಣಾ ಪ್ರಚಾರದಲ್ಲಿ ಜನ ಜಾಸ್ತಿ, ಸಿಎಂ ಗಮನಕ್ಕೆ ತರುತ್ತೇನೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

|

Updated on: Apr 07, 2021 | 11:33 AM

ಕರ್ನಾಟಕದ ಸಮಸ್ತ ಕನ್ನಡಿಗರಿಗೆ ಆರೋಗ್ಯ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಆರೋಗ್ಯ ದಿನಾಚರಣೆ ಶುಭಾಶಯಗಳು ಎಂದು ಡಾ.ಕೆ.ಸುಧಾಕರ್ ಶುಭಾ ಕೋರಿದರು. ಸಮಗ್ರ ಆರೋಗ್ಯ ಸಶಸ್ತ ಈ ವರ್ಷದ ಘೋಷಣೆ. ವಾಕ್ ಥಾನ್ ಬೆಳಗ್ಗೆ ಮಾಡಿದ್ದೀವಿ ಎಂದು ಸಚಿವರು ಹೇಳಿದರು.

ಚುನಾವಣಾ ಪ್ರಚಾರದಲ್ಲಿ ಜನ ಜಾಸ್ತಿ, ಸಿಎಂ ಗಮನಕ್ಕೆ ತರುತ್ತೇನೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಡಾ.ಕೆ. ಸುಧಾಕರ್​
Follow us on

ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಹೆಚ್ಚು ಜನ ಸೇರುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಚುನಾವಣಾ ಪ್ರಚಾರದಲ್ಲಿ ಕೇವಲ 500 ಜನರು ಸೇರಬೇಕು. ಹೆಚ್ಚು ಜನ ಸೇರುತ್ತಿದ್ದರೆ ಅಧಿಕಾರಿಗಳು ಗಮನಹರಿಸುತ್ತಾರೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೂ ನಾನು ಮತ್ತೊಮ್ಮೆ ತರುತ್ತೇನೆ. ಸರ್ವಪಕ್ಷಗಳ ಸಭೆ ಕರೆದು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.

ಶುಭಾ ಕೋರಿದ ಸಚಿವರು
ಕರ್ನಾಟಕದ ಸಮಸ್ತ ಕನ್ನಡಿಗರಿಗೆ ಆರೋಗ್ಯ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಆರೋಗ್ಯ ದಿನಾಚರಣೆ ಶುಭಾಶಯಗಳು ಎಂದು ಡಾ.ಕೆ.ಸುಧಾಕರ್ ಶುಭಾ ಕೋರಿದರು. ಸಮಗ್ರ ಆರೋಗ್ಯ ಸಶಸ್ತ ಈ ವರ್ಷದ ಘೋಷಣೆ. ವಾಕ್ ಥಾನ್ ಬೆಳಗ್ಗೆ ಮಾಡಿದ್ದೀವಿ. ಪ್ಯಾರಾ ನರ್ಸಿಂಗ್, ಪ್ಯಾರಾ ಮೆಡಿಕಲ್ನಲ್ಲೂ ಆಚರಣೆ ಮಾಡಲಾಗುತ್ತಿದೆ. ಕೊವಿಡ್ ನಡವಳಿಕೆ ಅನುಗುಣವಾಗಿ ಸಮಾರಂಭವನ್ನು ಸರಳವಾಗಿ ಆಚರಿಸಲಿದ್ದೇವೆ. ಮೂಲಭೂತ ಹಕ್ಕಾಗಿ ಒಳ್ಳೆಯ ಆರೋಗ್ಯವನ್ನು ಪರಿಗಣಿಸಬೇಕು. ಪ್ರತಿಯೊಬ್ಬರು ಆರೋಗ್ಯವಂತರಾಗಿರಬೇಕು. ಆಗ ರಾಜ್ಯ ಕೂಡ ಆರ್ಥಿಕವಾಗಿ ಪ್ರಗತಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಮುಂದುವರಿಸುವ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸಚಿವರು ಇದು 7 ನೇ ತಾರೀಖಿನವರೆಗೆ ಅನ್ವಯವಾಗುತ್ತದೆ. ಬಳಿಕ ಮಾರ್ಗಸೂಚಿ ಅನುಗುಣವಾಗಿ ಇರುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ

RBI Monetary Policy: ಕೊರೊನಾ ಕಾಟದ ಸಮ್ಮುಖದಲ್ಲಿ ರೆಪೊ ದರ ಸೇರಿದಂತೆ ನೀತಿ ನಿರೂಪಣೆಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಸ್ಥಿರತೆ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್!

ಹೋಲ್ಡಾನ್ ಎಂದ ರಾಜ್ಯ ಸರ್ಕಾರ; ಮಾರ್ಚ್ ತಿಂಗಳ ಸಂಬಳ ಇನ್ನೂ ಸಾರಿಗೆ ನೌಕರರ ಕೈ ಸೇರಿಲ್ಲ, ಮುಷ್ಕರ ನಿಲ್ಲಿಸಿದರಷ್ಟೇ ಸಂಬಳ?

(Dr K Sudhakar says I will inform the Chief Minister about more people joining the election campaign)