
ಕಲಬುರಗಿ: ಜಿಲ್ಲೆಯ ಜಿಮ್ಸ್ ಆಸ್ಪತ್ರೆಗೆ ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್ ಇಂದು ಭೇಟಿ ನೀಡಿದ್ದು, ಸಿಸಿಟಿವಿಯಲ್ಲಿ ಕೊವಿಡ್ ವಾರ್ಡ್ಗಳ ಪರಿಶೀಲನೆ ನಡೆಸಿದ್ದಾರೆ. ನಂತರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಡಾ.ಕೆ.ಸುಧಾಕರ್ ಕಲಬುರಗಿಯ ಆಸ್ಪತ್ರೆಗಳಲ್ಲಿ 600 ಕೊರೊನಾ ಸೋಂಕಿತರಿದ್ದಾರೆ ಆದರೆ ಪ್ರತಿದಿನ 1,500 ರೆಮ್‌ಡಿಸಿವಿರ್‌ಗೆ ಬೇಡಿಕೆ ಇಟ್ಟಿದ್ದೀರಿ. ಬಳಕೆಯಾಗದ ಇಂಜೆಕ್ಷನ್ ವಾಪಸ್ ಪಡೆಯಬೇಕು. ಅನಗತ್ಯವಾಗಿ ರೆಮ್‌ಡಿಸಿವಿರ್ ಇಂಜೆಕ್ಷನ್ ಪಡೆಯುತ್ತಿದ್ದಾರೆ. ಹೀಗೆ ಆದರೆ ನಿಮ್ಮ ವಿರುದ್ಧ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಡ್ರಗ್ ಕಂಟ್ರೋಲ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಂತರದಲ್ಲಿ ಕಲಬುರಗಿ ಜಿಲ್ಲೆಯ ಅಧಿಕಾರಿಗಳನ್ನು ಉದ್ದೇಶಿ ಮಾತನಾಡಿದ ಡಾ.ಕೆ.ಸುಧಾಕರ್ ಕೊರೊನಾ ಪಾಜಿಟಿವ್ ಬಂದವರೆಲ್ಲಾ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದನ್ನು ನಿಯಂತ್ರಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕು. ಯಾವುದೇ ರೋಗ ಲಕ್ಷಣಗಳನ್ನು ಹೊಂದಿಲ್ಲದೇ ಇರೋರುವವರಿಗೆ ನೈತಿಕ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು. ಪಾಜಿಟಿವ್ ಬಂದವರಿದೆ ಮೆಡಿಕಲ್ ಕಿಟ್ಗಳನ್ನು ನೀಡಬೇಕು ಎಂದು ಸೂಚಿಸಿದರು.
ಲಾಕ್‌ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚನೆ
ಡಾ.ಕೆ.ಸುಧಾಕರ್ ಲಾಕ್‌ಡೌನ್ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು,
ಇಲ್ಲದಿದ್ದರೆ ಲಾಕ್‌ಡೌನ್ ವಿಸ್ತರಿಸುತ್ತಾ ಹೋಗಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ವಿಸ್ತರಿಸುತ್ತಾ ಹೋಗ್ತಿದ್ದಾರೆ. ಎಷ್ಟು ದಿನ ಅಂತ ಲಾಕ್‌ಡೌನ್ ವಿಸ್ತರಣೆ ಮಾಡಲು ಆಗತ್ತದೆ. ಲಾಕ್‌ಡೌನ್ ಬೇಡವೆಂದರೆ ಗೈಡ್‌ಲೈನ್ಸ್ ಜಾರಿಗೊಳಿಸಿ ಎಂದು ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಕಲಬುರಗಿ ಡಿಹೆಚ್‌ಒಗೆ ಎಚ್ಚರಿಸಿದ ಡಾ.ಕೆ.ಸುಧಾಕರ್
ಕಲಬುರಗಿ ಜಿಲ್ಲಾ ಪಂಚಾಯತಿ ಕಚೇರಿಯಲ್ಲಿ ಸಚಿವ ಸುಧಾಕರ್ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು,ಖಾಸಗಿ ಆಸ್ಪತ್ರೆಯ ಬೆಡ್ ವಿಷಯವಾಗಿ ಮಾತನಾಡಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಶೇಕಡಾ 75ರಷ್ಟು ಬೆಡ್ ಬೇಕು. ಯಾವುದೇ ಕಾರಣ ನೀಡದೆ ಬೆಡ್‌ಗಳನ್ನ ಒದಗಿಸಬೇಕು. ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್ ನೀಡಬೇಕು. ಆನಂತರ ಮೆಡಿಕಲ್ ಕಾಲೇಜುಗಳಲ್ಲಿ ಬೆಡ್ ವ್ಯವಸ್ಥೆ, ಇದಾದ ಬಳಿಕ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ನೀಡಬೇಕು. ನಿಮ್ಮಿಂದ ಸಾಧ್ಯವಾಗದಿದ್ರೆ ಹೇಳಿ ಬದಲಾಯಿಸುತ್ತೇವೆ ಎಂದು ಕಲಬುರಗಿ ಡಿಹೆಚ್‌ಒಗೆ
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸೂಚಿಸಿದ್ದಾರೆ.
ಇದನ್ನೂ ಓದಿ:
ಲಸಿಕೆಗಾಗಿ 18-45 ವರ್ಷದವರು ನಾಳೆ ಆಸ್ಪತ್ರೆಗೆ ಹೋಗಬೇಡಿ, ಅಧಿಕೃತವಾಗಿ ಹೇಳೋ ತನಕ ಕಾಯಬೇಕು: ಡಾ.ಸುಧಾಕರ್
ಬೀದರ್: ಬ್ರಿಮ್ಸ್ ಅವ್ಯವಸ್ಥೆ ಕಂಡು ಸಚಿವ ಡಾ.ಕೆ.ಸುಧಾಕರ್ ಕೆಂಡಾಮಂಡಲ
Published On - 1:44 pm, Sat, 1 May 21