ಲಾಕ್​ಡೌನ್​ ಇದ್ದರೂ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನ ಓಡಾಟ; ಕಾರನ್ನು ವಶಕ್ಕೆ ಪಡೆದ ಕಲಬುರಗಿ ಪೊಲೀಸರು

ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಾಗಿದೆ. ಹೀಗಿದ್ದೂ ಸರ್ಕಾರಿ ಸೇವೆಯಲ್ಲಿದ್ದ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನೊಬ್ಬ ಓಡಾಡುತ್ತಿದ್ದರು. ಅನಗತ್ಯವಾಗಿ ಕುಟುಂಬಸ್ಥರ ಜೊತೆ ಓಡಾಟ ನಡೆಸಿದ ಹಿನ್ನೆಲೆ ಪಿಡಬ್ಲೂಡಿಗೆ ಸೇರಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಲಾಕ್​ಡೌನ್​ ಇದ್ದರೂ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನ ಓಡಾಟ; ಕಾರನ್ನು ವಶಕ್ಕೆ ಪಡೆದ ಕಲಬುರಗಿ ಪೊಲೀಸರು

Updated on: May 22, 2021 | 2:21 PM

ಕಲಬುರಗಿ: ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ರಾಜ್ಯ ಸರ್ಕಾರ ಲಾಕ್​ಡೌನ್ ವಿಧಿಸಿದೆ. ಬೇಕಾಬಿಟ್ಟಿಯಾಗಿ ಓಡಾಡಿದರೆ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅನಗತ್ಯವಾಗಿ ಓಡಾಡುವ ಜನರಿಗೆ ದಂಡವನ್ನು ಹಾಕಿ, ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ಪೊಲೀಸ್ ಸಿಬ್ಬಂದಿ ಯಾರಿಗೂ ಮುಲಾಜೇ ಮಾಡದೆ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಹೀಗೆ ಅನಗತ್ಯವಾಗಿ ಸರ್ಕಾರಿ ಕಾರು ದುರ್ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಚಾಲಕನಿಗೆ ಪೊಲೀಸರು ಶಾಕ್ ನೀಡಿದ್ದಾರೆ.

ರಾಜ್ಯಾದ್ಯಂತ ಲಾಕ್​ಡೌನ್​ ಜಾರಿಯಾಗಿದೆ. ಹೀಗಿದ್ದೂ ಸರ್ಕಾರಿ ಸೇವೆಯಲ್ಲಿದ್ದ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನೊಬ್ಬ ಓಡಾಡುತ್ತಿದ್ದರು. ಅನಗತ್ಯವಾಗಿ ಕುಟುಂಬಸ್ಥರ ಜೊತೆ ಓಡಾಟ ನಡೆಸಿದ ಹಿನ್ನೆಲೆ ಪಿಡಬ್ಲೂಡಿಗೆ ಸೇರಿದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಘಟನೆ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ನಡೆದಿದೆ. ಲೋಕೋಪಯೋಗಿ ಇಲಾಖೆ ಸೇವೆಯಲ್ಲಿದ್ದ ಕಾರಿನಲ್ಲಿ ಕುಟುಂಬದವರನ್ನು ಕರೆದುಕೊಂಡು ಚಾಲಕ ಹೋಗುತ್ತಿದ್ದರು. ಸರ್ಕಾರಿ ಸೇವೆಯಲ್ಲಿ ಅಂತ ಬೋರ್ಡ್ ಇದ್ದಿದ್ದರಿಂದ ಪೊಲೀಸರು ಹಿಡಿಯಲ್ಲಾ ಅಂತ ಚಾಲಕ ಓಡಾಡುತ್ತಿದ್ದರು. ಆದರೆ ಚಾಲಕನ ದುರ್ಬಳಕೆಯನ್ನು ಗಮನಿಸಿದ ಪೊಲೀಸರು ಕಾರ್ನ ಸೀಜ್ ಮಾಡಿದ್ದಾರೆ.

ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಪೊಲೀಸರು ವಾಹನಗಳ ತಪಾಸಣೆ ಮುಂದಾಗಿದ್ದರು. ಅನಗತ್ಯವಾಗಿ ಹೊರ ಬಂದವರಿಗೆ, ಮಾಸ್ಕ್ ಇಲ್ಲದೇ ಇರುವವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ಕಲಬುರಗಿ ಜಿಮ್ಸ್ ಲಸಿಕಾ ಕೇಂದ್ರದಲ್ಲಿ ಇಂದು (ಮೇ 22) ಫ್ರಂಟ್​ಲೈನ್​ ವಾರಿಯರ್ಸ್, 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಲಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದೆ. 18ರಿಂದ 44 ವರ್ಷದವರೆಗೆ ಇಂದು ಕೊವಿಡ್ ಲಸಿಕೆ ಇಲ್ಲ. ಇನ್ನು ಲಸಿಕೆ ಬಾರದ ಹಿನ್ನೆಲೆಯಲ್ಲಿ ಲಸಿಕೆ ಇಲ್ಲಾ ಅಂತ ಸಿಬ್ಬಂದಿ ತಿಳಿಸಿದೆ.

ಇದನ್ನೂ ಓದಿ

ದೇಶದಲ್ಲಿ 8,840 ಮಂದಿಗೆ ಬ್ಲ್ಯಾಕ್​ ಫಂಗಸ್​: ಪ್ರಕರಣಗಳ ಆಧಾರದ ಮೇಲೆ ರಾಜ್ಯಗಳಿಗೆ ಔಷಧ ವಿತರಣೆ, ಕರ್ನಾಟಕಕ್ಕೆ 1,270 ವಯಲ್ಸ್ ಲಭ್ಯ

ಕೊವಿಡ್ ಸೋಂಕಿತರ ನೆರವಿಗೆ ನಿಂತ ಮಂಡ್ಯದ ಪುರಸಭೆ ಸದಸ್ಯೆ; ಸಹಾಯ ಹಸ್ತಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

(Driver was driving while misusing a government car and police seized that car at kalaburagi)