ದೇಶದಲ್ಲಿ 8,840 ಮಂದಿಗೆ ಬ್ಲ್ಯಾಕ್ ಫಂಗಸ್: ಪ್ರಕರಣಗಳ ಆಧಾರದ ಮೇಲೆ ರಾಜ್ಯಗಳಿಗೆ ಔಷಧ ವಿತರಣೆ, ಕರ್ನಾಟಕಕ್ಕೆ 1,270 ವಯಲ್ಸ್ ಲಭ್ಯ
ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 23,680 ವಯಲ್ಸ್ ಅಂಫೋಟೆರಿಸಿನ್ ಬಿ ಡ್ರಗ್ಸ್ ಹಂಚಿಕೆ ಮಾಡಲಾಗುತ್ತಿದೆ. ದೇಶದಲ್ಲಿ ಒಟ್ಟು 8,848 ಬ್ಲ್ಯಾಕ್ ಫಂಗಸ್ ಪ್ರಕರಣದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣಗಳಿವೆಯೋ ಅದರ ಆಧಾರದ ಮೇಲೆ ಅಂಫೋಟೆರಿಸಿನ್ ಬಿ ಔಷಧ ವಿತರಣೆ ಮಾಡಲಾಗುತ್ತಿದೆ.
ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಯ ಜತೆಯಲ್ಲೇ ಬ್ಲ್ಯಾಕ್ ಫಂಗಸ್ ಅಥವಾ ಮ್ಯೂಕೋರ್ಮೈಕೋಸಿಸ್ ಸೋಂಕು ಸಹ ಉಲ್ಬಣಿಸುತ್ತಿರುವುದು ಸರ್ಕಾರ ಹಾಗೂ ವೈದ್ಯಕೀಯ ವಲಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಬ್ಲ್ಯಾಕ್ ಫಂಗಸ್ ಅಧಿಕ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕೆಲವರಲ್ಲಿ ಮಾರಣಂತಿಕವಾಗಿ ಕಾಡುತ್ತಿರುವುದರಿಂದ ಈ ಹಂತದಲ್ಲೇ ಇದನ್ನು ತಡೆಗಟ್ಟಬೇಕಾದ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ದೇಶದಲ್ಲಿ ಒಟ್ಟು 8,848 ಮಂದಿಗೆ ಬ್ಲ್ಯಾಕ್ ಫಂಗಸ್ ಸೋಂಕು ದೃಢ ಪಟ್ಟಿದೆ. ಇದನ್ನು ಗಮನಿಸಿ ತಕ್ಷಣವೇ ಕೇಂದ್ರದ ಫಾರ್ಮಾಸೂಟಿಕಲ್ಸ್ ಇಲಾಖೆಯಿಂದ ಡ್ರಗ್ಸ್ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.
ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 23,680 ವಯಲ್ಸ್ ಅಂಫೋಟೆರಿಸಿನ್ ಬಿ ಡ್ರಗ್ಸ್ ಹಂಚಿಕೆ ಮಾಡಲಾಗುತ್ತಿದೆ. ದೇಶದಲ್ಲಿ ಒಟ್ಟು 8,848 ಬ್ಲ್ಯಾಕ್ ಫಂಗಸ್ ಪ್ರಕರಣದಲ್ಲಿ ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣಗಳಿವೆಯೋ ಅದರ ಆಧಾರದ ಮೇಲೆ ಅಂಫೋಟೆರಿಸಿನ್ ಬಿ ಔಷಧ ವಿತರಣೆ ಮಾಡಲಾಗುತ್ತಿದೆ ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
After a detailed review of rising no. of cases of #Mucormycosis in various states, a total of 23680 additional vials of #Amphotericin– B have been allocated to all States/UTs today.
The Allocation has been made based on total no. of patients which is approx. 8848 across country. pic.twitter.com/JPsdEHuz0W
— Sadananda Gowda (@DVSadanandGowda) May 22, 2021
ಕರ್ನಾಟಕದಲ್ಲಿ 500 ಪ್ರಕರಣಗಳಿರುವ ಕಾರಣ ರಾಜ್ಯಕ್ಕೆ 1,270 ವಯಲ್ಸ್ ಔಷಧ ಕಳುಹಿಸಲಾಗಿದೆ. ಇನ್ನುಳಿದಂತೆ ಆಂಧ್ರ ಪ್ರದೇಶದಲ್ಲಿ 910 ಪ್ರಕರಣಗಳಿದ್ದು ಅಲ್ಲಿಗೆ 2,310 ವಯಲ್ಸ್, ಬಿಹಾರದಲ್ಲಿ 56 ಪ್ರಕರಣಗಳಿದ್ದು ಅಲ್ಲಿಗೆ 190 ವಯಲ್ಸ್, ಚಂಡೀಗಡದಲ್ಲಿ 8 ಪ್ರಕರಣಗಳಿದ್ದು ಅಲ್ಲಿಗೆ 50 ವಯಲ್ಸ್, ಚತ್ತೀಸ್ಗಡದಲ್ಲಿ 87 ಪ್ರಕರಣಗಳಿದ್ದು ಅಲ್ಲಿಗೆ 300 ವಯಲ್ಸ್, ದಮನ್ ಮತ್ತು ದಿಯುನಲ್ಲಿ 6 ಪ್ರಕರಣಗಳಿದ್ದು ಅಲ್ಲಿಗೆ 50 ವಯಲ್ಸ್, ದೆಹಲಿಯಲ್ಲಿ 197 ಪ್ರಕರಣಗಳಿದ್ದು ಅಲ್ಲಿಗೆ 670 ವಯಲ್ಸ್, ಗೋವಾದಲ್ಲಿ 12 ಪ್ರಕರಣಗಳಿದ್ದು ಅಲ್ಲಿಗೆ 50 ವಯಲ್ಸ್, ಗುಜರಾತ್ನಲ್ಲಿ 2,281 ಪ್ರಕರಣಗಳಿದ್ದು ಅಲ್ಲಿಗೆ 5,800 ವಯಲ್ಸ್, ಹರಿಯಾಣದಲ್ಲಿ 250 ಪ್ರಕರಣಗಳಿದ್ದು ಅಲ್ಲಿಗೆ 640 ವಯಲ್ಸ್, ಜಾರ್ಖಂಡ್ನಲ್ಲಿ 27 ಪ್ರಕರಣಗಳಿದ್ದು ಅಲ್ಲಿಗೆ 100 ವಯಲ್ಸ್, ಕೇರಳದಲ್ಲಿ 36 ಪ್ರಕರಣಗಳಿದ್ದು ಅಲ್ಲಿಗೆ 120 ವಯಲ್ಸ್, ಮಧ್ಯಪ್ರದೇಶದಲ್ಲಿ 720 ಪ್ರಕರಣಗಳಿದ್ದು ಅಲ್ಲಿಗೆ 1830 ವಯಲ್ಸ್, ಮಹಾರಾಷ್ಟ್ರದಲ್ಲಿ 2000 ಪ್ರಕರಣಗಳಿದ್ದು ಅಲ್ಲಿಗೆ 5090 ವಯಲ್ಸ್, ಒಡಿಶಾದಲ್ಲಿ 15 ಪ್ರಕರಣಗಳಿದ್ದು ಅಲ್ಲಿಗೆ 50 ವಯಲ್ಸ್, ಪಂಜಾಬ್ನಲ್ಲಿ 95 ಪ್ರಕರಣಗಳಿದ್ದು ಅಲ್ಲಿಗೆ 320 ವಯಲ್ಸ್, ರಾಜಸ್ಥಾನದಲ್ಲಿ 700 ಪ್ರಕರಣಗಳಿದ್ದು ಅಲ್ಲಿಗೆ 1780 ವಯಲ್ಸ್, ತಮಿಳುನಾಡಿನಲ್ಲಿ 40 ಪ್ರಕರಣಗಳಿದ್ದು ಅಲ್ಲಿಗೆ 140 ವಯಲ್ಸ್, ತೆಲಂಗಾಣದಲ್ಲಿ 350 ಪ್ರಕರಣಗಳಿದ್ದು ಅಲ್ಲಿಗೆ 890 ವಯಲ್ಸ್, ತ್ರಿಪುರಾದಲ್ಲಿ 1 ಪ್ರಕರಣವಿದ್ದು ಅಲ್ಲಿಗೆ 50 ವಯಲ್ಸ್, ಉತ್ತರ ಪ್ರದೇಶದಲ್ಲಿ 112 ಪ್ರಕರಣಗಳಿದ್ದು ಅಲ್ಲಿಗೆ 380 ವಯಲ್ಸ್, ಉತ್ತರಾಖಂಡದಲ್ಲಿ 2 ಪ್ರಕರಣಗಳಿದ್ದು ಅಲ್ಲಿಗೆ 50 ವಯಲ್ಸ್, ಪಶ್ಚಿಮ ಬಂಗಾಳದಲ್ಲಿ 1 ಪ್ರಕರಣವಿದ್ದು ಅಲ್ಲಿಗೆ 50 ವಯಲ್ಸ್, ವಿವಿಧ ಕೇಂದ್ರ ಇಲಾಖೆಗಳಿಗೆ ಸಂಬಂಧಿಸಿದಂತೆ 442 ಪ್ರಕರಣಗಳಿದ್ದು ಅಲ್ಲಿಗೆ 1,500 ವಯಲ್ಸ್ ಕಳುಹಿಸಿಕೊಡಲಾಗಿದೆ ಎಂದು ಸದಾನಂದಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಈ 3 ವಿಧಾನಗಳನ್ನು ಅನುಸರಿಸಿದರೆ ಬ್ಲ್ಯಾಕ್ ಫಂಗಸ್ ಕಾಯಿಲೆಯನ್ನು ತಡೆಗಟ್ಟಬಹುದು: ಡಾ.ರಣ್ದೀಪ್ ಗುಲೇರಿಯಾ
(Amphotericin B Drugs alloted for all states based on number of Black Fungus cases Karnataka Gets 1270 Vials)