AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವೇಳೆ ಮಕ್ಕಳಿಗೆ ಶಿಕ್ಷಣ ನೀಡಬೇಕು; ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಟ್ಟ ರುಪ್ಸಾ

ಕೊರೊನಾ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸಾ) ಬೇಡಿಕೆ ಇಟ್ಟಿದೆ. ಈ ಬಗ್ಗೆ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಕೊರೊನಾ ವೇಳೆ ಮಕ್ಕಳಿಗೆ ಶಿಕ್ಷಣ ನೀಡಬೇಕು; ರಾಜ್ಯ ಸರ್ಕಾರಕ್ಕೆ ಬೇಡಿಕೆಯಿಟ್ಟ ರುಪ್ಸಾ
ಸಾಂದರ್ಭಿಕ ಚಿತ್ರ
sandhya thejappa
|

Updated on: May 22, 2021 | 1:14 PM

Share

ಬೆಂಗಳೂರು: ಕೊರೊನಾ ವೇಳೆ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ರುಪ್ಸಾ ಬೇಡಿಕೆ ಇಟ್ಟಿದೆ. ಈಗಾಗಲೇ ಶೈಕ್ಷಣಿಕ ವರ್ಷ ಪ್ರಾರಂಭದ ಕುರಿತು ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆ ಕೆಡಿಸಿಕೊಂಡಿದೆ. ಕೊರೊನಾದಿಂದಾಗಿ ಕಳೆದ ವರ್ಷ ಕೂಡ ತರಗತಿಗಳು ನಡೆದಿಲ್ಲ. ಬರೀ ಆನ್​ಲೈನ್​ ಪಾಠದ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗಿದೆ. ಆದರೆ ಈ ವರ್ಷವೂ ಕೂಡ ಸರಿಯಾದ ಸಮಯಕ್ಕೆ ಶಾಲೆ ಓಪನ್ ಇಲ್ಲ. ಹೀಗಾಗಿ ಕೊರೊನಾ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಖಾಸಗಿ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸಾ) ಬೇಡಿಕೆ ಇಟ್ಟಿದೆ. ಈ ಬಗ್ಗೆ ರುಪ್ಸಾ ಕರ್ನಾಟಕ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿದ್ದಾರೆ.

ಬೇಡಿಕೆಗಳು ಹೀಗಿವೆ 1. 2021-22 ನೇ ಶೈಕ್ಷಣಿಕ ವೇಳಾಪಟ್ಟಿಯನ್ನು ತಕ್ಷಣ ಬಿಡುಗಡೆ ಮಾಡಬೇಕು. 2. ಮಕ್ಕಳ ಶಾಲಾ ದಾಖಲಾತಿ ಕಡ್ಡಾಯಗೊಳಿಸಬೇಕು. 3. ಈಗಾಗಲೇ ಇರುವಂತಹ ಪಠ್ಯಕ್ರಮದಲ್ಲಿಯೇ ಆನ್​ಲೈನ್​ನಂತಹ ಪರ್ಯಾಯ ಬೋಧನೆಗೆ ಒತ್ತುಕೊಡಬೇಕು. 4. ಆನ್ಲೈನ್ ವ್ಯವಸ್ಥೆ ದೊರೆಯದ ಮಕ್ಕಳಿಗೆ ಸರಳ ರೂಪದ ಪಠ್ಯವಿರಬೇಕು. 5. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಕೂಡಲೇ ಆನ್ಲೈನ್ ಪಾಠ ಕಲಿಯಲು ಪೂರಕ ಸಾಮಾಗ್ರಿ/ ಟ್ಯಾಬ್, ಲ್ಯಾಪ್ ಟ್ಯಾಪ್ ಒದಗಿಸಬೇಕು. 6. ಆರ್ಟಿಇ ನಿಯಮದಲ್ಲಿ ಸೂಚಿಸಿರುವ ತರಗತಿಗಳಿಗೆ ಪರೀಕ್ಷೆ ಕಡ್ಡಾಯ, ಮೌಲ್ಯಂಕನ ನಡೆಸಲು ಸೂಚನೆ. 7. ಸ್ಥಳೀಯವಾಗಿ ಸ್ಥಾಪಿಸಿರುವ ಖಾಸಗಿ ಸಂಸ್ಥೆಗಳಲ್ಲಿರುವ ಶಿಕ್ಷಕರನ್ನು ಬಳಕೆ ಮಾಡಿಕೊಳ್ಳಬೇಕು. 8. ಸರ್ಕಾರಿ ಹಾಗೂ ಖಾಸಗಿ ಮಕ್ಕಳಿಗೆಗೂ ತಾರತಮ್ಯ ಮಾಡಬಾರದು. 8. ಶಿಕ್ಷಣದ ಪ್ರಗತಿಯನ್ನು ನಿರಂತರವಾಗಿ ಗಮನಿಸಲು ಸ್ಥಳೀಯ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳಲು ನಿರ್ದೇಶಿಸಬೇಕು.

ಈ ಮೇಲಿನ ಬೇಡಿಕೆಗಳನ್ನು ಶಿಕ್ಷಣ ಇಲಾಖೆ ಸುತ್ತೋಲೆ ಮೂಲಕ ಪ್ರಕಟಿಸುವಂತೆ ರುಪ್ಸಾ ಒತ್ತಾಯಿಸಿದೆ. ಆಯುಕ್ತರಿಗೆ ಪತ್ರ ಬರೆದ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಬೇಡಿಕೆಗಳನ್ನು ಅಲಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ

ಕೊವಿಡ್ ನಿಯಂತ್ರಣದಲ್ಲಿ ಬೀದರ್ ಜಿಲ್ಲೆಯೇ ರಾಜ್ಯಕ್ಕೆ ಪ್ರಥಮ; ಕೊರೊನಾ ತಡೆಯುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ

ಹಿಂದುತ್ವವನ್ನು ಉತ್ತೇಜಿಸುತ್ತದೆ ಎಂದು ಯೋಗಕ್ಕೆ ಹೇರಿದ್ದ ನಿರ್ಬಂಧ 28 ವರ್ಷಗಳ ಬಳಿಕ ತೆರವು; ಆದರೂ ನಮಸ್ತೇ ಎನ್ನುವಂತಿಲ್ಲ, ಮಂತ್ರ ಪಠಿಸುವಂತಿಲ್ಲ

(RUPSA written letter to Karnataka government for educate children during Corona)