ಕೊವಿಡ್ ನಿಯಂತ್ರಣದಲ್ಲಿ ಬೀದರ್ ಜಿಲ್ಲೆಯೇ ರಾಜ್ಯಕ್ಕೆ ಪ್ರಥಮ; ಕೊರೊನಾ ತಡೆಯುವಲ್ಲಿ ಯಶಸ್ವಿಯಾದ ಜಿಲ್ಲಾಡಳಿತ
ರಾಜ್ಯದಲ್ಲಿಯೇ ಅತೀ ಕಡಿಮೆ ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಕೊರೊನಾ ನಿಯಂತ್ರಣಕ್ಕೆ ತಂದ ವೈದ್ಯರು ಅಧಿಕಾರಿ ವರ್ಗದವರಿಗೆ ಈ ಮೂಲಕ ಧನ್ಯವಾದ ಹೇಳುತ್ತೇನೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್ ಹೇಳಿದ್ದಾರೆ.
ಬೀದರ್: ಕೊರೊನಾ ಸೋಂಕಿನ ಎರಡನೇ ಅಲೆ ಹೊಡೆತಕ್ಕೆ ಇಡೀ ದೇಶವೇ ನಲುಗಿ ಹೋಗಿದೆ. ಹೀಗಿರುವಾಗ ಪರಿಸ್ಥಿತಿಯನ್ನು ಹತೋಟಿಗೆ ತರಲು ರಾಜ್ಯ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ಅಲ್ಲದೆ ಜಿಲ್ಲಾಧಿಕಾರಿಗಳಿಗೆ ತಮ್ಮ ತಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಮುಂಜಾಗೃತೆಯನ್ನು ವಹಿಸಿ ಕೊರೊನಾ ನಿಯಂತ್ರಣಕ್ಕೆ ತರುವಂತೆ ಸೂಚಿಸಲಾಗಿದೆ. ಅದರಂತೆ ಬೀದರ್ ಜಿಲ್ಲಾಧಿಕಾರಿ ಕೂಡ ಹೆಚ್ಚಿನ ಜವಾಬ್ದಾರಿ ವಹಿಸಿದ್ದು, ಪ್ರತಿದಿನವೂ 500 ಆಸು ಪಾಸಿನಲ್ಲಿ ಪತ್ತೆಯಾಗುತ್ತಿದ್ದ ಕೊವಿಡ್ ಪ್ರಕರಣಗಳು ಈಗ ನಿಯಂತ್ರಣಕ್ಕೆ ಬಂದಿದೆ. ಅಷ್ಟೇ ಅಲ್ಲ ರೆಡ್ ಝೋನ್ನೊಂದಿಗೆ ಗುರುತಿಸಿಕೊಂಡ ಬೀದರ್ ಜಿಲ್ಲೆ ಈಗ ಕೋವಿಡ್ ನಿಯಂತ್ರಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಎರಡು ರಾಜ್ಯದ ಗಡೀ ಹಂಚಿಕೊಂಡಿರುವ ಬೀದರ್ ಜಿಲ್ಲೆಯೀಗ ಕೊವಿಡ್ ಸೋಂಕು ಮುಕ್ತ ಜಿಲ್ಲೆ ಎಡೆಗೆ ಸಾಗಿದೆ. ಆರಂಭದಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ದಾಖಲಾಗುತ್ತಿದ್ದ ಜಿಲ್ಲೆ ಬೀದರ್ ಆಗಿತ್ತು. ಬೇಡ್ಗಳು ಸಿಗದೆ ಕೊರೊನಾ ಸೋಂಕಿತರು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಯುವಕರು, ಮಕ್ಕಳು, ವಯಸ್ಸಾದವರು, ಕೊರೊನಾ ವಾರಿಯರ್ಗಾಳಾದ ವೈದ್ಯರು, ನರ್ಸ್ಗಳಿಗೂ ಕೂಡಾ ಕೊರೊನಾ ಸೋಂಕು ಅಂಟುವುದರ ಮೂಲಕ ಜಲ್ಲೆಯ ಜನರಲ್ಲಿ ಆತಂಕ ಮೂಡುವಂತೆ ಮಾಡಿತ್ತು. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಪ್ರತಿ ದಿನ ಸಭೆ ಮೇಲೆ ಸಭೆ ನಡೆಸಿ ಕೊವಿಡ್ ಸೋಂಕನ್ನು ಹೇಗೆ ಹತೋಟಿಗೆ ತರಬೇಕೆಂದು ಹಗಲಿರುಳು ಶ್ರಮಪಟ್ಟಿದ್ದಾರೆ.
ಜನರಲ್ಲಿ ಕೊರೊನಾ ಎರಡನೇಯ ಅಲೆಯ ಬಗ್ಗೆ ಮತ್ತು ಕೊವಿಡ್ ಉಂಟುಮಾಡುವ ದುರಂತದ ಬಗ್ಗೆ, ಇದು ಹೇಗೆ ಹರಡುತ್ತದೆ ಎನ್ನುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಪರಿಣಾಮವಾಗಿ ಕೊವಿಡ್ ಸೋಂಕು ಜಿಲ್ಲೆಯಲ್ಲಿ ಹತೋಟಿಗೆ ಬಂದಿದ್ದು, ರಾಜ್ಯದಲ್ಲಿಯೇ ಅತೀ ಕಡಿಮೆ ಕೊರೊನಾ ಸಕ್ರಿಯ ಪ್ರಕರಣಗಳು ದಾಖಲಾಗಿದೆ. ಕೊರೊನಾ ನಿಯಂತ್ರಣಕ್ಕೆ ತಂದ ವೈದ್ಯರು ಅಧಿಕಾರಿ ವರ್ಗದವರಿಗೆ ಈ ಮೂಲಕ ಧನ್ಯವಾದ ಹೇಳುತ್ತೇನೆ ಎಂದು ಜಿಲ್ಲೆಯ ಉಸ್ತುವಾರಿ ಸಚಿವರಾದ ಪ್ರಭು ಚೌಹಾಣ್ ಹೇಳಿದ್ದಾರೆ.
ಬೀದರ್ ಜಿಲ್ಲೆಯಲ್ಲಿನ ಕೊರೊನಾ ಸೋಂಕಿನ ಅಂಕಿ ಅಂಶಗಳನ್ನ ಗಮನಿಸುವುದಾದರೆ. ಕಳೆದ ಒಂದೂವರೆ ವರ್ಷದಿಂದ 23263 ಜನರಿಗೆ ಕೊರೊನಾ ವಕ್ಕರಿಸಿದ್ದು, 21336 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. 1577 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿದ್ದು, ಈ ವರೆಗೆ 352 ಜನರು ಚಿಕಿತ್ಸೆ ಫಲಕಾರಿಯಾಗದೆ ಕೊವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದಲ್ಲಿಯೇ ಅತೀ ಕಡಿಮೆ ಕೊರೊನಾ ಸಕ್ರೀಯ ಪ್ರಕರಣಗಳು ಗಡೀ ಜಿಲ್ಲೆ ಬೀದರ್ನಲ್ಲಿ ದಾಖಲಾಗಿದ್ದು, ಎರಡನೇಯ ಸ್ಥಾನದಲ್ಲಿ ವಿಜಯಪುರ ಜಿಲ್ಲೆಯಿದೆ. ಇನ್ನೂ ಕೊರೊನಾ ಸೋಂಕು ಗಣನೀಯವಾಗಿ ಕಡಿಮೆಯಾಗಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಗಲಿರುಳು ಶ್ರಮವಹಿಸಿದರ ಫಲವಾಗಿ ಇಂದು ಕೊರೊನಾ ಸೋಂಕು ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ. ಇದರ ಜತೆಗೆ ಲಾಕ್ಡೌನ್ ಅವಧಿಯಲ್ಲಿಯೂ ಕೂಡಾ ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆ.
ಲಾಕ್ಡೌನ್ ಜಾರಿಮಾಡಲಾಯಿತು ಜನರು ಕೂಡಾ ಕೊರೊನಾ ನೀಯಂತ್ರಣಕ್ಕೆ ಕೈ ಜೋಡಿಸಿದರು. ಹೀಗಾಗಿ ಇಡೀ ಜಿಲ್ಲೆಯ ತಾಲೂಕು, ಪಟ್ಟಣ, ಹಳ್ಳಿ, ತಾಂಡಾಗಳಿಗೆ ವಿಸ್ತರಿಸಿದ್ದ ಕೊರೊನಾ ಸೋಂಕು ಹತೋಟಿಗೆ ಬಂದಿದ್ದು, ಜನರು ಕೂಡಾ ಖುಷಿಯಾಗಿದ್ದಾರೆ. ಇನ್ನೂ ವೈದ್ಯರು ಕೂಡಾ ಹಗಲಿರುಳೆನ್ನದೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಮೂಲಕ ಕೊರೊನಾದಿಂದ ಸಾವಿನ ಸಂಖ್ಯೆಯನ್ನ ತಪ್ಪಿಸಿದ್ದರು. ಕೊರೊನಾ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದೆ ಎಂದು ಜನರು ಕೂಡಾ ಬೇಕಾಬಿಟ್ಟಿಯಾಗಿ ಓಡಾಡುವುದು, ಸಾಮಾಜಿಕ ಅಂತರವನ್ನು ಕಾಪಾಡದೆ ಇರುವುದು, ಮಾಸ್ಕ್ ಹಾಕಿಕೊಳ್ಳದೆ ನಿಷ್ಕಾಳಜಿ ಮಾಡುವುದನ್ನ ಬಿಟ್ಟು, ಸರಕಾರದ ಜತೆಗೆ, ಜಿಲ್ಲಾಡಳಿತದ ಜತೆಗೆ ಕೈ ಜೋಡಿಸಿ ಎಂದು ಡಿಎಚ್ಓ ವಿ.ಜಿ.ರೆಡ್ಡಿ ಮನವಿ ಮಾಡಿದ್ದಾರೆ.
ಬೀದರ್ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹತೋಟಿಗೆ ಬಂದಿದೆ. ಇದು ಸಹಜವಾಗಿಯೇ ಜಿಲ್ಲೆಯ ಜನರ ಖುಷಿಗೆ ಕಾರಣವೂ ಆಗಿದೆ. ಆದರೆ ಕೊವಿಡ್ ಸೋಂಕು ಕಡಿಮೆಯಾಗಿದೆ ಎಂದು ಜನ ಮೈಮರೆಯುವುದು ಬಿಟ್ಟು ಕೊರೊನಾ ಸೋಂಕಿನ ಬಗ್ಗೆ ಜಾಗರೂಕರಾಗಿರಬೇಕು.
ಇದನ್ನೂ ಓದಿ:
ಕಳೆದೊಂದು ವರ್ಷದಿಂದ ದೇಶದಲ್ಲಿ ಕಂಡುಬಂದ ಒಟ್ಟು ಕೊರೊನಾ ಸೋಂಕಿತರ ಶೇ.27ರಷ್ಟು ಪಾಲು ಮೇ ತಿಂಗಳ 21 ದಿನದಲ್ಲಿ ಪತ್ತೆ