ಅನ್ನದಾತರಿಗೆ ಲಾಕ್​ಡೌನ್​ ಎಫೆಕ್ಟ್: ಜನರಿಗೆ ಉಚಿತವಾಗಿ ಟೊಮ್ಯಾಟೊ ನೀಡಿದ ರೈತ

ಅನ್ನದಾತರಿಗೆ ಲಾಕ್​ಡೌನ್​ ಎಫೆಕ್ಟ್: ಜನರಿಗೆ ಉಚಿತವಾಗಿ ಟೊಮ್ಯಾಟೊ ನೀಡಿದ ರೈತ
ಉಚಿತವಾಗಿ ಟೊಮ್ಯಾಟೊ ನೀಡಿದ ರೈತ ಗಿಲ್ಕಾನಾಯ್ಕ್

ತಾನೂ ಸಂಕಷ್ಟದಲ್ಲಿದ್ದರೂ ಕೂಡ ರೈತರೊಬ್ಬರು ಪರೋಪಕಾರಿಯಾಗಿದ್ದಾರೆ. ತಾನು ಬೆಳದೆ ಹೈಬ್ರೀಡ್ ಟೊಮ್ಯಾಟೊವನ್ನು ಉಚಿತವಾಗಿ ಜನರಿಗೆ ನೀಡಿದ್ದಾರೆ. ಬೆಂಗಳೂರಿನ ದಕ್ಷಿಣ ತಾಲೂಕಿನ ತಾವಕೆರೆ ಹೋಬಳಿ ದೊಡ್ಡೇರಿಯ ಗಿಲ್ಕಾನಾಯ್ಕ್ ಜನರಿಗೆ ಉಚಿತವಾಗಿ ಟೊಮ್ಯಾಟೊ ವಿತರಣೆ ಮಾಡಿದ ರೈತ.

sandhya thejappa

|

May 22, 2021 | 11:16 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಿಸಲು ಲಾಕ್​ಡೌನ್​ ಜಾರಿಯಾದ ಕಾರಣ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ. ತರಕಾರಿ ಬೆಳೆಗಾರರಿಗೆ ಪರಿಹಾರವಾಗಿ ಸರ್ಕಾರ ಈಗಾಗಲೇ ಪ್ಯಾಕೇಜ್ ಕೂಡಾ ಘೋಷಣೆ ಮಾಡಿದೆ. ಆದರೆ ನೀಡಿದ ಪ್ಯಾಕೇಜ್ ಸಾಕಾಗುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇದರ ಜೊತೆಗೆ ಬೆಳೆದ ಬೆಳೆಯನ್ನು ಖರೀದಿಸಲು ಜನ ಇಲ್ಲದೆ, ಸೂಕ್ತ ಬೆಲೆ ಸಿಗದೆ ರೈತರೊಬ್ಬರು ಅನಿವಾರ್ಯದಿಂದ ಜನರಿಗೆ ಉಚಿತವಾಗಿ ಟೊಮ್ಯಾಟೊವನ್ನು ನೀಡಿದ್ದಾರೆ.

ತಾನೂ ಸಂಕಷ್ಟದಲ್ಲಿದ್ದರೂ ಕೂಡ ರೈತರೊಬ್ಬರು ಪರೋಪಕಾರಿಯಾಗಿದ್ದಾರೆ. ತಾನು ಬೆಳದೆ ಹೈಬ್ರೀಡ್ ಟೊಮ್ಯಾಟೊವನ್ನು ಉಚಿತವಾಗಿ ಜನರಿಗೆ ನೀಡಿದ್ದಾರೆ. ಬೆಂಗಳೂರಿನ ದಕ್ಷಿಣ ತಾಲೂಕಿನ ತಾವಕೆರೆ ಹೋಬಳಿ ದೊಡ್ಡೇರಿಯ ಗಿಲ್ಕಾನಾಯ್ಕ್ ಜನರಿಗೆ ಉಚಿತವಾಗಿ ಟೊಮ್ಯಾಟೊ ವಿತರಣೆ ಮಾಡಿದ ರೈತ. ಗಿಲ್ಕಾನಾಯ್ಕ್ ತಮ್ಮ 10 ಎಕರೆಯಲ್ಲಿ ಹೈಬ್ರೀಡ್ ಟೊಮ್ಯಾಟೊ ಬೆಳದಿದ್ದರು. ಶ್ರೀಲಂಕಾ, ಬಾಂಗ್ಲಾದೇಶಕ್ಕೆ ರಫ್ತು ಮಾಡುತ್ತಿದ್ದರು.

ಲಾಕ್​ಡೌನ್​ ಹಿನ್ನೆಲೆ ಯಾವುದೇ ರಫ್ತು ನಡೆಯುತ್ತಿಲ್ಲ. ಕೋಲಾರ ಎಪಿಎಂಸಿಗೆ ತೆಗೆದುಕೊಂಡು ಹೋದರೆ 17 ಕೆಜಿ ಬಾಕ್ಸ್​ಗೆ ಕೇವಲ 3 ರೂಪಾಯಿ ಕೇಳುತ್ತಾರೆ. ಈ ಕಾರಣ ಜನರಿಗೆ ಟೊಮ್ಯಾಟೊವನ್ನು ಉಚಿತವಾಗಿ ಹಂಚುತ್ತಿದ್ದಾರೆ. 10 ಎಕರೆ ಟೊಮ್ಯಾಟೊ ಬೆಳೆಯುವುದಕ್ಕೆ ಸುಮಾರು 10 ಲಕ್ಷ ಹಣವನ್ನು ಖರ್ಚು ಮಾಡಿದ್ದರು. ಟೊಮ್ಯಾಟೊಗೆ ಸರಿಯಾದ ಬೆಲೆ ಸಿಗದಿದ್ದರಿಂದ ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ.

ಬೆಂಬಲ ಬೆಲೆ ನೀಡಲು ಟೊಮ್ಯಾಟೊ ಬೆಳೆಗಾರರ ಆಗ್ರಹ ಕೊರೊನಾ ತಡೆಗೆ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಯಾದ ಹಿನ್ನೆಲೆ ಟೊಮ್ಯಾಟೊಗೆ ಸೂಕ್ತ ಬೆಲೆ ಸಿಗದೆ ರಾಜ್ಯದ ಬಹುತೇಕ ಎಲ್ಲ ರೈತರು ಕಂಗಾಲಾಗಿದ್ದಾರೆ. ರೈತರು ಕೈಗೆ ಬಂದ ಬೆಳೆ, ಬೆಲೆ ಸಿಗದೆ ಟೊಮ್ಯಾಟೊ ಬೆಳೆಯನ್ನು ನಾಶ ಮಾಡುತ್ತಿದ್ದಾರೆ. ಹೀಗಾಗಿ ಬೆಂಬಲ ಬೆಲೆ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಟೊಮ್ಯಾಟೊ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.

ಶೇಂಗಾ ಬೆಳೆದ ರೈತರ ಗೋಳಾಟ ಗದಗ: ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಶೇಂಗಾ ಬೆಳೆದ ರೈತರು ಗೋಳಾಟ ಅನುಭವಿಸುತ್ತಿದ್ದಾರೆ. 10 ಸಾವಿರ ರೂಪಾಯಿಗೆ ಒಂದು ಕ್ವಿಂಟಾಲ್ ಶೇಂಗಾ ಬೀಜ ತಂದು ಬಿತ್ತನೆ ಮಾಡಿದ್ದರು. ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ವ್ಯವಸ್ಥೆ ಇಲ್ಲ. ಇಲ್ಲೇ ಮಾರಾಟ ಮಾಡೋಣ ಎಂದರೆ ಬಾಯಿಗೆ ಬಂದ ರೇಟ್ ಕೇಳುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ ರೈತರು ಸರ್ಕಾರ ನಮ್ಮ ನೆರವಿಗೆ ಧಾವಿಸಬೇಕು ಅಂತ ಒತ್ತಾಯಿಸಿದ್ದಾರೆ.

ಇದನ್ನೂ ಓದಿ

ಕಳೆದೊಂದು ವರ್ಷದಿಂದ ದೇಶದಲ್ಲಿ ಕಂಡುಬಂದ ಒಟ್ಟು ಕೊರೊನಾ ಸೋಂಕಿತರ ಶೇ.27ರಷ್ಟು ಪಾಲು ಮೇ ತಿಂಗಳ 21 ದಿನದಲ್ಲಿ ಪತ್ತೆ

ಮಹಿಳಾ ತಂಡದ ಕೋಚ್ ವಿವಾದ: ರಾಮನ್ ಕೈಬಿಟ್ಟಿದ್ದಕ್ಕೆ ಅಸಮಾಧಾನ ಹೊರಹಾಕಿದ ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ

(Farmer are offering tomatoes for free because not get reasonable prices)

Follow us on

Related Stories

Most Read Stories

Click on your DTH Provider to Add TV9 Kannada