ರಾಮನಗರ: ಅನಾಮಧೇಯ ಪೋನ್ ಕಾಲ್ನಿಂದ ಮದುವೆ ಮುರಿದು ಬಿದ್ದ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ಗ್ರಾಮವೊಂದರಲ್ಲಿ ನಿನ್ನೆ ನಡೆದಿದೆ. ಆದ್ರೆ, ಅದೇ ವಧುವಿಗೆ ಇಂದು ಬೆಳಗ್ಗೆ ಮತ್ತೊಬ್ಬ ಹುಡುಗನೊಂದಿಗೆ ಮದುವೆ ನೆರವೇರಿದೆ. ಅತ್ತ, ತನ್ನ ಮದುವೆ ನಡೆಯಲಿಲ್ಲವಲ್ಲಾ ಎಂದು ವರ ಕಂಗಾಲಾಗಿದ್ದಾನೆ.
ಮದುವೆ ಗಂಡಿಗೆ ಮದುವೆಯಾಗಿದೆ, ಮಕ್ಕಳೂ ಇವೆಯಂತೆ!
ನಿನ್ನೆ ಮದ್ವೆಯ ದಿನ ಏನಾಯಿತೆಂದ್ರೆ ಹೆಣ್ಣಿನ ಮನೆಯವರಿಗೆ ಅನಾಮಧೇಯ ಪೋನ್ ಕಾಲ್ ಬಂದಿದೆ. ಈ ಒಂದು ಕಾಲ್ನಿಂದ ನಿನ್ನೆ ನಡೆಯಬೇಕಿದ್ದ ಮುದುವೆ ಮುರಿದು ಬಿದ್ದಿದೆ. ಅನಾಮಧೇಯ ಪೋನ್ ಕಾಲ್ನಲ್ಲಿ ಮಾತನಾಡಿದ ವ್ಯಕ್ತಿ ಈಗಾಗಲೇ ಮದುವೆ ಗಂಡಿಗೆ ಮದುವೆಯಾಗಿದೆ ಮತ್ತು ಮಕ್ಕಳು ಸಹ ಇವೆ ಎಂದು ಹೇಳಿದ್ದಾರೆ.
ನಿನ್ನೆ ಸಾಯಂಕಾಲ ಚನ್ನಪಟ್ಟಣ ತಾಲೂಕಿನ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ನಡೆಯಬೇಕಿದ್ದ ಅರತಕ್ಷತೆ ಈ ದೂರವಾಣಿ ಕರೆಯಿಂದ ನಿಂತು ಹೋಗಿದೆ. ಆರು ತಿಂಗಳ ಹಿಂದೆ ಚನ್ನಪಟ್ಟಣ ನಗರದ ಎಲೆಕೇರಿ ಬಡಾವಣೆಯ ಭಾಗ್ಯಶ್ರೀ ಹಾಗೂ ಎಲೀಯೂರು ಗ್ರಾಮದ ಬಸವರಾಜುಗೆ ನಿಶ್ಚಿತಾರ್ಥ ನಡೆದಿತ್ತು.
ಅದರಂತೆ ನಿನ್ನೆ ಸಾಯಂಕಾಲ ಮದುವೆ ನಡೆಯಬೇಕಿತ್ತು. ದೂರವಾಣಿ ಕರೆಯಂತೆ ಅಂತಿಮವಾಗಿ ಹೆಣ್ಣಿನ ಮನೆಯವರು ಮದುವೆಯನ್ನು ನಿರಾಕರಿಸಿದ್ದಾರೆ. ಆದರೆ ಇಂದು ಬೇರೊಬ್ಬ ವರ ಆನಂದ್ ಎಂಬುವವನೊಂದಿಗೆ ಮದುವೆ ನಡೆದಿದೆ.
ಈ ಪ್ರಕರಣ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ವರ ಬಸವರಾಜು ತನ್ನ ಮೇಲಿರುವ ಆರೋಪವನ್ನು ಸಾಬೀತು ಪಡಿಸುವಂತೆ ಪಟ್ಟು ಹಿಡಿದಿದ್ದಾರೆ. ಮಧ್ಯರಾತ್ರಿಯವರೆಗೆ ಠಾಣೆಯಲ್ಲಿ ಈ ಹೈಡ್ರಾಮ ನಡೆದಿದೆ.
Published On - 10:34 am, Fri, 22 November 19