ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಅರ್ಚಕರ ಸಮುದಾಯ, ಸರ್ಕಾರದಿಂದ ಪರಿಹಾರಕ್ಕಾಗಿ ಮನವಿ

|

Updated on: May 19, 2021 | 9:39 AM

ಕಳೆದ 2 ತಿಂಗಳಿಂದ ದೇಗುಲಗಳತ್ತ ಜನರು ಬರುತ್ತಿಲ್ಲ. ಆದ್ರೂ ಸಂಪ್ರದಾಯದಂತೆ ನಾವು ಪೂಜೆ ಸಲ್ಲಿಸುತ್ತಿದ್ದೇವೆ. ಇದರಿಂದ ಬಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ನಮ್ಮ ಬಳಿ ಆಸ್ಪತ್ರೆಗಳಿಗೆ ಹೋಗುವುದಕ್ಕೂ ಹಣ ಇಲ್ಲ. ಕನಿಷ್ಠ ಆಹಾರ ಕಿಟ್‌ಗಳನ್ನು ಕೂಡ ಯಾರೂ ನೀಡ್ತಿಲ್ಲ. ಹಲವು ಬಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅರ್ಚಕರು ನೋವು ತೋಡಿಕೊಂಡಿದ್ದಾರೆ.

ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಅರ್ಚಕರ ಸಮುದಾಯ, ಸರ್ಕಾರದಿಂದ ಪರಿಹಾರಕ್ಕಾಗಿ ಮನವಿ
ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದ ಅರ್ಚಕರ ಸಮುದಾಯ
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಲಾಕ್ಡೌನ್ನಿಂದ ಕೆಲಸ ಕಾರ್ಯಗಳಿಲ್ಲದೆ ಊಟಕ್ಕೂ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಲಾಕ್‌ಡೌನ್‌ನಿಂದ ರಾಜ್ಯದ 35,000 ದೇಗುಲಗಳ ಅರ್ಚಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.

ಕಳೆದ 2 ತಿಂಗಳಿಂದ ದೇಗುಲಗಳತ್ತ ಜನರು ಬರುತ್ತಿಲ್ಲ. ಆದ್ರೂ ಸಂಪ್ರದಾಯದಂತೆ ನಾವು ಪೂಜೆ ಸಲ್ಲಿಸುತ್ತಿದ್ದೇವೆ. ಇದರಿಂದ ಬಾರಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ನಮ್ಮ ಬಳಿ ಆಸ್ಪತ್ರೆಗಳಿಗೆ ಹೋಗುವುದಕ್ಕೂ ಹಣ ಇಲ್ಲ. ಕನಿಷ್ಠ ಆಹಾರ ಕಿಟ್‌ಗಳನ್ನು ಕೂಡ ಯಾರೂ ನೀಡ್ತಿಲ್ಲ. ಹಲವು ಬಾರಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅರ್ಚಕರು ನೋವು ತೋಡಿಕೊಂಡಿದ್ದಾರೆ.

ಒಂದು ವರ್ಷಕ್ಕೆ 48 ಸಾವಿರ ರೂ. ಹಣ ನೀಡುತ್ತಾರೆ. ಇದರಿಂದ ನಾವು ಹೇಗೆ ಜೀವನ ಮಾಡೋದೆಂದು ಅರ್ಚಕರೊಬ್ಬರು ಪ್ರಶ್ನೆ ಮಾಡಿದ್ದಾರೆ. ನಮಗೂ ಸಿಎಂ ಪ್ಯಾಕೇಜ್ ಘೋಷಿಸಿದ್ದರೆ ಒಳ್ಳೆಯದು ಎಂದು ಅಖಿಲ ಕರ್ನಾಟಕ ಹಿಂದೂ ದೇಗುಲಗಳ ಅರ್ಚಕರ ಸಂಘದಿಂದ ಮನವಿ ಮಾಡಿಕೊಂಡಿದ್ದಾರೆ. ಅರ್ಚಕರ ಸಂಘದ ಮುಖ್ಯ ಕಾರ್ಯದರ್ಶಿ ಎಸ್.ಕೆ.ಎನ್‌ ಧೀಕ್ಷಿತ್ ಹಾಗೂ ಸಹ ಕಾರ್ಯದರ್ಶಿ ವೇದ ಭ್ರಹ್ಮಶ್ರೀ ಉಮೇಶ್ ಶರ್ಮಾ ಈಗಾಗಲೇ ಮುಜರಾಯಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಕೂಡಾ ಬರೆದು ಮನವಿ ಮಾಡಿಕೊಂಡಿದ್ದಾರೆ. ಆದರೆ ಇರುವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅರ್ಚಕರು ಸಂಕಷ್ಟದಲ್ಲಿದ್ದಾರೆ.

ಇದನ್ನೂ ಓದಿ: ಕೊವಿಡ್ ಕೇರ್ ಸೆಂಟರ್​ನಲ್ಲಿ ಸುಗಮ ಸಂಗೀತ ಕಾರ್ಯಕ್ರಮ.. ಹಾಡು ಕೇಳಿ ನೋವು ಮರೆತ ಸೋಂಕಿತರು