ಈಗಲ್ಟನ್ ರೆಸಾರ್ಟ್​ನಿಂದ ಸರ್ಕಾರಕ್ಕೆ 980 ಕೋಟಿ ಹಣ ಬರಬೇಕು: ಹೆಚ್.ಕೆ ಪಾಟೀಲ್

|

Updated on: Feb 04, 2020 | 4:51 PM

ರಾಮನಗರ: ರಾಜಕೀಯ ಬಲ್ಲ ಎಳೇ ಮಗುವಿಗೂ ಈಗಲ್ಟನ್ ರೆಸಾರ್ಟ್ ಗೊತ್ತು. ಅದರ ಕುಖ್ಯಾತಿ ನಾಡಿನುದ್ದಗಲಕ್ಕೂ ಹರಡಿದೆ. ಈ ಮಧ್ಯೆ ಈಗಲ್ಟನ್ ರೆಸಾರ್ಟ್​ನಿಂದ ಸರ್ಕಾರಕ್ಕೆ ಎಷ್ಟು ಹಣ ಬರಬೇಕು ಎಂಬುದನ್ನು ಕಾಂಗ್ರೆಸ್​ನ ಹಿರಿಯ ನಾಯಕರಾದ ಹೆಚ್.ಕೆ ಪಾಟೀಲರೇ ಹೇಳಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್​ವರೆಗೂ ಹೋಗಿದೆ. ಆದರೂ ಸರ್ಕಾರಕ್ಕೆ ಒಂದು ರೂಪಾಯಿ ಬಂದಿಲ್ಲ ಎಂದು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲರೇ ಮಾಹಿತಿ ನೀಡಿದ್ದಾರೆ. ಈಗಲ್ಟನ್ ರೆಸಾರ್ಟ್ ಒಟ್ಟು 508 ಎಕರೆ ಪ್ರದೇಶದಲ್ಲಿ ಇದೆ. ಅದರಲ್ಲಿ 208 […]

ಈಗಲ್ಟನ್ ರೆಸಾರ್ಟ್​ನಿಂದ ಸರ್ಕಾರಕ್ಕೆ 980 ಕೋಟಿ ಹಣ ಬರಬೇಕು: ಹೆಚ್.ಕೆ ಪಾಟೀಲ್
Follow us on

ರಾಮನಗರ: ರಾಜಕೀಯ ಬಲ್ಲ ಎಳೇ ಮಗುವಿಗೂ ಈಗಲ್ಟನ್ ರೆಸಾರ್ಟ್ ಗೊತ್ತು. ಅದರ ಕುಖ್ಯಾತಿ ನಾಡಿನುದ್ದಗಲಕ್ಕೂ ಹರಡಿದೆ. ಈ ಮಧ್ಯೆ ಈಗಲ್ಟನ್ ರೆಸಾರ್ಟ್​ನಿಂದ ಸರ್ಕಾರಕ್ಕೆ ಎಷ್ಟು ಹಣ ಬರಬೇಕು ಎಂಬುದನ್ನು ಕಾಂಗ್ರೆಸ್​ನ ಹಿರಿಯ ನಾಯಕರಾದ ಹೆಚ್.ಕೆ ಪಾಟೀಲರೇ ಹೇಳಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್​ವರೆಗೂ ಹೋಗಿದೆ. ಆದರೂ ಸರ್ಕಾರಕ್ಕೆ ಒಂದು ರೂಪಾಯಿ ಬಂದಿಲ್ಲ ಎಂದು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಹೆಚ್.ಕೆ ಪಾಟೀಲರೇ ಮಾಹಿತಿ ನೀಡಿದ್ದಾರೆ.

ಈಗಲ್ಟನ್ ರೆಸಾರ್ಟ್ ಒಟ್ಟು 508 ಎಕರೆ ಪ್ರದೇಶದಲ್ಲಿ ಇದೆ. ಅದರಲ್ಲಿ 208 ಎಕರೆ 33 ಗುಂಟೆ ಭೂಮಿ ಸರ್ಕಾರದ್ದು. ಈ ವಾಜ್ಯ ಸುಪ್ರೀಂ ಕೋರ್ಟ್ ವರೆಗೂ ಹೋಗಿದೆ. ಈ ವಿಚಾರವಾಗಿ ಕ್ಯಾಬಿನೆಟ್ ಕಮಿಟಿ, ಸಬ್ ಕಮಿಟಿ ಕೂಡ ನೇಮಕವಾಗಿದೆ. ಇದರಲ್ಲಿ 28 ಎಕರೆ ಭೂಮಿಯನ್ನ ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಅಲ್ಲಿರುವ 77 ಎಕರೆ ಭೂಮಿಗೆ 980 ಕೋಟಿ ಹಣವನ್ನು ಕಟ್ಟಬೇಕಿತ್ತು. ಆದ್ರೆ ಅವರು ಹಣವನ್ನು ಕಟ್ಟಿಲ್ಲ. ಈ ಕುರಿತು ಕೋರ್ಟ್ ಗೆ ಹೋಗಿದ್ದಾರೆ.

ಉಳಿಕೆ ಸರ್ಕಾರಿ ಭೂಮಿ ಕೂಡ ಇದೆ. 28 ಎಕರೆ ವೀಕ್ಷಣೆ ಮಾಡಲಾಗಿದೆ. ಆದ್ರೆ ಅದು ಸರ್ಕಾರಿ ಭೂಮಿ ಎಂದು ಬೋರ್ಡ್ ಹಾಕಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಳಿಕೆ ಭೂಮಿಯನ್ನು ವಶಕ್ಕೆ ಪಡೆಯಲು ಕಾನೂನಾತ್ಮಕವಾಗಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಕಾನೂನನ್ನ ಗಾಳಿಗೆ ತೂರಿ ಜಮೀನನ್ನ ಒತ್ತುವರಿ ಮಾಡಿದ್ದಾರೆ. ಆಡಳಿತ ವ್ಯವಸ್ಥೆ ಕುಸಿಯುವಂತೆ ಮಾಡಿದ್ದಾರೆ. ಕಂದಾಯ ಇಲಾಖೆ ಸುಪ್ರಿಂ ಕೋರ್ಟ್ ಗೆ ಸಲ್ಲಿಸಿರುವ ದಾಖಲೆಯಲ್ಲಿ 208 ಎಕರೆ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಿದೆ.

Published On - 4:16 pm, Tue, 4 February 20