ಸಿದ್ದಗಂಗಾ ಮಠದ ಊಟಕ್ಕೂ ಸರ್ಕಾರದಿಂದ ಕತ್ತರಿ!
ಬೆಂಗಳೂರು: ಸಿದ್ದಗಂಗಾ ಮಠದ ಊಟಕ್ಕೂ ರಾಜ್ಯ ಬಿಜೆಪಿ ಸರ್ಕಾರ ಬ್ರೇಕ್ ಹಾಕಿದೆ. ದಾಸೋಹ ಯೋಜನೆ ಅಡಿ ಸಿದ್ಧಗಂಗಾ ಮಠಕ್ಕೆ ನೀಡುತ್ತಿದ್ದ ಅಕ್ಕಿ, ಗೋಧಿ ಪೂರೈಕೆ ಕಳೆದ ಮೂರು ತಿಂಗಳಿಂದ ನಿಂತಿದೆ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ದಾಖಲೆಗಳನ್ನ ರಿಲೀಸ್ ಮಾಡಿದ್ದಾರೆ. ದಾಸೋಹ ಯೋಜನೆ ಅಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಸಿದ್ದಗಂಗಾ ಮಠದ 7,359 ವಿದ್ಯಾರ್ಥಿಗಳ ಊಟಕ್ಕೆ 73590 ಕೆಜಿ ಅಕ್ಕಿ, 36795 ಕೆಜಿ ಗೋಧಿ ಪೂರೈಕೆಯಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಆಹಾರ […]
ಬೆಂಗಳೂರು: ಸಿದ್ದಗಂಗಾ ಮಠದ ಊಟಕ್ಕೂ ರಾಜ್ಯ ಬಿಜೆಪಿ ಸರ್ಕಾರ ಬ್ರೇಕ್ ಹಾಕಿದೆ. ದಾಸೋಹ ಯೋಜನೆ ಅಡಿ ಸಿದ್ಧಗಂಗಾ ಮಠಕ್ಕೆ ನೀಡುತ್ತಿದ್ದ ಅಕ್ಕಿ, ಗೋಧಿ ಪೂರೈಕೆ ಕಳೆದ ಮೂರು ತಿಂಗಳಿಂದ ನಿಂತಿದೆ ಎಂದು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ದಾಖಲೆಗಳನ್ನ ರಿಲೀಸ್ ಮಾಡಿದ್ದಾರೆ.
ದಾಸೋಹ ಯೋಜನೆ ಅಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಸಿದ್ದಗಂಗಾ ಮಠದ 7,359 ವಿದ್ಯಾರ್ಥಿಗಳ ಊಟಕ್ಕೆ 73590 ಕೆಜಿ ಅಕ್ಕಿ, 36795 ಕೆಜಿ ಗೋಧಿ ಪೂರೈಕೆಯಾಗುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ಆಹಾರ ಧಾನ್ಯಗಳು ಪೂರೈಕೆಯಾಗಿಲ್ಲ. ದಾಸೋಹ ಯೋಜನೆ ಅಡಿ ಮಠಗಳಿಗೆ ನೀಡುತ್ತಿದ್ದ ಅಕ್ಕಿಗೂ ಬಿಜೆಪಿ ಸರ್ಕಾರ ಕತ್ತರಿ ಹಾಕಿದೆ ಎಂದು ಸಚಿವ ಯು.ಟಿ.ಖಾದರ್ ವಾಗ್ದಾಳಿ ನಡೆಸಿದ್ದಾರೆ. https://www.facebook.com/Tv9Kannada/videos/198413521219704/
Published On - 3:53 pm, Tue, 4 February 20