ವಿಚಾರಣೆಗಾಗಿ ಡಿಕೆಶಿ ಪುತ್ರಿ ಐಶ್ವರ್ಯಾಗೂ ಇ.ಡಿ ಬುಲಾವ್​

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾಗೂ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದು, ಸೆಪ್ಟೆಂಬರ್​ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತನ್ನ ಮಗಳ ಹೆಸರಲ್ಲಿ ಸುಮಾರು ಕೋಟಿ ಆಸ್ತಿ ಮಾಡಿಟ್ಟಿದ್ದಾರೆ. ಅಲ್ಲದೆ ಡಿಕೆಶಿ ಪುತ್ರಿಯ ಅಕೌಂಟ್​ನಿಂದ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ. ಐಶ್ವರ್ಯಾ ಖಾತೆಯಿಂದ ಮೊದಲು ಕೆಫೆ ಕಾಫಿ ಡೇ ಮತ್ತು ಸೋಲ್​ ಸ್ಪೇಸ್​ ಕಂಪನಿಗೆ 20 ಕೋಟಿ ಹಣ ವರ್ಗಾವಣೆಯಾಗಿದೆ. ಬಳಿಕ ಕಾಫಿ […]

ವಿಚಾರಣೆಗಾಗಿ ಡಿಕೆಶಿ ಪುತ್ರಿ ಐಶ್ವರ್ಯಾಗೂ ಇ.ಡಿ ಬುಲಾವ್​
ಸಾಧು ಶ್ರೀನಾಥ್​

Updated on: Sep 11, 2019 | 5:12 PM

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯಾಗೂ ಇಡಿ ಅಧಿಕಾರಿಗಳು ಸಮನ್ಸ್​ ನೀಡಿದ್ದು, ಸೆಪ್ಟೆಂಬರ್​ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ತನ್ನ ಮಗಳ ಹೆಸರಲ್ಲಿ ಸುಮಾರು ಕೋಟಿ ಆಸ್ತಿ ಮಾಡಿಟ್ಟಿದ್ದಾರೆ. ಅಲ್ಲದೆ ಡಿಕೆಶಿ ಪುತ್ರಿಯ ಅಕೌಂಟ್​ನಿಂದ ಕೋಟಿ ಕೋಟಿ ಹಣ ವರ್ಗಾವಣೆಯಾಗಿದೆ. ಐಶ್ವರ್ಯಾ ಖಾತೆಯಿಂದ ಮೊದಲು ಕೆಫೆ ಕಾಫಿ ಡೇ ಮತ್ತು ಸೋಲ್​ ಸ್ಪೇಸ್​ ಕಂಪನಿಗೆ 20 ಕೋಟಿ ಹಣ ವರ್ಗಾವಣೆಯಾಗಿದೆ. ಬಳಿಕ ಕಾಫಿ ಡೇ ಸಿದ್ಧಾರ್ಥರಿಂದ ಐಶ್ವರ್ಯಾ ಖಾತೆಗೆ 20 ಕೋಟಿ ರೂ. ಸಾಲ ನೀಡಲಾಗಿದೆ. ಉದ್ಯೋಗವೇ ಇಲ್ಲದ ಐಶ್ವರ್ಯಾ ಬಳಿ ಅಷ್ಟೊಂದ ಹಣ ಹೇಗೆ ಬಂತು ? ಎಂಬ ಹಲವು ಪ್ರಶ್ನೆಗಳನ್ನು ಇಡಿ ಅಧಿಕಾರಿಗಳು ಐಶ್ವರ್ಯಾರನ್ನು ಕೇಳಲಿದ್ದಾರೆ.

ಇನ್ನು ಇತ್ತೀಚೆಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್​ ಸಹ 20 ಕೋಟಿ ಹಣದ ವರ್ಗಾವಣೆ ಮುಚ್ಚಿಟ್ಟಿದ್ದ. ಆದರೆ ಈ ಹಣದ ದಾಖಲೆ ಸುಖಾಪುರಿ ಮನೆಯಲ್ಲಿ ಅಧಿಕಾರಿಗಳಿಗೆ ಸಿಕ್ಕಿತ್ತು. ಈ ಹಣ ವರ್ಗಾವಣೆಯೂ ಹಲವು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ಪುತ್ರಿ ಹೆಸರಲ್ಲಿ ಡಿಕೆ ಶಿವಕುಮಾರ್ ಹಣದ ವ್ಯವಹಾರ ಮಾಡಿದ್ರಾ ಎಂಬ ಅನುಮಾನ ಇಡಿ ಅಧಿಕಾರಿಗಳಿಗೆ ಕಾಡುತ್ತಿದ್ದೆ. ಹೀಗಾಗಿ ಸೆಪ್ಟಂಬರ್ 12ರಂದು ವಿಚಾರಣೆಗೆ ಹಾಜರಾಗಲು ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಮನ್ಸ್​ ನೀಡಿದ್ದಾರೆ.

Published On - 5:13 pm, Tue, 10 September 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us