
ಬೆಂಗಳೂರು: ಕಣ್ವ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿಯಿಂದ ವಂಚನೆ ನಡೆದಿರುವ ಆರೋಪ ಪ್ರಕರಣದಲ್ಲಿ ಕಣ್ವ ನಿರ್ದೇಶಕರ ಮನೆಗಳ ಮೇಲೆ ED ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಐವರು ನಿರ್ದೇಶಕರ ಮನೆಗಳ ಮೇಲೆ ದಾಳಿ ನಡೆದಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ಸಾವಿರಾರು ಕೋಟಿ ಅಕ್ರಮ ಆರೋಪ ಎದುರಿಸುತ್ತಿರುವ ಕಣ್ವ ಗ್ರೂಪ್
ಕಣ್ವ ಗ್ರೂಪ್ ಕಂಪನಿಯಿಂದ ಹಲವು ಭೂಮಿ ಖರೀದಿಯಲ್ಲಿ ವಂಚನೆ ಆರೋಪ ಕೇಳಿಬಂದಿದ್ದು, ಬೆಂಗಳೂರಿನ ಹಲವು ಕಡೆ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲಿಸುತ್ತಿದ್ದಾರೆ.