ಸಾರ್​, ಯಾವುದೇ ಕಾರಣಕ್ಕೂ ಕ್ಲಾಸ್​ಗಳನ್ನ ನಿಲ್ಲಿಸಬೇಡಿ -ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿಯರ ಬಿನ್ನಹ

ಎಲ್ಲ ಕಡೆ ಮಕ್ಕಳು ತರಗತಿಗೆ ಬಂದು ಶಿಕ್ಷಕರಿಂದ ಪಾಠ ಕೇಳಬೇಕೆಂಬ ತುಡಿತ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ತರಗತಿಗಳನ್ನು ನಿಲ್ಲಿಸಬೇಡಿ ಎಂದೂ ಸಹ ಮನವಿ ಮಾಡಿರುವ ಸಂಗತಿಗಳೂ ನಡೆದಿವೆ.

ಸಾರ್​, ಯಾವುದೇ ಕಾರಣಕ್ಕೂ ಕ್ಲಾಸ್​ಗಳನ್ನ ನಿಲ್ಲಿಸಬೇಡಿ -ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿಯರ ಬಿನ್ನಹ
‘ಸಾರ್​.. ಯಾವುದೇ ಕಾರಣಕ್ಕೂ ಕ್ಲಾಸ್​ಗಳನ್ನು ನಿಲ್ಲಿಸಬೇಡಿ’

Updated on: Jan 02, 2021 | 10:26 PM

ಬೆಂಗಳೂರು: ಕಳೆದ 4 ದಿನಗಳಿಂದ ನಾನು ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿದ್ದೇನೆ. ನಿನ್ನೆ ಮತ್ತು ಇಂದು ಶಾಲಾ ಕಾಲೇಜುಗಳಲ್ಲಿ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಮಾತನಾಡಿಸಿದ್ದೇನೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ.

ಎಲ್ಲ ಕಡೆ ಶಾಲೆ-ಕಾಲೇಜುಗಳು ಪ್ರಾರಂಭವಾಗಿರುವ ಬಗ್ಗೆ ಒಳ್ಳೆಯ ಬೆಂಬಲ ಹಾಗೂ ಸಂತಸ ಕಂಡುಬರುತ್ತಿದೆ. ಆದರೆ, ಆಗಲೇ ಜೊತೆ ಜೊತೆಗೆ ಮತ್ತೆ ಆತಂಕ ಉಂಟುಮಾಡುವ ಸುದ್ದಿಗಳೂ ಪ್ರಕಟವಾಗುತ್ತಿವೆ. ನಿನ್ನೆ ಇಂದ ತಾನೇ ನಮ್ಮ SSLC ಮತ್ತು ಎರಡನೇ PUC ತರಗತಿಗಳು ಹಾಗೂ ವಿದ್ಯಾಗಮ ಕಾರ್ಯಕ್ರಮಗಳು ಪ್ರಾರಂಭವಾಗಿದೆ. ಆಗಲೇ ಇಂದು ಶಾಲೆಗಳಲ್ಲಿ ಕೊರೊನಾ ಹರಡುತ್ತಿದೆ ಎಂದು ಅರ್ಥವಾಗುವಂತೆ ಸುದ್ದಿಗಳು ಬರುತ್ತಿದೆ ಎಂದು ಸುರೇಶ್​ ಕುಮಾರ್​ ಹೇಳಿದ್ದಾರೆ.

ಆದರೆ, ಎಲ್ಲ ಕಡೆ ಮಕ್ಕಳು ತರಗತಿಗೆ ಬಂದು ಶಿಕ್ಷಕರಿಂದ ಪಾಠ ಕೇಳಬೇಕೆಂಬ ತುಡಿತ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ತರಗತಿಗಳನ್ನು ನಿಲ್ಲಿಸಬೇಡಿ ಎಂದೂ ಸಹ ಮನವಿ ಮಾಡಿರುವ ಸಂಗತಿಗಳೂ ನಡೆದಿವೆ. ಅದರಲ್ಲಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ಇದು ಅತ್ಯಂತ ಅಗತ್ಯವಾಗಿರುವುದು ಕಂಡುಬರುತ್ತಿದೆ.

ಹಾಗಾಗಿ, ನಾವೆಲ್ಲರೂ ಈ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ಇಡೋಣ. ಇವರಿಗೆ ಶಿಕ್ಷಣ ದೊರಕದಿದ್ದರೆ ಇವರ ಬಾಳು ಎತ್ತ ಸಾಗುತ್ತದೋ ನಮಗೆ ತಿಳಿಯದು. ಗ್ರಾಮೀಣ ಭಾಗದಲ್ಲಿ ಬಾಲಕಾರ್ಮಿಕ, ಬಾಲ್ಯ ವಿವಾಹದ ಪ್ರಸಂಗಗಳು ಹೆಚ್ಚಾಗುವುದು ಸಮಾಜಕ್ಕೆ ಒಳಿತಲ್ಲ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದಾರೆ. ಹಾಗಾಗಿ, ಇವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಡಕಾಗದಂತೆ ಕಾಳಜಿ ವಹಿಸೋಣ ಎಂದು ಹೇಳಿದ್ದಾರೆ.

ಮೈಸೂರು ವಿ.ವಿಯ ಬಿ.ಎಡ್​ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ: ಪರೀಕ್ಷಾ ಶುಲ್ಕ ಕಡಿತಗೊಳಿಸಿದ ಆಡಳಿತ ಮಂಡಳಿ