ಅಂಗಡಿ ಮಾಲೀಕರಿಗೆ ಸಿಹಿ ಸುದ್ದಿ: ರಾಜ್ಯದಲ್ಲಿ ದಿನದ 24 ಗಂಟೆ ಅಂಗಡಿ, ಮಳಿಗೆ ತೆರೆಯಲು ಅವಕಾಶ
ರಾಜ್ಯದಲ್ಲಿ ದಿನದ 24 ಗಂಟೆ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿ ರಾಜ್ಯ ಸರ್ಕಾರದಿಂದ ಆದೇಶ ಪ್ರಕಟವಾಗಿದೆ.
ಬೆಂಗಳೂರು: ರಾಜ್ಯದಲ್ಲಿ ದಿನದ 24 ಗಂಟೆ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿ ರಾಜ್ಯ ಸರ್ಕಾರದಿಂದ ಆದೇಶ ಪ್ರಕಟವಾಗಿದೆ.
10ಕ್ಕಿಂತ ಹೆಚ್ಚು ಕೆಲಸಗಾರರು ಇರುವ ಅಂಗಡಿಗಳಿಗೆ ಈ ಅನುಮತಿ ನೀಡಲಾಗಿದೆ. ರಾತ್ರಿ 8 ಗಂಟೆವರೆಗೆ ಮಳಿಗೆಗಳಲ್ಲಿ ಮಹಿಳೆಯರು ಕೆಲಸ ಮಾಡಲು ಅವಕಾಶ ಸಹ ಕಲ್ಪಿಸಲಾಗಿದ್ದು ಅಂಗಡಿ, ಮಳಿಗೆಗಳಲ್ಲಿ ಸ್ತ್ರೀಯರ ಸುರಕ್ಷತೆಗೆ ಒತ್ತು ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ವಾರದ 7 ದಿನ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಪ್ರಕಟಿಸಿದೆ. ಲಾಕ್ಡೌನ್ ವೇಳೆ ಉಂಟಾಗಿರುವ ನಷ್ಟವನ್ನು ಸರಿದೂಗಿಸಿಕೊಳ್ಳಲು ದಿನದ 24 ಗಂಟೆ ಅಂಗಡಿ, ಮಳಿಗೆಗಳನ್ನು ತೆರೆಯಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಇದಲ್ಲದೆ, ಎಲ್ಲಾ ನೌಕರರಿಗೂ ವಾರದಲ್ಲಿ ಒಂದು ದಿನ ರಜೆ ನೀಡಬೇಕು. ಈ ಆದೇಶ ಮುಂದಿನ 3 ವರ್ಷಗಳವರೆಗೆ ಜಾರಿಯಲ್ಲಿರಲಿದೆ. ಜೊತೆಗೆ, ಸರ್ಕಾರದ ಆದೇಶ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು. ಗ್ರಾಹಕರು, ಅಧಿಕಾರಿಗಳಿಗೆ ಆದೇಶದ ಪ್ರತಿ ಕಾಣುವಂತಿರಬೇಕು ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ಮುಂದೆ ಕೇವಲ 10 ರೂಪಾಯಿಗೆ.. ಮೆಜೆಸ್ಟಿಕ್ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ!
Published On - 11:13 pm, Sat, 2 January 21