ಇನ್ಮುಂದೆ ಕೇವಲ 10 ರೂಪಾಯಿಗೆ.. ಮೆಜೆಸ್ಟಿಕ್​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ!

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೊದಲ ರೈಲು ಮುಂಜಾನೆ 4.45ಕ್ಕೆ ಸಂಚಾರ ಆರಂಭಿಸಲಿದೆ.ರಾತ್ರಿ 9 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಇನ್ನು, ಕೆಂಪೇಗೌಡ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ಬರಲು ಕೂಡ ರೈಲು ವ್ಯವಸ್ಥೆ ಇರಲಿದೆ.

ಇನ್ಮುಂದೆ ಕೇವಲ 10 ರೂಪಾಯಿಗೆ.. ಮೆಜೆಸ್ಟಿಕ್​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿ!
ಕೆಂಪೇಗೌಡ ವಿಮಾನ ನಿಲ್ದಾಣ
Rajesh Duggumane

|

Jan 02, 2021 | 10:18 PM

ಬೆಂಗಳೂರು: ನಗರದ ಹೃದಯಭಾಗ ಮೆಜೆಸ್ಟಿಕ್​ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ಕನಿಷ್ಠ ಎರಡು ಗಂಟೆ ಬೇಕು. ಅಷ್ಟೇ ಅಲ್ಲ, ಏರ್​ಪೋರ್ಟ್​ಗೆ ಹೋಗಲು ದೊಡ್ಡ ಮೊತ್ತವನ್ನು ಕೂಡ ತೆತ್ತಬೇಕು. ಆದರೆ, ಸೋಮವಾರದಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಏಕೆಂದರೆ, ಮೆಜೆಸ್ಟಿಕ್​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಿಶೇಷ ರೈಲು ಸೇವೆ ಲಭ್ಯವಾಗಲಿದೆ.

ಹೌದು, ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯಿರುವ ದೇವನಹಳ್ಳಿ ರೈಲ್ವೆ ನಿಲ್ದಾಣವನ್ನು ಅಭಿವೃದ್ಧಿ ಮಾಡಲಾಗಿರುವ ಜೊತೆಗೆ ನಗರದಿಂದ ಈ ನಿಲ್ದಾಣಕ್ಕೆ ಓಡಾಡುವ ರೈಲುಗಳ ಸಂಖ್ಯೆಯನ್ನು ಸಹ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲ, ಈ ರೈಲು ಪ್ರಯಾಣಕ್ಕೆ ತೆರಬೇಕಾದ ಮೊತ್ತ ತೀರಾ ಅಗ್ಗವಾಗಿದ್ದು ಕೇವಲ 10-15 ರೂಪಾಯಿಗೆ ಪ್ರಯಾಣಿಕರು ನಗರದಿಂದ ಏರ್​ಪೋರ್ಟ್​ ತಲುಪಬಹುದಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೊದಲ ರೈಲು ಮುಂಜಾನೆ 4.45ಕ್ಕೆ ಸಂಚಾರ ಆರಂಭಿಸಲಿದೆ. ರಾತ್ರಿ 9 ಗಂಟೆಗೆ ಕೊನೆಯ ರೈಲು ಹೊರಡಲಿದೆ. ಜೊತೆಗೆ, ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರಲು ಕೂಡ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕೇವಲ ಪ್ರಯಾಣಿಕರಲ್ಲದೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಹ ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗಲಿದೆ. ಏಕೆಂದರೆ, ನಗರ ಭಾಗದಿಂದ ಅವರಿಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಲು ನಿತ್ಯ 2ರಿಂದ 4 ಗಂಟೆ ವ್ಯಯ ಮಾಡುತ್ತಿದ್ದಾರೆ. ಅಲ್ಲದೆ, ಹೆಚ್ಚು ಹಣವನ್ನು ಕೂಡ ಖರ್ಚು ಮಾಡುತ್ತಿದ್ದಾರೆ. ಹೀಗಾಗಿ, ಅವರ ದಿನನಿತ್ಯದ ಸಮಸ್ಯೆಗೆ ಈಗ ಪರಿಹಾರ ಸಿಕ್ಕಂತಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅತ್ಯಾಧುನಿಕ ರನ್​ ವೇ ಲೋಕಾರ್ಪಣೆ; ಇನ್ಮುಂದೆ ಇರಲ್ಲ ಮಂಜಿನ ಕಾಟ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada