ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು; ಕಂಗಾಲಾದ ಮೈಸೂರಿನ ರೈತ

|

Updated on: May 22, 2021 | 2:59 PM

ಜಮೀನಿಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ನಾಶಪಡಿಸಿದ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೆ ಹೆಗುಡಿಲು ಗ್ರಾಮದಲ್ಲಿ ನಡೆದಿದೆ. ಹಳೆ ಹೆಗುಡಿಲು ಗ್ರಾಮದ ರೈತನಾದ ಮಲ್ಲಿಕಾರ್ಜುನಯ್ಯ ಎಂಬುವವರು ಆನೆಗಳ ದಾಳಿಗೆ ಕಂಗಾಲಾಗಿದ್ದಾರೆ. ಕಾಡು ಪ್ರಾಣಿಗಳ ಉಪಟಳ ದಿನೇ ದಿನೇ ಜಾಸ್ತಿಯಾಗುತ್ತಿವೆ.

ಜಮೀನಿಗೆ ಲಗ್ಗೆ ಇಟ್ಟ ಕಾಡಾನೆಗಳು; ಕಂಗಾಲಾದ ಮೈಸೂರಿನ ರೈತ
ಹಾಳಾಗಿರುವ ತೆಂಗಿನ ಗಿಡ
Follow us on

ಮೈಸೂರು: ರೈತರಿಗೆ ಒಂದಲ್ಲ ಒಂದು ಸಮಸ್ಯೆ ಇದ್ದೆ ಇರುತ್ತದೆ. ಕೆಲವೊಮ್ಮೆ ಬೆಳೆ ಕೈಕೊಟ್ಟರೆ, ಇನ್ನು ಕೆಲವೊಮ್ಮೆ ಬೆಲೆ ಕೈ ಕೊಡುತ್ತದೆ. ಅತಿಯಾದ ಮಳೆಯಿಂದ ಬೆಳೆ ಹಾಳಾದರೆ, ಕೆಲವೊಮ್ಮೆ ಬಿಸಿಲಿನಿಂದ ಬೆಳೆ ಸುಟ್ಟು ಕರಕಲಾಗುತ್ತದೆ. ಈ ಎಲ್ಲ ಸಮಸ್ಯೆಗಳ ನಡುವೆ ಕಾಡು ಪ್ರಾಣಿಗಳ ಕಾಟವನ್ನು ತಪ್ಪಿಸುವುದು ರೈತರಿಗೆ ದೊಡ್ಡ ಸವಾಲಾಗಿದೆ. ಹೀಗೆ ಜಮೀನಿಗೆ ನುಗ್ಗಿದ ಆನೆಗಳು ಬೆಳೆಯನ್ನು ನಾಶ ಮಾಡಿವೆ. ಜಮೀನಿಗೆ ನುಗ್ಗಿದ ಕಾಡಾನೆಗಳು, ಸೋಲಾರ್ ತಂತಿ ತುಳಿದು ಬೆಳೆಯನ್ನು ನಾಶಪಡಿಸಿವೆ.

ಜಮೀನಿಗೆ ನುಗ್ಗಿದ ಕಾಡಾನೆಗಳು ಬೆಳೆಯನ್ನು ನಾಶಪಡಿಸಿದ ಘಟನೆ ಮೈಸೂರು ಜಿಲ್ಲೆಯ ಸರಗೂರು ತಾಲೂಕಿನ ಹಳೆ ಹೆಗುಡಿಲು ಗ್ರಾಮದಲ್ಲಿ ನಡೆದಿದೆ. ಹಳೆ ಹೆಗುಡಿಲು ಗ್ರಾಮದ ರೈತನಾದ ಮಲ್ಲಿಕಾರ್ಜುನಯ್ಯ ಎಂಬುವವರು ಆನೆಗಳ ದಾಳಿಗೆ ಕಂಗಾಲಾಗಿದ್ದಾರೆ. ಕಾಡು ಪ್ರಾಣಿಗಳ ಉಪಟಳ ದಿನೇ ದಿನೇ ಜಾಸ್ತಿಯಾಗುತ್ತಿವೆ. ಕಾಡು ಪ್ರಾಣಿಗಳು ಬಾರದಂತೆ ವ್ಯವಸ್ಥೆ ಮಾಡಿ ಅಂದರೆ ಅರಣ್ಯಾಧಿಕಾರಿಗಳು ಉಡಾಫೆಯಾಗಿ ಮಾತನಾಡುತ್ತಾರಂತೆ.

ಕಾವಲುಗಾರರು ಸರಿಯಾದ ರೀತಿಯಲ್ಲಿ ಕಾವಲು ಕಾಯುತ್ತಿಲ್ಲ. ಕಾವಲುಗಾರರಿಗೆ ಕೇಳಿದರೆ ನಾನೇನು ಮಾಡಕ್ಕೆ ಆಗುತ್ತೆ ಅಂತ ಹೇಳುತ್ತಾರಂತೆ. ನಮ್ಮ ಜಮೀನಿನಲ್ಲಿ ಹತ್ತಿ, ಚಂಡು ಹೂ, ತೆಂಗು ಬೆಳೆಗಳಿವೆ. ಜಮೀನು ಕಾಡಂಚಿನಲ್ಲಿ ಇರುವುದರಿಂದ ಆನೆ, ಹಂದಿ ಇನ್ನಿತರ ಕಾಡು ಪ್ರಾಣಿಗಳಿಂದ ನಾಶವಾಗುತ್ತಿದೆ. ಕಾಡಂಚಿನಲ್ಲಿ ಟ್ರೆಂಚ್ ತೆಗೆದು ಸುಮಾರು ಐದು ವರ್ಷವಾಗಿದೆ. ಈಗ ಹೂಳು ತುಂಬಿಕೊಂಡು ಆನೆಗಳು ಸರಾಗವಾಗಿ ಬರುವಂತಾಗಿದೆ.
ಸೋಲಾರ್ ಹಾಕಿದ್ದರು ಆನೆಗಳು ಜಮೀನುಗಳತ್ತ ಲಗ್ಗೆ ಇಡುತ್ತವೆ ಎಂದು ರೈತ ತಿಳಿಸಿದರು.

3 ಚಿರತೆ ಮರಿಗಳ ಸಾವು
ಮೈಸೂರಿನ ಬೆಳವಾಡಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ 3 ಚಿರತೆ ಮರಿಗಳು ಮೃತಪಟ್ಟಿವೆ. ಗ್ರಾಮಸ್ಥರು ಚಿರತೆಗಳು ಸಾವನಪ್ಪಿರುವುದನ್ನು ಗಮನಿಸಿದ್ದಾರೆ. ಬೆಳವಾಡಿ ಗ್ರಾಮದ ಹೊರವಲಯದಲ್ಲಿ ಚಿರತೆಗಳ ಮೃತದೇಹಗಳು ಬಿದ್ದಿವೆ. ಸದ್ಯ ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಹುಲಿ ದಾಳಿಗೆ ಹೋರಿ ಬಲಿ
ಕೊಡಗು: ಹುಲಿ ದಾಳಿಗೆ ಹೋರಿ ಬಲಿಯಾಗಿರುವ ಘಟನೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶಿರಂಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಎಂ.ಸಿ.ಮಾದಪ್ಪ ಎಂಬುವರಿಗೆ ಸೇರಿದ ಹೋರಿ ಹುಲಿ ದಾಳಿಗೆ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಹುಲಿಯ ಸೆರೆಗೆ ಬೋನ್ ಅಳವಡಿಕೆ ಮಾಡಿದ್ದಾರೆ. ಜೊತೆಗೆ ಎಚ್ಚರದಿಂದ ಇರುವಂತೆ ಜನರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಇದನ್ನೂ ಓದಿ

ಲಾಕ್​ಡೌನ್​ ಇದ್ದರೂ ಸರ್ಕಾರಿ ಕಾರನ್ನು ದುರ್ಬಳಕೆ ಮಾಡಿಕೊಂಡು ಚಾಲಕನ ಓಡಾಟ; ಕಾರನ್ನು ವಶಕ್ಕೆ ಪಡೆದ ಕಲಬುರಗಿ ಪೊಲೀಸರು

ದೇಶದಲ್ಲಿ 8,840 ಮಂದಿಗೆ ಬ್ಲ್ಯಾಕ್​ ಫಂಗಸ್​: ಪ್ರಕರಣಗಳ ಆಧಾರದ ಮೇಲೆ ರಾಜ್ಯಗಳಿಗೆ ಔಷಧ ವಿತರಣೆ, ಕರ್ನಾಟಕಕ್ಕೆ 1,270 ವಯಲ್ಸ್ ಲಭ್ಯ

(Elephants Destroyed cotton and coconut crop at mysuru)